ಮಂಗಳೂರು: ಸಂತ ಸೂರ್ ದಾಸ್ ಜಯಂತಿ ಆಚರಣೆ

Upayuktha
0

  


ಮಂಗಳೂರು: ಸಕ್ಷಮ ..ಘಟಕ, ಶಂಕರಶ್ರೀ ವೇದಪಾಠಶಾಲೆ ಸಮಿತಿ ಸಹಯೋಗದಲ್ಲಿ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಆವರಣದಲ್ಲಿ ಸಂತ ಸೂರ್ ದಾಸ್ ಜಯಂತಿ ಆಚರಿಸಲಾಯಿತು.

ಸಕ್ಷಮ ಜಿಲ್ಲಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಮಾತನಾಡಿ, ದಿವ್ಯಾಂಗರು ಸಂಕಷ್ಟ ಮರೆತು ವಿಶೇಷ ಪ್ರತಿಭೆಯಿಂದ ಬೆಳಗುತ್ತಾರೆ. ದಿವ್ಯಾಂಗರನ್ನು ಕಡೆಗಣಿಸದೇ ಸಹಕರಿಸಬೇಕು. ಅವರನ್ನು ಸಮಾಜ ಗೌರವದಿಂದ ನೋಡಿಕೊಳ್ಳಬೇಕು ಎಂದು ಹೇಳಿದರು.

ಸಕ್ಷಮ ಘಟಕದ ಉಪಾಧ್ಯಕ್ಷ  ಗಣೇಶ ಭಟ್ ವಾರಣಾಸಿ ಸೂರ್ ದಾಸ್ ಜಯಂತಿಯ ಬಗ್ಗೆ ಉಪನ್ಯಾಸ ನೀಡಿದರು. ದೃಷ್ಟಿ ಪ್ರಕೋಷ್ಠದ ಮಂಜುನಾಥ ಮಕ್ಕಳಲ್ಲಿ ಧನಾತ್ಮಕವಾದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು.

ಸಕ್ಷಮದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸುಧಾರತ್ನಾ, ವೇದಪಾಠಶಾಲೆ ಮುಖ್ಯಗುರು ವೇದಮೂರ್ತಿ ಅಮೈ ಶಿವಪ್ರಸಾದ್ ಭಟ್, ಮಂಗಳೂರು ಹವ್ಯಕ ಮಂಡಲದ ಸಹಾಯ ಪ್ರದಾನ ಕೃಷ್ಣ ಪ್ರಮೋದ್ ಶರ್ಮ, ಸಕ್ಷಮ ಜೊತೆ ಕಾರ್ಯದರ್ಶಿ ಭಾಸ್ಕರ ಹೊಸಮನೆ, ಶ್ಯಾಮಲಾ ಆರ್.ಭಟ್, ಅನುಷಾ ಭಟ್ ಮತ್ತಿತರರು ಉಪಸ್ಥಿತರಿದ್ದರು.

ವೇದಪಾಠಶಾಲೆ ಶಿಬಿರಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ದಿವ್ಯಾಂಗತೆ ಬಗ್ಗೆ ಅರಿವು ಮೂಡಿಸುವ ಚಟುವಟಿಕೆಗಳನ್ನು ಆಯೋಜಿಸಿ, ಬಹುಮಾನ ವಿತರಿಸಲಾಯಿತು.

ಜಿಲ್ಲಾ ಖಜಾಂಜಿ ಸತೀಶ್ ರಾವ್ ಅವರು ಸಕ್ಷಮ ಗೀತೆ ಹಾಡಿದರು. ಕಾರ್ಯದರ್ಶಿ ಹರೀಶ್ ಪ್ರಭು ವಂದಿಸಿದರು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top