ಬಳ್ಳಾರಿ: ತಾಲೂಕಿನ ಚರಕುಂಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ಶ್ರೀ ಎರಿತಾತ ದೇವಸ್ಥಾನದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಒಂದು ಲಕ್ಷ ರೂಪಾಯಿ ಹಣವನ್ನು ಸಹಾಯಧನವನ್ನಾಗಿ ನೀಡಿರುತ್ತಾರೆ. ಸಂಸ್ಥೆಯಿಂದ ನೀಡಲಾದ ಡಿ. ಡಿ ಯನ್ನು ಬಳ್ಳಾರಿ ತಾಲೂಕಿನ ನಂಬರ್ 2 ಕಚೇರಿಯ ಯೋಜನಾಧಿಕಾರಿ ಸತೀಶ್ ಜಿ ಅವರು ಶ್ರೀ ಎರಿತಾತ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಮತ್ತು ಕಾರ್ಯದರ್ಶಿ ಕೃಷ್ಣ ಅವರಿಗೆ ಊರಿನ ಗಣ್ಯರ ಮತ್ತು ಹಲವು ಜನ ಭಕ್ತರ ಸಮ್ಮುಖದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಸದಸ್ಯರಾದ, ಹೋಟೆಲ್ ಹನುಮಂತ, ಎರ್ರಿಸ್ವಾಮಿ, ರಂಗಪ್ಪ, ಸಣ್ಣ ಹನುಮಂತಪ್ಪನವರ ನಾಗರಾಜ, ತಿಮ್ಮಪ್ಪ, ಮಾರಣ್ಣ, ಕೆಂಚಪ್ಪ, ಬೈಲೂರು ಹನುಮಂತಪ್ಪ, ಸಂಘದ ಸದಸ್ಯರಾದ ಲಕ್ಷ್ಮಿ ರತ್ನಮ್ಮ, ಗ್ರಾಮದ ಕೆ ಹನುಮಂತ ಸೇರಿದಂತೆ ಟ್ರಸ್ಟ್ ನ ಇತರ ಸದಸ್ಯರು ಹಾಗೂ ವಲಯದ ಮೇಲ್ವಿಚಾರಕರಾದ ಎ ನಂದೀಶ್, ಸೇವಾ ಪ್ರತಿನಿಧಿ ಅನ್ನಪೂರ್ಣ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


