ಸಂತ ಅಲೋಶಿಯಸ್ ವಿದ್ಯಾರ್ಥಿ ಆಸ್ಟೆಲ್ ಕ್ರಿಸ್ಟೋಫರ್ ಕ್ರಾಸ್ತಾ ಜಾಗತಿಕ ಮಟ್ಟದ ACCA ಪರೀಕ್ಷೆಯಲ್ಲಿ ಸಾಧನೆ

Upayuktha
0

 


ಮಂಗಳೂರು: ಇಲ್ಲಿನ ಅಲೋಶಿಯಸ್ ಕಾಲೇಜು ವಿದ್ಯಾರ್ಥಿ ಅಸ್ಟೆಲ್ ಕ್ರಿಸ್ಟೋಫರ್ ಕ್ರಾಸ್ತಾ ಅವರು ಜಾಗತಿಕ ಮಟ್ಟದಲ್ಲಿ ಮಹತ್ವದ ಸಾಧನೆ ಮಾಡಿ ವಿಶ್ವವಿದ್ಯಾಲಯಕ್ಕೆ ಹೆಮ್ಮೆ ತಂದಿದ್ದಾರೆ. 2023–2026 ಬ್ಯಾಚ್ ಬಿ.ಕಾಂ ವಿದ್ಯಾರ್ಥಿಯಾಗಿರುವ ಅವರು, Association of Chartered Certified Accountants (ACCA) ನಡೆಸಿದ ಮಾರ್ಚ್ 2026 ಪರೀಕ್ಷೆಯಲ್ಲಿಅಡ್ವಾನ್ಸ್ಡ್ ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ವಿಷಯದಲ್ಲಿ ವಿಶ್ವ ಮಟ್ಟದಲ್ಲಿ 6ನೇ ರ್ಯಾಂಕ್ ಹಾಗೂ ಭಾರತ ಮಟ್ಟದಲ್ಲಿ 1ನೇ ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಇನ್ನೂ ಬಿ.ಕಾಂ ಪದವಿ ಪೂರ್ಣಗೊಳಿಸುವ ಮುನ್ನವೇ ಮಟ್ಟದ ಸಾಧನೆ ಮಾಡಿರುವುದು ವಿಶೇಷವಾಗಿದ್ದು, ವಿಶ್ವವಿದ್ಯಾಲಯದ School of Commerce, Finance & Accountancyಗೆ ಇದು ಹೆಮ್ಮೆಯ ಕ್ಷಣವಾಗಿದೆ.

ACCA ಪರೀಕ್ಷೆ ವಿಶ್ವದ ಅತ್ಯಂತ ಪ್ರತಿಷ್ಠಿತ ಹಾಗೂ ಕಠಿಣ ವೃತ್ತಿಪರ ಲೆಕ್ಕಪತ್ರ ಮತ್ತು ಹಣಕಾಸು ಪರೀಕ್ಷೆಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಪರೀಕ್ಷೆಯಲ್ಲಿ ವಿಶ್ವ ಮಟ್ಟದ ರ್ಯಾಂಕ್ ಪಡೆಯುವುದು ಆಸ್ಟೆಲ್ ಅವರ ಅಸಾಧಾರಣ ಪರಿಶ್ರಮ, ತಾಂತ್ರಿಕ ಪರಿಣತಿ ಹಾಗೂ ವಿಶ್ಲೇಷಣಾತ್ಮಕ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.

ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಕುಲಪತಿ, ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಆಸ್ಟೆಲ್ ಕ್ರಿಸ್ಟೋಫರ್ ಕ್ರಾಸ್ತಾ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದು, ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಶುಭ ಹಾರೈಸಿದ್ದಾರೆ.

ಸಾಧನೆ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದುಕೊಟ್ಟಿರುವುದರ ಜೊತೆಗೆ, ಇತರ ವಿದ್ಯಾರ್ಥಿಗಳಿಗೂ ಉನ್ನತ ಗುರಿ ಸಾಧಿಸಲು ಪ್ರೇರಣೆಯಾಗಲಿದೆ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top