ಮಂಗಳೂರು:
ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘ (ABRSM), ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (KRMSS) ಮಂಗಳೂರು ವಿಭಾಗ ಮತ್ತು ಕೆನರಾ ಕಾಲೇಜು (ಸ್ವಾಯತ್ತ) ಮಂಗಳೂರಿನ ಹಿಂದಿ ವಿಭಾಗದ ಜಂಟಿ ಆಶ್ರಯದಲ್ಲಿ "ಭಾರತೀಯ
ಸಂತ ಪರಂಪರೆ ಉಪನ್ಯಾಸ ಮಾಲಿಕೆ - 4" ರ ಅಂಗವಾಗಿ ಸಂತ
ರವಿದಾಸರ 650ನೇ ಜನ್ಮ ವರ್ಷಾಚರಣೆ
ಕಾರ್ಯಕ್ರಮವು ಮೇ 21, 2026 ರಂದು ಮಧ್ಯಾಹ್ನ 2:30 ಕ್ಕೆ
ಕಾಲೇಜಿನ ಶ್ರೀಮತಿ ರತ್ನ ಎಸ್. ಶೆಣೈ
ಮೆಮೋರಿಯಲ್ ಹಾಲ್ನಲ್ಲಿ ಜರುಗಿತು.
ಮಂಗಳೂರು ಆಕಾಶವಾಣಿಯ ಪ್ರಸಾರ ನಿರ್ವಾಹಕ ಶ್ರೀ ಲತೀಶ್ ಪಾಲ್ದಾನೆ
ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ನಾಗರತ್ನ ರಾವ್ ಅವರು ಸಂಪನ್ಮೂಲ
ವ್ಯಕ್ತಿಯಾಗಿ ಭಾಗವಹಿಸಿ, ಸಂತ ರವಿದಾಸರ ಜೀವನ,
ಆದರ್ಶಗಳು ಹಾಗೂ ಭಾರತೀಯ ಸಂತ
ಪರಂಪರೆಯ ಮಹತ್ವದ ಕುರಿತು ಮುಖ್ಯ ಉಪನ್ಯಾಸ ನೀಡಿದರು.
ಕಾಲೇಜಿನ
ಪ್ರಾಂಶುಪಾಲರಾದ ಡಾ. ಪ್ರೇಮಲತಾ ವಿ.
ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಸಂತ ಪರಂಪರೆಯ ಮೌಲ್ಯಗಳನ್ನು
ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
KRMSS ರಾಜ್ಯ
ಜಂಟಿ ಪ್ರಧಾನ ಕಾರ್ಯದರ್ಶಿಗಳಾದ ಡಾ. ಮಾಧವ ಎಂ.
ಕೆ.,ಕೆನರಾ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುಜಾತ ಜಿ. ನಾಯಕ್, ಬಿಸಿಎ
ಉಪನ್ಯಾಸಕರಾದ ಶ್ರೀ ಕಾರ್ತಿಕ್, KRMSS ಸದಸ್ಯರಾದ
ಬಿ. ಕೆ. ಕುಮಾರ್ ಸರ್
ಹಾಗೂ ಹಿಂದಿ ಉಪನ್ಯಾಸಕರಾದ ಡಾ. ನಮಿತಾ ಅವರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಥಮ ಬಿ.ಕಾಂ ವಿದ್ಯಾರ್ಥಿನಿ
ಪ್ರತೀಕ್ಷಾ ಪ್ರಾರ್ಥಿಸಿ, ಶ್ರೇಯಾ ಭಟ್ ಸ್ವಾಗತಿಸಿದರೆ, ಐಸಿರಿ,
ದ್ವಿತೀಯ ಬಿ.ಬಿ.ಎ,
ಮುಖ್ಯ ಅತಿಥಿಗಳನ್ನು ಪರಿಚಯಿಸಿದರು ಮತ್ತು ಪ್ರಥಮ ಬಿ.ಕಾಂ ವಿದ್ಯಾರ್ಥಿಗಳು
ಸಂತ ರವಿದಾಸರ ದ್ವಿಪದಿಗಳನ್ನು ಹಾಡಿದರು. ರಿತಿಕಾ ಆರ್. ಶಣೈ ಧನ್ಯವಾದ
ಸಮರ್ಪಿಸಿ, ಪ್ರತೀಕ್ಷಾ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


