ಮಂಗಳೂರು:
ಯಕ್ಷಗಾನವನ್ನು ಚೆನ್ನಾಗಿ ಅರಿತುಕೊಂಡವರಾದರೆ ತೆಂಕು-ಬಡಗು ಎಂಬ ಭೇಧವನ್ನು
ತೋರುವುದಿಲ್ಲ. ಸೌಹಾರ್ದತೆಯಿಂದ ಸಮಭಾವದಿಂದ ಜೊತೆಯಾಗಿ ಸಾಗಬಹುದಾಗಿದೆ. ಅಂತಹ ಒಂದು ದೊಡ್ಡ
ಕಾರ್ಯವನ್ನು ಖ್ಯಾತ ಬಣ್ಣದ ವೇಷಧಾರಿ ದಿ. ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ
ಮಾಡಿತೋರಿಸಿದ್ದಾರೆ. ಮಾಸದ ಬಣ್ಣದ ದೈತ್ಯ
ಪ್ರತಿಭೆಯಾಗಿದ್ದು ಇಪ್ಪತ್ತಾರು ಬಾರಿ ವಿದೇಶ ಸಂಚಾರವನ್ನು
ಮಾಡಿ "ಯಕ್ಷ ಬಣ್ಣ"ವನ್ನು
ಜಗತ್ತಿಗೇ ಪ್ರಸರಿಸಿದ ಮಹಾನ್ ಕಲಾವಿದರಾಗಿದ್ದರು. ಈ ಬಾರಿ ಅವರ
ಜನ್ಮಶತಾಬ್ದಿಯ ಪ್ರಯುಕ್ತ ಶತ ಕಾರ್ಯಕ್ರಮಗಳ ಯೋಜನೆ
ಸಿದ್ಧವಾಗಿದ್ದು ಸುಮಾರು ಅರ್ಧಶತಕ ದ ಸನ್ಮಾನ, ಆಟ-
ಕೂಟಗಳು ಜರಗಿವೆ" ಎಂದು ಸಕ್ಕಟ್ಟುರವರ ಸುಪುತ್ರ
ಮಂಜುನಾಥಯ್ಯ ಸಕ್ಕಟ್ಟು ರವರು ಹೇಳಿದರು.
ಅವರು
ಕೊಲ್ಲಂಗಾನ ಮೇಳದ ತಿರುಗಾಟದ ಕೊನೆಯ
ಸೇವೆಯಾಟದಂದು ಸಕ್ಕಟ್ಟು ಲಕ್ಷೀನಾರಾಯಣಯ್ಯ ಜನ್ಮ ಶತಮಾನೋತ್ಸವದ ಪ್ರಯುಕ್ತ
ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿ.
ಅನಂತ ಪದ್ಮನಾಭ ಉಪಾಧ್ಯಾಯರು; ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯರ ಸಂಸ್ಮರಣೆ ಹಾಗೂ ಭಾಗವತ ಮನೋಹರ
ಬಲ್ಲಾಳ್ ಅಡ್ವಳ, ಹಿಮ್ಮೇಳ ಕಲಾವಿದ ಕೊಲ್ಲಂಗಾನ ರವಿಶಂಕರ ಶೆಟ್ಟಿ ಹಾಗೂ ಬಣ್ಣದ ಕಲಾವಿದ
ಕೆಡೆಂಜಿ ಸುಬ್ರಹ್ಮಣ್ಯ ಭಟ್ ರವರ ಅಭಿನಂದನಾ
ಕಾರ್ಯಕ್ರಮವನ್ನು ಮೇಳದ ಪ್ರಧಾನ ಕಲಾವಿದ
ವರ್ಕಾಡಿ ರವಿ ಅಲೆವೂರಾಯ ನಡೆಸಿಕೊಟ್ಟರು.
ಕ್ಷೇತ್ರದ
ತಂತ್ರಿಗಳಾದ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯರು ಆಶೀರ್ವಚನವಿತ್ತರು. ಕಲಾವಿದ, ಯಕ್ಷಗುರು ಪಡುಮಲೆ ಜಯರಾಮ ಪಾಟಾಳಿ ಯವರು ಸಾಂದರ್ಭಿಕವಾಗಿ ಕಲಾವಿದರಿಗೆ,
ಮೇಳಕ್ಕೆ ಶುಭವನ್ನು ಕೋರಿದರು. ಶ್ರೀಮತಿ ದೀಕ್ಷಾ ಸತೀಶ್ ಸ್ವಾಗತಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ರವರು ನಿರ್ವಹಿಸಿದರು. ಕಲಾವಿದ
ಸುಮನ್ ರಾಜ್ ನೀಲೆಂಗಳ ರವರು
ಧನ್ಯವಾದವಿತ್ತರು. ಬಳಿಕ ಮೇಳದ ವತಿಯಿಂದ
"ಜಾಂಬವತಿ ಕಲ್ಯಾಣ -ರತಿ ಕಲ್ಯಾಣ" ಗಳೆಂಬ
ಕಲ್ಯಾಣದ್ವಯ ಪ್ರಸಂಗಗಳು ಪ್ರದರ್ಶನಗೊಂಡವು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


