ಕಾಳಜಿ ವಿಚಾರ ಬಂದಾಗ ತಾಯಿ ಪ್ರಧಾನ ಪಾತ್ರ ನಿರ್ವಹಿಸುತ್ತಾಳೆ: ಡಾ. ಶಿವಪ್ರಕಾಶ್

Upayuktha
0

 



ಮಂಗಳೂರು: ಹೆಣ್ಣು ತಾಯಿಯಾಗಿ, ತಂಗಿಯಾಗಿ, ಗೆಳತಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಅತ್ತೆಯಾಗಿ, ನಾದಿನಿಯಾಗಿ, ಅತ್ತಿಗೆಯಾಗಿ ಬದುಕಿನಲ್ಲಿ ವಿವಿಧ ಸಂಬಂಧಗಳನ್ನು ನಿರ್ವಹಿಸುತ್ತಾಳೆ ಆದರೆ ಕಾಳಜಿ ವಿಚಾರ ಬಂದಾಗ ತಾಯಿ ಮಾತ್ರನೇ ಪ್ರಧಾನ ಪಾತ್ರ ವಹಿಸುತ್ತಾಳೆ, ಒಂದು ಕೈ ಹೆಚ್ಚೇ  ತೋರಿಸುತ್ತಾಳೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಡಾಕ್ಟರ್ ಶಿವಪ್ರಕಾಶ್ ಡಿ.ಎಸ್ ಹೇಳಿದರು.

 

ಅವರು ಸೌಮ್ಯ ಶೆಟ್ಟಿ ಸಾರಥ್ಯದ "ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನ, ಬೆಂಗಳೂರು" ಇವರು ಮಂಗಳೂರಿನಲ್ಲಿ ಮೇ 20ರಂದು ರಂದು ಆಯೋಜಿಸಿದ್ದ "ಮಹಿಳಾ ಸಂಭ್ರಮ" ಕವಿಗೋಷ್ಠಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 

ನಾವೆಲ್ಲ ಸಣ್ಣವರಿದ್ದಾಗಿನಿಂದಲೂ ಪುರುಷ ಪ್ರಧಾನ ಸಮಾಜವನ್ನು ನೋಡಿಕೊಂಡು ಬೆಳೆದವರು. ಮನೆ ಯಜಮಾನ ಪತ್ರಿಕೆ ಹಿಡಿದುಕೊಂಡು ಕೂತರೆ ಮನೆ ಕೆಲಸವನ್ನೆಲ್ಲ ಹೆಂಡತಿಯೇ ಮಾಡಬೇಕಾಗಿತ್ತು. ಆದರೆ ಈಗ ಕೊಂಚ ಬದಲಾಗಿದೆ. 60:40 ಅನುಪಾತಕ್ಕೆ ಬಂದು ನಿಂತಿದೆ. ಅದು 50: 50 ಅನುಪಾತಕ್ಕೆ ಬರಬೇಕಾದರೆ ಇನ್ನೂ ಸ್ವಲ್ಪ ಸಮಯ ಹಿಡಿಯಬಹುದು ಎಂದು ಎಂದು ಅಭಿಪ್ರಾಯ ಪಟ್ಟರು.

 

ಅನುರಾಧ ರಾಜೀವ್ ಸುರತ್ಕಲ್ ಇವರ ಅಧ್ಯಕ್ಷತೆಯಲ್ಲಿ  ನಡೆದ  ಕವಿಗೋಷ್ಠಿಯಲ್ಲಿ ತಂನ್ಸಿರಾ ಆತುರು, ರೇಖಾ ಸುರೇಶ್ ರಾವ್, ಆಯಿಷಾ ಪೆರ್ನೆ, ರಶ್ಮಿ ಸನಿಲ್, ಸಿಹಾನ ಬಿ.ಎಮ್. ಮತ್ತು ಕಸ್ತೂರಿ ಜಯರಾಮ್ ಮಹಿಳೆ, ಮಹಿಳಾ ಸ್ವಾಭಿಮಾನ, ಮಹಿಳಾ ಹೋರಾಟದ ಮುಂತಾದ ವಿಷಯಗಳ ಕುರಿತು ಕವನಗಳನ್ನು ವಾಚಿಸಿದರು. ಸಂಜೆ ಗಂಟೆ 4:00 ರಿಂದ 5:30 ತನಕ ಕನ್ನಡ ಗೀತಗಾಯನ ನಡೆಯಿತು.   ರಾಣಿ ಪುಷ್ಪಲತಾದೇವಿ, ಪವಿತ್ರ ಮತ್ತು ಗಂಗಾಧರ್ ಗಾಂಧಿ, ಬೆಳ್ಳಿ ತೆರೆಯ ಬಂಗಾರದ ಗೀತೆಗಳಿಗೆ ದ್ವನಿಯಾಗಿದ್ದು ನೆರೆದ ಪ್ರೇಕ್ಷಕರನ್ನು ರಂಜಿಸಿತು.

 

ಬೆಂಗಳೂರಿನ ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ಸೌಮ್ಯ ಶೆಟ್ಟಿ, ಉಪಾನ್ಯಸಕ ರಾಮಾಂಜಿ ನಮ್ಮ ಭೂಮಿ, ಸಾಮಾಜಿಕ ಕಾರ್ಯಕರ್ತ ರಂಜನ್ ಕುಮಾರ್ ಉಪಸ್ಥಿತರಿದ್ದರು.

 


ಗಂಗಾಧರ್ ಗಾಂಧೀ ಸ್ವಾಗತಿಸಿ,  ರೇಖಾ ಸುದೇಶ ರಾವ್ ಒಂದೇ ಮಾತರಂ ಗೀತೆ ಹಾಡುವ ಮೂಲಕ ಪ್ರಾರ್ತಿಸಿದರು. ಮಹಿಳಾ ಸಂಭ್ರಮ ಕವಿಗೋಷ್ಠಿ ಕಾರ್ಯಕ್ರಮದ ನಿರೂಪಣೆಯನ್ನ ಗಂಗಾಧರ್ ಗಾಂಧೀ ನಿರ್ವಹಿಸಿದರೆ, ಸಭಾ ಕಾರ್ಯಕ್ರಮದ ನಿರೂಪಣೆ ರಶ್ಮಿ ಸನಿಲ್ ನಿರೂಪಿಸಿದರು. ರಾಣಿ ಪುಷ್ಪಲತಾ ದೇವಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top