ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು: ತಾಲ್ಲೂಕು ಮಟ್ಟದ ಯೋಗ ದಿನಾಚರಣೆ

Upayuktha
0

ಯೋಗ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಸದೃಢಗೊಳಿಸುತ್ತದೆ : ತಾಲ್ಲೂಕು ಉಪಾಧ್ಯಕ್ಷೆ ಸಿ.ಎಸ್. ಪೂರ್ಣಿಮಾ.



ಹಾಸನ : ಅಬಾಲವೃದ್ಧರಾದಿಯಾಗಿ ಯೋಗ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಸದೃಢಗೊಳಿಸುವುದರ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಎಡೆಮಾಡಿಕೊಡುತ್ತದೆ ಎಂದು ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ಉಪಾಧ್ಯಕ್ಷೆ ಸಿ.ಎಸ್. ಪೂರ್ಣಿಮಾ ಅಭಿಪ್ರಾಯಪಟ್ಟರು.


ಅವರು ಆಲೂರು ತಾಲ್ಲೂಕು ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಬೈರಾಪುರ ಬೆಥಸ್ದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಗಿಡವಾದಾಗ ಬಗ್ಗದ್ದು ಮರವಾದಾಗ ಬಗ್ಗೀತೆ ಎಂಬ ನಾಣ್ಣುಡಿಯಂತೆ ಎಳೆಯ ವಯೋಮಾನದಿಂದಲೇ ಉತ್ತಮೋತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡಾಗ ಆದರ್ಶ ವ್ಯಕ್ತಿತ್ವ ರೂಢಿಸಿಕೊಳ್ಳಬಹುದು. ಪೋಷಕರು ಸಹ ಈ ನಿಟ್ಟಿನಲ್ಲಿ ಗಮನಹರಿಸಬೇಕು. ಪ್ರತಿದಿನ ಸರಳ ವ್ಯಯಾಮ, ಲಘು ಯೋಗಾಸನ, ನಿಯಮಿತ ಆಹಾರ, ಏಕಾಗ್ರತೆಯ ಓದು ವಿದ್ಯಾರ್ಥಿಯನ್ನು ಸರ್ವತೋಮುಖ ಬೆಳವಣಿಗೆಯತ್ತ ಕೊಂಡೊಯ್ಯುತ್ತದೆ ಎಂದರು.


ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ವೃದ್ಧರವರೆಗೂ ಹೃದಯಾಘಾತ ಹೇರಳವಾಗಿ ಕಾಡುತ್ತಿರುವುದು ದುರಂತದ ಸಂಗತಿ. ಅದರಲ್ಲೂ ೩೫ ರಿಂದ ೫೫ ರ ಮಯೋಮಾನದ ಪುರುಷರಲ್ಲಿ ಹೃದಯಾಘಾತ ಹೆಚ್ಚಾಗಿರುವುದು ಕಳವಳಕಾರಿಯಾಗಿದೆ. ಎಲ್ಲರಿಗೂ ಆರೋಗ್ಯ ಬಹಳ ತುರ್ತಿನ ವಿಷಯವಾಗಿದೆ. ಆರೋಗ್ಯದ ಕಾಳಜಿ ಎಲ್ಲರಿಗೂ ಅಗ್ತಯವಾಗಿ ಬೇಕಾಗಿದೆ. ಆಲೂರು ತಾಲ್ಲೂಕು ಭಾರತ್ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಗುಣಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖೇನ ಸದಾ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಕ್ರಿಯಾಶೀಲವಾಗಿಟ್ಟಿದೆ ಎಂದರು.


ಜಿಲ್ಲಾ ಸಹಾಯಕ ಆಯುಕ್ತ ಎಂ.ಬಾಲಕೃಷ್ಣ ಮಾತನಾಡಿ ವ್ಯಕ್ತಿಗೆ ಆಸ್ತಿ, ಸರಿವಂತಿಕೆ ಮಹತ್ವವಲ್ಲ ಆರೋಗ್ಯ ಬಹಳ ಬಹಳ ಮುಖ್ಯ. ಅದಕ್ಕಾಗಿಯೇ ಹಿರಿಯರು ಆರೋಗ್ಯವೇ ಮಹಾಭಾಗ್ಯ ಎಂದು ಹೇಳಿದ್ದು. ಊಟದ ದಿನಚರಿಯ ಜೊತೆಗೆ ಯೋಗ, ವ್ಯಾಯಾಮದ ದಿನಚರಿಯೂ ಪೂರಕವಾಗಿದ್ದಾಗ ಮಾತ್ರ ಸಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರೀಕನೂ ಸಹ ವೈಯಕ್ತಿಕ ಆರೋಗ್ಯದ ಜೊತೆಗೆ ಸಾಮುದಾಯಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ ಎಂದರು.


ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ ಭಾರತ್ ಸ್ಕೌಟ್ಸ್ ಗೈಡ್ಸ್ ಚಳವಳಿಯ ಪ್ರಮುಖ ಉದ್ದೇಶವೇ ಮಕ್ಕಳಲ್ಲಿ ಮಾನಾಸಿಕ ಹಾಗೂ ಶಾರೀರಿಕ ಶಿಸ್ತನ್ನು ವೃದ್ಧಿಸುವುದು. ಈ ತತ್ವದ ತಳಹದಿಯ ಮೇಲೇಯೇ ಈ ಸಂಸ್ಥೆ ನಿರಂತರವಾಗಿ ಕಾರ್ಯಮಾಡುತ್ತಿದೆ. ಇಲ್ಲಿನ ಬಹುತೇಕ ಹೊರಾಂಗಣ ಚಟವಟಿಕೆಗಳು ಮಕ್ಕಳನ್ನು ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಸದೃಢಗೊಳಿಸುತ್ತವೆ ಎಂದರು.


ಈ ಸಂದರ್ಭದಲ್ಲಿ ಬೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೈಡ್ ನಾಯಕಿ ಅಶ್ವಿನಿ, ಲೇಡಿ ಸ್ಕೌಟ್ ನಾಯಕಿ ರೇಣುಕಾಮೋಹನ್; ಬೈರಾಪುರದ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಲೇಡಿ ಸ್ಕೌಟ್ ನಾಯಕಿ ರೋಸ್‌ಮೇರಿ, ಆಲೂರಿನ ವಿದ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಲೇಡಿ ಸ್ಕೌಟ್ ನಾಯಕಿ ಜ್ಯೋತಿ, ಗೈಡ್ ನಾಯಕಿ ರೂಹಿ ಸೇರಿದಂತೆ ನೂರಕ್ಕೂ ಅಧಿಕ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top