ತಮಿಳುನಾಡಿನಲ್ಲಿ
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ,
ಚಿತ್ರನಟ ಜೋಸೆಫ್ ವಿಜಯ್ ಅವರ ಟಿವಿಕೆ ಪಕ್ಷ
ಹೆಚ್ಚಿನ ಸಂಖ್ಯೆಯಲ್ಲಿ ಶಾಸಕ ಸ್ಥಾನಗಳನ್ನು ಗೆದ್ದಿತು.
ಆದರೆ ಸರ್ಕಾರ ರಚನೆಗೆ ಬಹುಮತ ಇಲ್ಲದಿದ್ದರೂ, ಅವರನ್ನೇ ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ತಮಿಳುನಾಡಿನ ಚಿತ್ರರಂಗದ
ಹಲವು ಪ್ರಮುಖರು ಒತ್ತಾಯಿಸಿದ್ದರು. ಅಲ್ಲದೇ, ಗೆದ್ದೆತ್ತಿನ ಬಾಲ ಹಿಡಿಯುವ ಕಾಂಗ್ರೆಸ್
ಹಲವು ವರ್ಷಗಳ ತನ್ನ ಸ್ನೇಹಿತನಾದ ಡಿಎಂಕೆ
ಗೆ ಕೈಕೊಟ್ಟು ಹೆಚ್ಚು ಸ್ಥಾನಗಳನ್ನು ಗೆದ್ದ ಟಿವಿಕೆ ಪಕ್ಷದೊಂದಿಗೆ ಓಡಿಹೋಯಿತು. ಟಿವಿಕೆಯ ಸಂಸ್ಥಾಪಕ ಜೋಸೆಫ್ ವಿಜಯ್, ಗವರ್ನರ್ ಅವರನ್ನು ಮುಖತಃ ಕಂಡು ಭಾರ ನಡೆಸಲು
ಹಕ್ಕು ಕೇಳಿದಾಗ, ಗವರ್ನರ್ ಅವರು ಪೂರ್ಣಪ್ರಮಾಣದ ಬಹುಮತದೊಂದಿಗೆ
ಬರಲು ಹೇಳಿದರು. ಈ ಸಂಗತಿ ಮೂರು
ಬಾರಿ ನಡೆಯಿತು.
ಜೋಸೆಫ್
ವಿಜಯ್ ಕೇಳಿದೊಡನೆ ಸರ್ಕಾರ ರಚಿಸಿ ಅಧಿಕಾರ ಸ್ವೀಕಾರ ಮಾಡಲು ರಾಜ್ಯಪಾಲರು ಅನುಮತಿ ಕೊಡಬೇಕಿತ್ತು. ಆದರೆ, ರಾಜ್ಯಪಾಲರು ದೆಹಲಿ ನಾಯಕರ ಸೂಚನೆಯಂತೆ ಅದನ್ನು ತಪ್ಪಿಸಿದ್ದಾರೆ ಎಂದು ಚಿತ್ರನಟರೂ ಸೇರಿ
ಹಲವರು ಬೊಬ್ಬೆ ಹಾಕಿದ್ದರು. ಆದರೆ, ಸಂವಿಧಾನ ಏನು ಹೇಳುತ್ತದೆ?
· ARTICLE 164 (1): SIMPLY STATES THAT THE
CHIEF MINISTER SHALL BE APPOINTED BY THE GOVERNOR. IT DOES NOT PROVIDE RULES
FOR A HUNG ASSEMBLY (WHERE NO PARTY HAS CLEAR MAJORITY).
