ಬೆಳಗಾವಿ:
ಶಾಸಕ ರಾಜು ಕಾಗೆ ಅವರ
68ನೇ ಹುಟ್ಟುಹಬ್ಬದ ನಿಮಿತ್ತ ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಚಮಕೇರಿ ಗ್ರಾಮದ ಸುಕನ್ಯಾ ವೃದ್ದಾಶ್ರಮದಲ್ಲಿ ಹಣ್ಣು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪತ್ರಿಕಾ
ಮಾಧ್ಯಮ ಬಡವರ ಸೇವಾ ಸಂಸ್ಥೆಯ
PMBS ರಾಜ್ಯಾಧ್ಯಕ್ಷರು
ಹಾಗೂ ಶ್ರೀ ಸ್ವಾಮಿ ವಿವೇಕಾನಂದ
ಶಿಕ್ಷಣ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆ ಅಧ್ಯಕ್ಷರಾದ ಪ್ರವೀಣ ನಾಯಿಕ ಅವರು ವೃದ್ಧರಿಗೆ ಹಣ್ಣು
ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೇರ ನುಡಿ, ದಿಟ್ಟ
ನಿರ್ಧಾರ ಹಾಗೂ ನಿರಂತರವಾಗಿ ಕಾಗವಾಡ
ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಧೀಮಂತ ನಾಯಕರು ರಾಜು ಕಾಗೆ ಅವರು.
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವ ಜನನಾಯಕರು ಇವರು. ಇಂತಹ ವೃದ್ದಾಶ್ರಮಗಳಿಗೆ ಭೇಟಿ
ನೀಡಿ ಸಹಾಯ ಸಹಕಾರ ನೀಡುವುದು
ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ನಂತರ
ವೃದ್ಧಾಶ್ರಮದ ನಿವಾಸಿಗಳಿಗೆ ಹಣ್ಣು ವಿತರಿಸಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ
ಮಹಾದೇವ ಬಿರಾದಾರ, ಶರಣಪ್ಪಾ ಶಿಂದೆ, ಅನೀಲ ಭಾಮನೆ, ಎಂ
ಶರ್ಮಾ, ಶಿವಾನಂದ ನಾವಿ ಹಾಗೂ ಪ್ರಶಾಂತ
ಶಿಂದೆ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


