ಬೆಂಗಳೂರು:
ಇಂದಿನ ಯುವ ಪೀಳಿಗೆಯಲ್ಲಿ ಹೆಚ್ಚುತ್ತಿರುವ
ಪಾಶ್ಚಾತ್ಯ ಪ್ರಭಾವ, ಧರ್ಮ ಶಿಕ್ಷಣದ ಅಭಾವ
ಹಾಗೂ ಸಂಸ್ಕಾರ ಕುಸಿತದ ಹಿನ್ನೆಲೆ ಮಕ್ಕಳಲ್ಲಿ ಹಿಂದೂ ಧರ್ಮದ ಜ್ಞಾನ, ಸಂಸ್ಕಾರ, ರಾಷ್ಟ್ರಭಕ್ತಿ ಮತ್ತು ಸ್ವಾಭಿಮಾನವನ್ನು ಜಾಗೃತಗೊಳಿಸುವ ಉದ್ದೇಶದಿಂದ ಸನಾತನ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ “ಸನಾತನ ಸಂಸ್ಕಾರ ತರಬೇತಿ ಶಿಬಿರ'' ಯಶಸ್ವಿಯಾಗಿ ಸಂಪನ್ನಗೊಂಡಿತು.ಈ ಶಿಬಿರವು ದಿನಾಂಕ
06.05.2026 ರಿಂದ
10.05.2026 ರವರೆಗೆ ಬೆಂಗಳೂರಿನ ಬಾಪೂಜಿನಗರದಲ್ಲಿನ ಶ್ರೀ ಗಣಪತಿ, ಅಯ್ಯಪ್ಪ,
ರಾಘವೇಂದ್ರ, ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
09 ವರ್ಷದಿಂದ
15 ವರ್ಷದ ಮಕ್ಕಳಿಗಾಗಿ ಉಚಿತವಾಗಿ ಆಯೋಜಿಸಲಾದ ಈ 5 ದಿನಗಳ ಶಿಬಿರದಲ್ಲಿ
ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಈ ಶಿಬಿರದ ಮುಖ್ಯ
ಉದ್ದೇಶ ಮಕ್ಕಳಿಗೆ ಹಿಂದೂ ಧರ್ಮದ ಸಂಸ್ಕಾರಗಳನ್ನು ತಿಳಿಸುವುದು, ಶ್ಲೋಕ ಪಠಣ, ದೇವತೆಗಳು, ಮಹಾಪುರುಷರು,
ಹಿಂದೂಗಳ ತೇಜಸ್ವಿ ಇತಿಹಾಸ, ಹಿಂದೂ ವಿಜ್ಞಾನಿಗಳು ಮತ್ತು ಋಷಿಮುನಿಗಳ ಬಗ್ಗೆ ಮಾಹಿತಿ ನೀಡಿ ಮಕ್ಕಳಲ್ಲಿ ಧರ್ಮ
ಮತ್ತು ರಾಷ್ಟ್ರದ ಬಗ್ಗೆ ಅಭಿಮಾನ ಮೂಡಿಸುವುದು. ಮಕ್ಕಳ ಜ್ಞಾನ ವೃದ್ಧಿಗಾಗಿ ರಸಪ್ರಶ್ನೆಗಳು, ಸಾತ್ವಿಕ ಚಿತ್ರಕಲೆ ಮತ್ತು ಶುದ್ಧವಾಗಿ ಪ್ರಾದೇಶಿಕ ಭಾಷೆಗಳನ್ನು ಓದುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಪಾಲಕರಿಗೂ ಅವರ ಜವಾಬ್ದಾರಿಗಳನ್ನು ತಿಳಿಸಿ,
ಮಕ್ಕಳಿಗೆ ಸಂಸ್ಕಾರಗಳನ್ನು ಕಲಿಸುವುದರ ಮಹತ್ವವನ್ನು ಮನವರಿಕೆ ಮಾಡಿಕೊಡಲಾಯಿತು.
ಶಿಬಿರದ
ಕೊನೆಯಲ್ಲಿ ಪಾಲಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು,
ಮಕ್ಕಳು ಬಹಳಷ್ಟು ಕಲಿತಿದ್ದಾರೆ ಮತ್ತು ಮುಂದೆಯೂ ಇಂತಹ ಶಿಬಿರಗಳಲ್ಲಿ ಭಾಗವಹಿಸಲು
ಆಸಕ್ತಿ ತೋರಿಸಿದ್ದಾರೆ ಎಂದು ತಿಳಿಸಿದರು. ಈ
ಶಿಬಿರ ಯಶಸ್ವಿಯಾಗಲು ಸಹಕರಿಸಿದ ಎಲ್ಲಾ ಕಾರ್ಯಕರ್ತರು, ಪೋಷಕರು, ಸಭಾಗೃಹದ ವ್ಯವಸ್ಥಾಪಕರು ಹಾಗೂ ಭಾಗವಹಿಸಿದ ಮಕ್ಕಳಿಗೆ
ಸನಾತನ ಸಂಸ್ಥೆ ವತಿಯಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


