ರಾಷ್ಟ್ರದ ಆಂತರಿಕ ವ್ಯವಸ್ಥೆ ಹಾಗೂ ಸುರಕ್ಷತೆಗೆ ಹೊರದೇಶಗಳಿಂದ ತೊಂದರೆ ಆಗಬಹುದಾದ ಸನ್ನಿವೇಶದಲ್ಲಿ ಕೇಂದ್ರ ಸಚಿವ ಸಂಪುಟದ ಶಿಫಾರಸ್ಸಿನ ಮೇಲೆ ರಾಷ್ಟ್ರಪತಿಗಳು ತುರ್ತು ಪರಿಸ್ಥಿತಿ ಜಾರಿಗೊಳಿಸುತ್ತಾರೆ. ಆದರೆ, ತುರ್ತು ಪರಿಸ್ಥಿತಿ ಜಾರಿಗೊಳಿಸಲು, ತೆರವಾದ ಅನಂತರದಲ್ಲಿ ಜಾರಿಗೊಳಿಸಲು ಅನುವಾದ ಕಾರಣಗಳನ್ನು ತಿಳಿಸಬೇಕಾದ ಆವಶ್ಯಕತೆ ಸರಕಾರಕ್ಕಾಗಲೀ ರಾಷ್ಟ್ರಪತಿಗಳಿಗಾಗಲೀ ಇಲ್ಲವೇ ಇಲ್ಲ. ಸರ್ವೋಚ್ಚ ನ್ಯಾಯಾಲಯ ಪ್ರಕರಣ ದಾಖಲಿಸುವಂತಿಲ್ಲ. ಸರಕಾರದಿಂದಾಗಲೀ, ರಾಷ್ಟ್ರಪತಿಗಳಿಂದಾಗಲೀ ಸ್ಪಷ್ಟೀಕರಣ, ಪ್ರಮಾಣಪತ್ರ ಇತ್ಯಾದಿಗಳನ್ನು ಕೇಳಲು ಅಥವಾ ಪಡೆಯಲು ಅವಕಾಶವೇ ಇಲ್ಲ. ಮೋದಿಯವರು ಸಚಿವ ಸಂಪುಟದ ಶಿಫಾರಸ್ಸಿನಿಂದ ರಾಷ್ಟ್ರಪತಿ ಅಂಕಿತ ಪಡೆದು ತುರ್ತು ಪರಿಸ್ಥಿತಿ ಜಾರಿಗೊಳಿಸಿದರೆ… ನ್ಯಾಯಾಲಯದೊಟ್ಟಿಗೆ, ಪತ್ರಿಕೆ, ನಾಗರಿಕ ಸ್ವಾತಂತ್ರಗಳ ದಮನ ಸಂವಿಧಾನಾತ್ಮಕವಾಗಿ ನಡೆಯುತ್ತದೆ. ಆದರೆ, ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲು ಯಾರಿಗೂ ಅವಕಾಶವಿರುವುದಿಲ್ಲ. ಮುಂಬರುವ ಸರಕಾರಗಳೂ ಕೂಡ ತುರ್ತುಪರಿಸ್ಥಿತಿಯ ಕಾರಣಗಳ ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ.
ಒಟ್ಟಾರೆ ತುರ್ತು ಪರಿಸ್ಥಿತಿ ಎಂದರೆ ಕಾರ್ಯಾಂಗ, ನ್ಯಾಯಾಂಗದ ಮೇಲೆ ಶಾಸಕಾಂಗವು ಸಂಪೂರ್ಣವಾದ ಹಿಡಿತವನ್ನು ಸಾಧಿಸುವುದು. ಆ ಅವಧಿಯಲ್ಲಿ ಸರ್ಕಾರ ಏನೇ ಕ್ರಮ ತೆಗೆದುಕೊಂಡರೂ ಪ್ರಶ್ನಿಸುವಂತಿಲ್ಲ. ಆಮೇಲೆಯೂ ದಾವೆ ಹೂಡುವಂತಿಲ್ಲ.
ಭಾರತೀಯ ಸಂವಿಧಾನದ ೩೫೨ ವಿಧಿಯನ್ವಯ ತುರ್ತುಪರಿಸ್ಥಿತಿ ಜಾರಿಗೊಳಿಸಲು ಪ್ರಧಾನಮಂತ್ರಿಗೆ ಅವಕಾಶವಿದೆ. ಸಂವಿಧಾನದ 352ನೆಯ ವಿಧಿಯು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇಳಿದರೆ, 368ನೆಯ ವಿಧಿಯು ಸಂವಿಧಾನದ ತಿದ್ದುಪಡಿಯ ಬಗ್ಗೆ ಹೇಳುತ್ತದೆ. 360ನೆಯ ವಿಧಿಯು ಹಣಕಾಸಿನ ತುರ್ತು ಪರಿಸ್ಥಿತಿಯನ್ನು, 123ನೆಯ ವಿಧಿಯು ಸುಗ್ರೀವಾಜ್ಞೆಯನ್ನು, 356ನೆಯ ವಿಧಿಯು ರಾಜ್ಯ ತುರ್ತು ಪರಿಸ್ಥಿತಿಯನ್ನು ಹೇಳುತ್ತದೆ. ಪುಣ್ಯ ಎಂದರೆ, ನಮ್ಮ ರಾಜಕಾರಣಿಗಳಿಗೆ ಈ ವಿಚಾರ ಇನ್ನೂ ತಲೆಗೆ ಹೊಳೆದಿಲ್ಲ ಅನಿಸುತ್ತೆ.
- ಟಿ. ದೇವಿದಾಸ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


