ಮಹಿಳಾ ಆಯೋಗದ ಸೂಚನೆಗೂ ಬೆಲೆ ಇಲ್ಲ: ಮಂಗಸೂಳಿಯಲ್ಲಿ ಬಡ ಕುಟುಂಬಕ್ಕೆ ತಪ್ಪದ ಚರಂಡಿ ಸಂಕಷ್ಟ

Upayuktha
0


​ಮಂಗಸೂಳಿ/ಕಾಗವಾಡ: ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ವಾರ್ಡ್ ನಂ. 6ರಲ್ಲಿ ಪಂಚಾಯತ್ ನಿರ್ಮಿಸಿದ ಅವೈಜ್ಞಾನಿಕ ಚರಂಡಿಯಿಂದಾಗಿ ಬಡ ಕುಟುಂಬವೊಂದು ಬೀದಿಗೆ ಬೀಳುವ ಭೀತಿ ಎದುರಿಸುತ್ತಿದೆ. ನಿವಾಸಿ ರೋಹಿಣಿ ಭಂಡಾರೆ ಅವರ ಮನೆಯ ಗೋಡೆಗೆ ಅಂಟಿಕೊಂಡೇ ಚರಂಡಿ ಇರುವುದರಿಂದ ಮನೆ ಗೋಡೆಗಳು ಶಿಥಿಲಗೊಂಡು ಕುಸಿಯುವ ಹಂತ ತಲುಪಿವೆ.


​ಮುಖ್ಯಾಂಶಗಳು:

​ಅಧಿಕಾರಿಗಳ ನಿರ್ಲಕ್ಷ್ಯ: ತಹಶೀಲ್ದಾರರು ಮತ್ತು ಪಂಚಾಯತ್‌ಗೆ ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.

​ಆದೇಶ ಉಲ್ಲಂಘನೆ: ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರು ಸ್ವತಃ ಪಿಡಿಒಗೆ ಕರೆ ಮಾಡಿ ಸೂಚಿಸಿದರೂ ಸಮಸ್ಯೆ ಬಗೆಹರಿದಿಲ್ಲ.


​ಹೋರಾಟಗಾರರ ಭೇಟಿ: ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ರಾಜ್ಯಾಧ್ಯಕ್ಷರು ಬಿ ಹೆಚ್ ಜಮಾದಾರ್ ನೇತೃತ್ವದಲ್ಲಿ ಅಥಣಿ ಘಟಕದ ಮುಖ್ಯಸ್ಥರಾದ ಪ್ರವೀಣ ನಾಯಿಕ ಮತ್ತು ತಂಡ ಸ್ಥಳ ಪರಿಶೀಲನೆ ನಡೆಸಿ, ಕೂಡಲೇ ಪೈಪ್‌ಲೈನ್ ಅಳವಡಿಸಲು ಅಧಿಕಾರಿಗಳನ್ನು ಒತ್ತಾಯಿಸಿದೆ.


​ಸಾರ್ವಜನಿಕ ಚರಂಡಿಗೆ ನೀರು ಬಿಡಲು ಅಡ್ಡಿಪಡಿಸುತ್ತಿರುವುದು ಕಾನೂನುಬಾಹಿರವಾಗಿದ್ದು, ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಮಹೇಶ್ ಶರ್ಮಾ ಅನೀಲ ಭಾಮನೆ, ಶರಣಪ್ಪ ಶಿಂದೆ ಹಾಗೂ ಆಗ್ರಹಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top