ಶಾಲಾ ನಾಯಕನಾಗಿ ಸಾತ್ವಿಕ್ ಜಿ. ಹಾಗೂ ನಾಯಕಿಯಾಗಿ ವಂಶಿಕಾ ಬಿ. ರೈ ಆಯ್ಕೆ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ಗುರುವಾರ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಚುನಾವಣೆ ನಡೆಯಿತು. ಶಾಲಾ ನಾಯಕನಾಗಿ 10ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್ ಜಿ. ಹಾಗೂ ಶಾಲಾ ನಾಯಕಿಯಾಗಿ ವಂಶಿಕಾ ಬಿ.ರೈ ನೇಮಕಗೊಂಡರು.
9ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀರಾಮ್ ಎಲ್.ಆಚಾರ್ಯ ಗೃಹ ಮಂತ್ರಿಯಾಗಿ, ಆದ್ಯಾ ಶೆಣೈ ಶಿಸ್ತುಪಾಲನಾ ಮಂತ್ರಿಯಾಗಿ, ಶ್ರೀನಿಕ್ ಎಸ್.ಆಚಾರ್ಯ ಕ್ರೀಡಾಮಂತ್ರಿಯಾಗಿ ಆಯ್ಕೆಗೊಂಡರು. ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಶಿತಿಜ್.ಎಸ್ ಶಿಕ್ಷಣ ಮಂತ್ರಿಯಾಗಿ, ಸಾನ್ವಿ.ಜಿ ಸಾಂಸ್ಕøತಿಕ ಮತ್ತು ಸಂವಹನ ಮಂತ್ರಿಯಾಗಿ ಆಯ್ಕೆಗೊಂಡರು. 7ನೇ ತರಗತಿಯ ವಿದ್ಯಾರ್ಥಿಗಳಾದ ಸ್ಪಂದನಾ ಭಟ್.ಎಂ ಸ್ವಚ್ಛತಾಮಂತ್ರಿಯಾಗಿ, ಸಂಹಿತ್ ಜೊಸ್ಸಿ ಲೋಬೊ ಆಹಾರ, ನೀರಾವರಿ ಹಾಗೂ ಇಂಧನ ಮಂತ್ರಿಯಾಗಿ ಆಯ್ಕೆಗೊಂಡರು.
ಮಾಲತಿ ಡಿ. ಅವರು ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ, ಜವಾಬ್ದಾರಿಯುತವಾಗಿ ತಮ್ಮ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ವಿದ್ಯಾಲಯದ ಶ್ರೇಯೋಭಿವೃದ್ಧಿಗೆ ಸಹಕರಿಸಿ, ನಾಯಕತ್ವದ ಗುಣವನ್ನು ತಮ್ಮಲ್ಲಿ ರೂಢಿಸಿಕೊಳ್ಳಬೇಕೆಂದು ಕರೆನೀಡಿದರು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಸಮಾಜ ವಿಜ್ಞಾನ ಶಿಕ್ಷಕರಾದ ದೀಪ್ತಿ ಹಾಗೂ ರಮೇಶ್ ಇವರ ನೇತೃತ್ವದಲ್ಲಿ ಚುನಾವಣೆಯನ್ನು ಆಯೋಜಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


