ತಾನು ಕಲಿತ ಶಾಲೆಗೆ ನೋಟ್‌ಬುಕ್, ಪೆನ್ ಕೊಡುಗೆ ನೀಡಿದ ಇಂಜಿನಿಯರ್ ಪ್ರಮೋದ ರಾಯನಗೌಡರ

Upayuktha
0


ಹುನಗುಂದ: ತಾಲೂಕಿನ ಅಮರಾವತಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ನಾಗೇಶ ಗೌಡ ಫಕೀರ ಗೌಡ ರಾಯನಗೌಡರ ಅವರ ಸುಪುತ್ರ ಹಾಗೂ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಪ್ರಮೋದ ರಾಯನಗೌಡರ ಅವರು ತಾನು ಓದಿದ ತಿಮ್ಮಾಪುರ ಗ್ರಾಮದ ಸರ್ಕಾರಿ ಕನ್ನಡ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಉಚಿತವಾಗಿ ನೋಟ್‌ಬುಕ್, ಪೆನ್, ಪೆನ್ಸಿಲ್ ಹಾಗೂ ರಬ್ಬರ್‌ಗಳನ್ನು ಕೊಡುಗೆಯಾಗಿ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯರಿಗೆ ಕಲಿಕಾ ಸಾಮಗ್ರಿಗಳನ್ನು ಹಸ್ತಾಂತರಿಸಿದ ಬಳಿಕ, ಸರಳ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.


ಮಾದರಿ ಗುಣಕ್ಕೆ ಮೆಚ್ಚುಗೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಗುರುಗಳಾದ ಬಸವರಾಜ ಮುಂಡೆವಾಡಿ ಅವರು, "ಪ್ರಮೋದ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ತಮ್ಮ ಶಾಲೆ ಮತ್ತು ಶಿಕ್ಷಕರ ಮೇಲಿನ ಅಭಿಮಾನದಿಂದ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಇಂತಹ ಉದಾತ್ತ ಗುಣ ಎಲ್ಲರಲ್ಲೂ ಇರುವುದಿಲ್ಲ. ವಿದ್ಯಾರ್ಥಿಗಳು ಇವರನ್ನು ಆದರ್ಶವಾಗಿಟ್ಟುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಮತ್ತು ಸಮಾಜಕ್ಕೆ ನೆರವಾಗುವ ಗುಣ ಬೆಳೆಸಿಕೊಳ್ಳಬೇಕು," ಎಂದು ಕರೆ ನೀಡಿದರು.


ಅಚ್ಚುಕಟ್ಟುತನವೇ ಯಶಸ್ಸಿನ ರಹಸ್ಯ

ಪ್ರಮೋದ ಅವರ ಶಿಕ್ಷಕಿಯಾಗಿದ್ದ ಎಂ. ಬಿ. ಮನಿಯಾರ ಮಾತನಾಡಿ, "ಪ್ರಮೋದ ಅವರು ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಶಿಸ್ತಿನಿಂದ ಇರುತ್ತಿದ್ದರು. ಅವರಿಗೆ ವಹಿಸಿದ ಯಾವುದೇ ಕೆಲಸವನ್ನಾದರೂ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಆ ಶಿಸ್ತು ಮತ್ತು ಪರಿಶ್ರಮವೇ ಇಂದು ಅವರನ್ನು ಉತ್ತಮ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ರೂಪಿಸಿದೆ," ಎಂದು ಹೆಮ್ಮೆಯಿಂದ ನೆನಪಿಸಿಕೊಂಡರು.


ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದಾನಿ ಪ್ರಮೋದ ರಾಯನಗೌಡರ ಪಾಲ್ಗೊಂಡಿದ್ದರು. ಶಾಲೆಯ ಶಿಕ್ಷಕಿ ಶಾರದಾ ಹೂಲಗೇರಿ ಸ್ವಾಗತಿಸಿದರು, ಶಿಕ್ಷಕ ಮಂಜುನಾಥ ಟಕ್ಕಳಿಕಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಶಿಕ್ಷಕ ಎಂ. ಬಿ. ತೋಟಗೇರ ವಂದನಾರ್ಪಣೆ ಮಾಡಿದರು.


ಈ ಸಂದರ್ಭದಲ್ಲಿ ಬಿಸಿ ಊಟದ ಸಿಬ್ಬಂದಿಗಳಾದ ಗೀತಾ ಬೇರಗಿ, ನಿರ್ಮಲ ಹದ್ಲಿ, ಸಂಗವ್ವ ಚಿತ್ತರಗಿ, ಶೈಲಾ ಹೊನೂರ ಹಾಗೂ ಶಾಲಾ ಎಸ್.ಡಿ.ಎಂ.ಸಿ (SDMC) ಅಧ್ಯಕ್ಷರು, ಸದಸ್ಯರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಶಾಲೆಗೆ ನೆರವು ನೀಡಿದ ಹಳೆಯ ವಿದ್ಯಾರ್ಥಿ ಪ್ರಮೋದ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top