· SITUATIONAL DISCRETION: WHEN NO PARTY
HAS A MAJORITY, THE GOVERNOR USES THEIR OWN JUDGEMENT TO APPOINT A PERSON THEY
BELIEVE IS MOST LIKELY TO COMMAND THE SUPPORT OF THE HOUSE
ಸಂವಿಧಾನದ
section 164 (1) ಪ್ರಕಾರ
ಬಹುಮತವಿಲ್ಲದಿದ್ದರೂ, ಅತೀ ಹೆಚ್ಚು ಸ್ಥಾನಗಳನ್ನು
ಹೊಂದಿರುವ ಪಕ್ಷ, ತಾವು ಹೊಂದಿರುವ ಶಾಸಕರ
ಸಹಿಯೊಡನೆ ಬಂದು ತಮಗೆ ಆಡಳಿತ
ನಡೆಸಲು ಹಕ್ಕು ಕೇಳಬೇಕು. ಇಲ್ಲಿ, ತಮ್ಮ ಪಕ್ಷದ, ಅಥವಾ
ಚುನಾವಣಾಪೂರ್ವ ಮೈತ್ರಿ ಹೊಂದಿರುವ ಶಾಸಕರ ಸಹಿಗಳು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು. ಒಂದು ವೇಳೆ, ಚುನಾವಣೋತ್ತರ
ಮೈತ್ರಿ ಶಾಸಕರೊಡನೆ ಬಂದರೆ, ಆವಾಗ ಪೂರ್ಣ ಬಹುಮತದೊಂದಿಗೆ
ಬರಬೇಕು. ಇದು ಕಾನೂನು.
ಆದರೆ
ಬಹುಕಾಲ ಅಧಿಕಾರ ರಾಜಕೀಯ ಮಾಡಿದ ಕಾಂಗ್ರೆಸ್ಸಿಗೆ, ಅಧಿಕಾರದ ಅಮಲು ಮಂಕು ಬುದ್ಧಿಯನ್ನು
ತರಿಸಿತ್ತೋ ಏನೋ!? ಅದಕ್ಕೆ ಈ ಸಿಂಪಲ್ ವಿಷಯವೇ
ಗೊತ್ತಾಗಲಿಲ್ಲ. ಅದು 40 ವರ್ಷಕ್ಕೂ ಹೆಚ್ಚುಕಾಲ
ಮೈತ್ರಿ ಮಾಡಿಕೊಂಡ ಡಿಎಂಕೆಗೆ, ಅವಸರದಲ್ಲಿ ಕೈಕೊಟ್ಟು ಟಿವಿಕೆಯೊಡನೆ ಸೇರಿ ಬೆಂಬಲದ ಪತ್ರವನ್ನು
ರಾಜ್ಯಪಾಲರಿಗೆ ಕೊಟ್ಟಿತು. ಇದು ಚುನಾವಣೋತ್ತರ ಮೈತ್ರಿ
(ಪೋಸ್ಟ್ ಪೋಲ್ ಅಲೆಯನ್ಸ್). ಆಗ
ಸಹಜವಾಗಿ ರಾಜ್ಯಪಾಲರು ಪೂರ್ಣ ಬಹುಮತದ ರುಜುವಾತು ಕೇಳುವುದು ಸರಿಯೆಂಬುದು ಎಂಥ ರಾಜನೀತಿ ವಿಶಾರದನಿಗೂ
ಅರ್ಥವಾಗುವ ಸಂಗತಿ.
ಇದಲ್ಲದೆ,
ಈ ಬುದ್ಧಿವಂತ ಜೋಸೆಫ್ ವಿಜಯ್ ಎರಡನೆಯ ಬಾರಿ ರಾಜ್ಯಪಾಲರನ್ನು ಭೇಟಿಯಾದಾಗ
113 ಶಾಸಕರ ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದಾಗ ಅದರಲ್ಲಿ ಈ ಕಾಂಗ್ರೆಸ್ ಕೊಟ್ಟ
ಪತ್ರವಿರಲಿಲ್ಲ. ಆ ಪತ್ರವನ್ನು ಮನೆಯಲ್ಲಿ
ಮರೆತು ಬಂದಿದ್ದ. ರಾಜ್ಯಪಾಲರಿಗೆ ಕೊಟ್ಟ ಆ ಪತ್ರದಲ್ಲಿ ಅವನ
ಪ್ರಕಾರ 118 ಶಾಸಕರ ಸಹಿಯಿತ್ತು.
ಆದರೆ ಅದರಲ್ಲಿ 113 ಮಾತ್ರ ಇತ್ತು.
ಇದು ಜನಪ್ರಿಯ ಜನಪ್ರಸಿದ್ಧ ಸಿನೆಮಾ ಹೀರೋನ ಬುದ್ಧಿವಂತಿಕೆ!
