ಕಣಚೂರು ಆಯುರ್ವೇದ ಕಾಲೇಜಿನಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2026

Upayuktha
0


ಮಂಗಳೂರು: ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ನಾಟೆಕಲ್, ದೇರಳಕಟ್ಟೆ, 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ 2026ನ್ನು ಸೋಮವಾರ, ಜೂನ್ 22, 2026 ರಂದು ಬೆಳಿಗ್ಗೆ 9:30ಕ್ಕೆ ಆಚರಿಸಲಾಯಿತು.


ಮಂಗಳೂರಿನ ಯೋಗವಿದ್ಯಾ ಥೆರಪಿ ಸೆಂಟರ್‌ನ ಆಯುರ್ವೇದ ವೈದ್ಯ ಮತ್ತು ಯೋಗ ಚಿಕಿತ್ಸಕರಾದ ಡಾ. ಕೆ. ಗಣೇಶ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು ಹಾಗೂ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಟ್ರಸ್ಟಿ ನಿರ್ದೇಶಕ ಶ್ರೀ ಅಬ್ದುಲ್ ರಹೀಮನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ವಿದ್ಯಾಪ್ರಭಾ ಅವರು ಯೋಗದ ಮಹತ್ವ, ಮಲ್ಲಾಡಿಹಳ್ಳಿ ಯೋಗಗುರು ಅವರ ಸಾಧನೆಗಳನ್ನು ಉದಾಹರಿಸಿ ಸರ್ವರನ್ನು ಸ್ವಾಗತಿಸಿದರು.


ಮುಖ್ಯ ಆತಿಥಿ ಡಾ ಕೆ. ಗಣೇಶ್. ಭಟ್ ಮಾತನಾಡಿ ಯೋಗವನ್ನು ವಿಶ್ವ ವಿಖ್ಯಾತಗೊಳಿಸಿದ ಪ್ರಧಾನಿ ಮೋದಿಯವರನ್ನು ಉಲ್ಲೇಖಸುತ್ತಾ ಭಗವದ್ಗೀತೆಯಾದಿ ಉಲ್ಲೇಖಿತ ಹಾಗೂ ಆಯುರ್ವೇದೋಕ್ತ ಯೋಗ ವಿಚಾರಗಳನ್ನು ವಿಷದವಾಗಿ ತಿಳಿಸಿದರು.


 ಚೇರ್ಮನ್ ಹಾಗೂ ಸಭಾಧ್ಯಕ್ಷ ಡಾ ಕಣಚೂರು ಮೋನುರವರು ಯೋಗ ಹಾಗೂ ಆಯುರ್ವೇದಗಳ ಸೋದರ ಸಂಬಂಧ ಹಾಗೂ ತಮ್ಮ ಸಂಸ್ಥೆ ನಡೆಸುತ್ತಿರುವ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪ್ರತಿಭೆಯನ್ನು ಕೊಂಡಾಡಿದರು.


ಡಾ. ಕೆ. ಗಣೇಶ್, ಡಾ ಹಾಜಿ ಯು. ಕೆ ಮೋನು, ವೈದ್ಯಕೀಯ ಸಲಹೆಗಾರ ಡಾ ಸುರೇಶ ನೆಗಳಗುಳಿ ಹಾಗೂ ಪ್ರಾಚಾರ್ಯೆ ಡಾ ವಿದ್ಯಾಪ್ರಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆ ಏರ್ಪಡಿಸಿದ್ದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಕಣಚೂರು ಅಂಗ ಸಂಸ್ಥೆಯ ವಿದ್ಯಾರ್ಥಿಗಳ  ಸಹಿತ ಸಾಮೂಹಿಕ ಯೋಗ ಪ್ರದರ್ಶನವು ಎಲ್ಲರ ಮನ ಸೆಳೆಯಿತು. 


ಡಾ ಭವ್ಯ ಪ್ರವೀಣ, ಡಾ ಸೌಮ್ಯಾ, ಡಾ ಕಾರ್ತಿಕ್, ಡಾ ಶ್ರೀರಾಮ, ಡಾ ಅಶ್ವಿನ್, ಡಾ ಚರಣ್, ಡಾ ಜೈನುದ್ದಿನ್, ಡಾ ಸಲೀಮಾ, ಡಾ ದೀನಮಂಜು, ಡಾ ರಾಜೇಶ್, ಡಾ ಲವ್ಲಿನಾ ಮತ್ತಿತರ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top