ಅಭಾಸಾಪ ಬೆಳ್ತಂಗಡಿ: ಸಾಹಿತ್ಯ ಮೂಲ ಸಾಮಾಜಿಕ ಶಿಷ್ಟಾಚಾರ ಉಪನ್ಯಾಸ

Upayuktha
0


ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ರಿ) ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿ ಇದರ ಆಶ್ರಯದಲ್ಲಿ ಸಾಹಿತ್ಯ ಮೂಲ ಸಾಮಾಜಿಕ ಶಿಷ್ಟಾಚಾರ ಉಪನ್ಯಾಸ ಕಾರ್ಯಕ್ರಮವು ಅಭ್ಯಾಸ ಪದವಿ ಪೂರ್ವ ಕಾಲೇಜು ಪ್ರಗತಿನಗರ ಕಾಶಿಬೆಟ್ಟು ಇಲ್ಲಿ ನಡೆಯಿತು.


ಸಾಹಿತ್ಯ ಮೂಲ ಸಾಮಾಜಿಕ ಶಿಷ್ಟಾಚಾರದ ಬಗ್ಗೆ, ಸಂಪನ್ಮೂಲ ವ್ಯಕ್ತಿ ಡಾ. ಎಂ.ಎನ್. ರವಿ ಮಂಡ್ಯ ಇವರು ಕೌಟುಂಬಿಕ ಶಿಷ್ಟಾಚಾರ ಸಾಮಾಜಿಕ ಶಿಷ್ಟಾಚಾರ ಔದ್ಯೋಗಿಕ ಶಿಷ್ಟಾಚಾರ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಭ್ಯಾಸ್ ಕಾಲೇಜಿನ ಅಧ್ಯಕ್ಷರಾದ ಎಂ ಎಸ್ ಕಾರ್ತಿಕೇಯ ಇವರು ಇಂದಿನ ದಿನಮಾನದಲ್ಲಿ ಬೇಕಾದ ಶಿಷ್ಟಾಚಾರದ ಅವಶ್ಯಕತೆಗಾಗಿ ಇಂತಹ ಕಾರ್ಯಕ್ರಮ ಅತ್ಯವಶ್ಯ ಎಂದರು. ಇದೇ ಸಂದರ್ಭ ಅಭ್ಯಾಸ್ ಕಾಲೇಜಿನ ಸ್ಟಡಿ ಮೆಟೀರಿಯಲ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಗೈದು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಅಧ್ಯಕ್ಷರಾದ ಪ್ರೊ. ಗಣಪತಿ ಭಟ್‌ ಕುಳಮರ್ವ ಇವರು ಸ್ವಾಗತಿಸಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.


ಅಭಾಸಾಪ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಅಡೂರ್, ಸಮಿತಿ ಸದಸ್ಯೆ ಅಕ್ಷತಾ ಅಡೂರ್, ಅಭಾಸಾಪ ಸಮಿತಿ ಸದಸ್ಯರಾದ ತ್ರಿವಿಕ್ರಮ ಹೆಬ್ಬಾರ್, ಅಭ್ಯಾಸ್ ಸಂಸ್ಥೆಯ  ಉಪ ಪ್ರಾಂಶುಪಾಲರಾದ ಚಂದ್ರ ಶೇಖರ್ ಗೌಡ, ಇತರ ಉಪನ್ಯಾಸಕರು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.


ಅಭಾಸಾಪ ಜತೆಕಾರ್ಯದರ್ಶಿ ವಿನುತಾ ರಜತ್ ಗೌಡರವರು ಕಾರ್ಯಕ್ರಮ ನಿರೂಪಿಸಿದರು, ಸುಧೀರ್‌ರವರು ಧನ್ಯವಾದವನ್ನಿತ್ತರು. ವಿದ್ಯಾರ್ಥಿನಿ ಸ್ವಸ್ತಿಶ್ರೀಯವರ ಶಾರದಾ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಗಿ ಶಾಂತಿ ಮಂತ್ರದೊಂದಿಗೆ ಸಂಪನ್ನಗೊಂಡಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top