ಕೂಡಲೇ
ಇತರ ಪಕ್ಷದವರು ತಮ್ಮ ಲಾಭವನ್ನು ಪಡೆಯಲು
ಯೋಚಿಸಿದರು. ಕೆಲವರು ಉಪಮುಖ್ಯಮಂತ್ರಿ ಪದವಿ ಕೇಳಿದರೆ, ಇನ್ನೂ
ಕೆಲವರು 100 ಕೋಟಿ ಕೇಳಿದರು
ಎಂಬ ಮಾತು ರಾಜಕೀಯ ಮತ್ತು
ಸಾಮಾಜಿಕ ವಲಯದಲ್ಲಿ ಗುಲ್ಲೆಬ್ಬಿಸಿತು. ಇದಲ್ಲದೇ, ಜೋಸೆಫ್ ವಿಜಯ್ ತಾನು ಹೀರೋ ಎಂದು
ತೋರಿಸಲು, ಸಣ್ಣಪುಟ್ಟ ಪಕ್ಷಗಳಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ,
ಬೆಂಬಲ ಕೇಳಿದ್ದ. ಚಿಕ್ಕ ಇಲಿಮರಿಗೆ ನರಿಗಳ ಸಹಾಯ ಹೇಗೆ ಪಡೆಯಬೇಕು
ಎಂದು ಅರ್ಥವಾದ ಅನಂತರ ಖುದ್ದಾಗಿ ಭೇಟಿ ನೀಡಿ, ಗೌರವದಿಂದ
ಬೇಡಿಕೊಂಡ.
ನಿಜಜೀವನದಲ್ಲಿ
ಪರದೆ ಮೇಲಿನ ಹೀರೋಯಿಸಂ ತೋರಿಸಿದರೆ ಏನಾಗುತ್ತದೆ ಅಂತ ಈಗ ಈ
ಇಲಿಮರಿಗೆ ಗೊತ್ತಾಗಿದೆ. ಆದರೆ ಉಳಿದವರನ್ನು ಬಿಡಿ,
ಚಿತ್ರರಂಗದ ಅತೀ ಬುದ್ಧಿವಂತರಾದ ಕಮಲ್
ಹಾಸನ್, ಕಿಶೋರ್ ಮತ್ತು ಇತರರಿಗೆ ಈ ದೇಶಕ್ಕೊಂದು ಸಂವಿಧಾನವಿದೆ,
ವಿಧಿ ನಿಯಮಗಳಿವೆ, ಅದು ಏನು ಹೇಳುತ್ತದೆ
ಎಂಬುದನ್ನು ತಿಳಿದುಕೊಳ್ಳಬೇಕು, ಆಮೇಲೆ ಪರವೋ/ವಿರೋಧವೋ ಅಂತ
ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳಬೇಕು ಎಂಬ ಸಣ್ಣ ವಿಷಯವೇ
ಗೊತ್ತಿಲ್ಲ. ಮಜಾ ಏನೆಂದರೆ, ರಾಜ್ಯಶಾಸ್ತ್ರದ
ತಲೆಬುಡ ಗೊತ್ತಿಲ್ಲದಿದ್ದರೂ ರಾಜ್ಯಪಾಲರಿಗೆ ಪಾಠ ಮಾಡುವುದಕ್ಕೇ ನಮ್ಮ
ಜನ ಇಳಿದುಬಿಡುತ್ತಾರೆ!
ಈಗ ಅದೆಲ್ಲವನ್ನೂ ಅರ್ಥಮಾಡಿಕೊಂಡು ಜೋಸೆಫ್ ವಿಜಯ್ ಪ್ರಮಾಣವಚನ ಸ್ವೀಕರಿಸಿಯಾಗಿದೆ. ಆದರೆ, ಈಗಲೇ ಈತನನ್ನು ಮಕಲ್
ತಿಲಗಮ್ ಎಂದೇ ಖ್ಯಾತಿಯಾದ (ಪೀಪಲ್ಸ್
ಕಿಂಗ್) ಶ್ರೀ ಮಧುರನ್ ಗೋಪಾಲನ್
ರಾಮಚಂದ್ರನ್ ಅವರಿಗೆ ಹೋಲಿಸುವುದು ಸರಿಯಲ್ಲ. ಯಾಕೆಂದರೆ, ದಿಣ್ಣೆ ಪರ್ವತವಾಗಲು ಹಲವು ವರ್ಷಗಳೇ ಬೇಕು.
- ಟಿ. ದೇವಿದಾಸ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


