ಡಾ. ರಮಾನಂದ ಬನಾರಿ ಅವರ 85 ರ ಸಾಕ್ಷ್ಯಚಿತ್ರ ಬಿಡುಗಡೆ; ಸಾಂಸ್ಕೃತಿಕ ವೈವಿಧ್ಯ

Upayuktha
0

ನೀರ್ಚಾಲು: ಸಾಹಿತಿ, ವೈದ್ಯ, ಕನ್ನಡ ಸಂಸ್ಕೃತಿ ಹೋರಾಟಗಾರ ಡಾ. ರಮಾನಂದ ಬನಾರಿ ಅವರ 85 ರ ಸಾಕ್ಷ್ಯಚಿತ್ರ ಬಿಡುಗಡೆ, ಸಾಹಿತ್ಯ ಸಾಂಸ್ಕೃತಿ ಸಮ್ಮೇಳನವು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣವಾಗಿ ಜರುಗಿತು. ಡಾ. ಪ್ರವೀಣ್ ರಾವ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಸಾಕ್ಷ್ಯ ಚಿತ್ರ ಹಲವರ ಮೆಚ್ಚುಗೆಗೆ ಪಾತ್ರವಾಯಿತು.


ಹಲವಾರು ಗಣ್ಯರು, ಸಾಹಿತಿಗಳು ಭಾಗವಹಿಸಿದ ಈ ಸಮ್ಮೇಳನದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವವು ಅತ್ಯಂತ ವೈವಿಧ್ಯಮಯವಾಗಿ ಪ್ರಸ್ತುತಗೊಂಡು ಪ್ರೇಕ್ಷಕರನ್ನು ರಂಜಿಸಿತು. ಗುರುರಾಜ್ ಕಾಸರಗೋಡು ಅವರ ಆಯೋಜನೆ ಮತ್ತು ನಿರೂಪಣೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವರ್ಷಾ ಶೆಟ್ಟಿ, ನವ್ಯಶ್ರೀ ಕುಲಾಲ್, ಹನ್ಶಿತ್ ಆಳ್ವ, ದೀಕ್ಷಾ ಕುಲಾಲ್, ರಮ್ಯಾ ಶಿವರಾಜ್, ಅರ್ಚನಾ ಹೇರೂರ್, ಭಾನ್ವಿ ಕುಲಾಲ್, ಸ್ವಾತಿ ರೈ, ಅನ್ಮೀತ ಶೆಟ್ಟಿ, ತ್ರಿಷಾ ಅಡಕಲಕಟ್ಟೆ, ಪ್ರಣಮ್ಯ ಕುಲಾಲ್, ಭವಿಷ್ಯ ಪೂಜಾರಿ, ತೇಜುಷಾ, ತನ್ಮಯಿ ಲಕ್ಷ್ಮಿ, ಜೀವಿಕಾ ಜೆ ಶೆಟ್ಟಿ, ಸಾಧನಾ ಶೆಟ್ಟಿ, ನಿಧಿ ಶೆಟ್ಟಿ, ಯಾಶಿಕಾ ರೈ, ತನಿಷ್ಕ ಎಸ್ ಮುಂತಾದ ಸಂಸ್ಥೆಯ ಅಪ್ರತಿಮ ನೃತ್ಯ ಕಲಾವಿದರು ಭಾಗವಹಿಸಿದರು.


ಕಾರ್ಯಕ್ರಮದ ಕೊನೆಯಲ್ಲಿ ಪಿ ಎನ್ ಮೂಡಿತ್ತಾಯ, ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಡಾ. ಮೋಹನ್ ಕುಂಟಾರ್, ಕಿಶೋರ್ ಕುಮಾರ್ ರೈ ಶೇಣಿ ಇವರ ಉಪಸ್ಥಿತಿಯಲ್ಲಿ ಭಾಗವಹಿಸಿದ ಕಲಾವಿದರಿಗೆ ವತಿಯಿಂದ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top