ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಅವರೊಂದಿಗೆ ಸಂವಾದ

Upayuktha
0




ಹೆಬ್ರಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಹೆಬ್ರಿ ನಮ್ಮ ಮನೆ ನಮ್ಮ ಮರ ತಂಡ ಸುಹಾಸಂ ಉಡುಪಿ ಇದರ ಆಶ್ರಯದಲ್ಲಿ ಮತ್ತೊಮ್ಮೆ ಕೂತು ಮಾತಾಡುವ ಕಾರ್ಯಕ್ರಮ ಹೆಬ್ರಿ ಗಿಲ್ಲಾಳಿ ವಿಶ್ವೇಶ ಕೃಷ್ಣ ಗೋಶಾಲೆ ವಠಾರದಲ್ಲಿ ನಡೆಯಿತು.


ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಅವರೊಂದಿಗೆ ನಡೆದ ಮಾತು ಸಂವಾದದಲ್ಲಿ ಮಾತನಾಡಿದ ಅವರು ನೇತ್ರಾವತಿ ನದಿ ತಿರುವು ಯೋಜನೆ, ಸಹಿತ ಪಶ್ಚಿಮ ಘಟ್ಟ ಪರಿಸರದಲ್ಲಿ ಅನೇಕ ರೀತಿಯ ಪ್ರಕೃತಿಗೆ ವಿರುದ್ಧವಾದ ಯೋಜನೆಗಳು ಬಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟಕ್ಕೆ ತೊಂದರೆ ಕಾದಿದೆ. ಅವೈಜ್ಞಾನಿಕ ಯೋಜನೆಗಳು ಕೇವಲ ಯೋಜನೆಗಳಾಗಿ ಉಳಿಯುತ್ತವೆ ಹೊರತು ಜನರಿಗೆ ಅದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದರು.


ಈ ಸಂದರ್ಭದಲ್ಲಿ ಅವರು ಅಂತರಾಷ್ಟ್ರೀಯ ಗಾಳಿಪಟ ಸ್ಪರ್ಧೆಯ ಕುರಿತು ಅನೇಕ ವಿವರಗಳನ್ನು ಜನರ ಮುಂದಿಟ್ಟರು.


ಈ ಸಂದರ್ಭದಲ್ಲಿ ಅವರನ್ನು ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು ಹಾಗೂ ಇತ್ತೀಚಿಗೆ ರಾಜ್ಯಪಾಲರಿಂದ ವಿಶೇಷ ಮನ್ನಣೆಗೆ ಪಾತ್ರರಾದ ವಿಶ್ವನಾಥ್ ಶೆಣೈ ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕ ಅಧ್ಯಕ್ಷ ರವಿರಾಜ್ ಹೆಚ್ ಪಿ, ಹೆಬ್ರಿ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಭಂಡಾರಿ, ಸುಹಾಸಂ ಅಧ್ಯಕ್ಷೆ ಸಂಧ್ಯಾ ಶೆಣೈ, ಉರಗ ತಜ್ಞ ಗುರುರಾಜ ಸನಿಲ್, ಗೋಶಾಲೆಯ ಟ್ರಸ್ಟಿ ಪದ್ಮನಾಭ ಆಚಾರ್ಯ, ಹೆಬ್ರಿ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ನ ಡಾ ಭಾರ್ಗವಿ ಐತಾಳ ಮತ್ತು ಡಾ. ರಾಮಚಂದ್ರ ಐತಾಳ, ಉದ್ಯಮಿ ಯೋಗೀಶ್ ಭಟ್, ರಾಮಕೃಷ್ಣ ಆಚಾರ್ಯ, ಜನಾದ೯ನ್ ಕೊಡವೂರು ರಾಘವೇಂದ್ರ ಪ್ರಭು ಕರ್ವಾಲು ಮುಂತಾದಾದವರು ಉಪಸ್ಥಿತರಿದ್ದರು, ಅವಿನಾಶ್ ಕಾಮತ್ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top