ಮಂಗಳೂರು: ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ 'ಕಾವ್ಯಾಂ ವ್ಹಾಳೊ-14ʼ ಕವಿಗೋಷ್ಠಿ

Upayuktha
0

 


ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ಮೇ 09, 2026 ರಂದು ʼಕಾವ್ಯಾಂ ವ್ಹಾಳೊ-14ʼ ಶೀರ್ಷಿಕೆಯಡಿ ಕವಿಗೋಷ್ಟಿ ನಡೆಯಿತು.


ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತಾನಾಡಿ, ಕೊಂಕಣಿ ಭಾಷೆಯು ಜಾತಿ, ಮತ ಬೇಧವಿಲ್ಲದೆ ಎಲ್ಲಾ ಚೌಕಟ್ಟುಗಳನ್ನು ಮೀರಿ ಬೆಳೆದಿದೆ. ಎಲ್ಲಾ ಕೊಂಕಣಿಗರು ಅಕಾಡೆಮಿಯ ಜೊತೆ ನಿಕಟ ಸಂಪರ್ಕವನ್ನು ಇಟ್ಟುಕೊಳ್ಳಬೇಕೆಂದು ಹೇಳಿದರು.


ಮುಖ್ಯ ಅತಿಥಿ ʼಪರಿಚಯʼ ಪಾಂಬೂರು ಇದರ ಕಾರ್ಯದರ್ಶಿ ಪ್ರಕಾಶ್ನೊರೊನ್ಹಾ ಮಾತನಾಡಿ, ಕೊಂಕಣಿ ಒಂದು ಮಹಾನ್ಭಾಷೆ. ಕರ್ನಾಟಕದ ಪ್ರಮುಖ ಧರ್ಮಗಳಾದ ಹಿಂದು, ಮುಸ್ಲಿಂ, ಕೈಸ್ತ ಸಮದಾಯಗಳ ಜನರು ಮಾತಾನಾಡುವ ಭಾಷೆ. ಯಾವುದೇ ಭಾಷೆ ಉಳಿಯಬೇಕಾದರೆ ಭಾಷೆಯ ಬಂಧನವಿಲ್ಲದೆ ಕಾಲಕಾಲಕ್ಕೆ ಬಲಾವಣೆಗಳನ್ನು ಸೇರಿಸಿಕೊಂಡು ಮುಂದೆ ಹೋಗಬೇಕು. ಬೇರೆ ಭಾಷೆಗಳ ಶಬ್ದಗಳನ್ನು ಬಳಸಿ, ನಮ್ಮ ಭಾಷೆಯನ್ನು ಶುದ್ಧವಾಗಿ ಮಾತಾನಾಡಲು ಪ್ರಯತ್ನಿಸಿದರೆ, ಭಾಷೆಯ ಬೆಳವಣಿಗೆಯಾಗುತ್ತದೆ ಎಂದರು.


ಕುಡುಬಿ ಸಮುದಾಯದ ಹಿರಿಯ ಕಲಾವಿದ  ಕೆ. ಸುಂದರ ಗೌಡ ಇವರನ್ನು ಸನ್ಮಾನಿಲಾಯಿತು. ಖ್ಯಾತ ಕವಿ  ಡಾ. ವೆಂಕಟೇಶ್ನಾಯಕ್ ಕವಿಗೋಷ್ಟಿ ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು.


ಅವಿಲ್ರಸ್ಕಿನ್ಹಾ, ಕುಸುಮ ಕಾಮತ್, ಸಂಜನಾ ಮಥಾಯಸ್, ಜೆರಿ ಬೊಂದೆಲ್, ಸುಮಾ ವಸಂತ್, ಪ್ರವೀಣ್ತಾವ್ರೊ, ವಿಸ್ಮಯಾ ಲೋಬೊ, ಡಾ. ಸುಮತಿ ಕಾರ್ಕಳ ಇವರು ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯರಾದ ರೊನಾಲ್ಡ್ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಸದಸ್ಯರಾದ ನವೀನ್ಲೋಬೊ ಉಪಸ್ಥಿತರಿದ್ದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top