ಇವರ ಧೃತಿಗೆ, ಮತಿಗೆ ಏನಾಗಿದೆ ಎನ್ನುವುದೇ ಅತೀ ದೊಡ್ಡ ಪ್ರಶ್ನೆ!

Upayuktha
0

 



ಭಾರತದ ರಾಜಕೀಯ ಇತಿಹಾಸದಲ್ಲಿ ಇನ್ನೊಂದು  ದಯನೀಯ ಪರಿಸ್ಥಿತಿ ಹುಟ್ಟಿ ಕೊಂಡಿದೆ. ಪ್ರಾರಂಭದಲ್ಲಿಯೇ ರಾಜಕೀಯವಾಗಿ ಹೆಚ್ಚು ಚರ್ಚೆಗೆ ಗ್ರಾಸವಾದ ಮಹಿಳೆ ಎಂದೇ ಖ್ಯಾತಿಗೊ ಅಪಖ್ಯಾತಿಗೊ ಒಳಗಾದ ಮಹಿಳೆ ಅಂದರೆ ಪಶ್ಚಿಮ ಬಂಗಾಳದ ದೀದಿ ಎಂದೇ ಕರೆಸಿಕೊಂಡ ಮಮತಾ ಬ್ಯಾನರ್ಜಿ.


ಈಗ ಚುನಾವಣೆ ಎಲ್ಲಾ ಮುಗಿದಿದೆ ಅವರ ಪಕ್ಷವೂ ಸೇೂತಿದ್ದು ಮಾತ್ರವಲ್ಲ ಸ್ವತ: ದೀದಿಯೇ ತನ್ನ ಎರಡು ಕ್ಷೇತ್ರಗಳಲ್ಲಿ ಕೂಡ ಸೇೂತಿದ್ದಾರೆ. ಇಷ್ಟಾದರೂ ಕೂಡಾ ನಾನು ಸೇೂತಿಲ್ಲ, ಮುಖ್ಯ ಮಂತ್ರಿ ಪದವಿಗೆ ರಾಜೀನಾಮೆ ನೀಡುವುದಿಲ್ಲ ಅನ್ನುವ ದೀದಿಯ ದಾದಾ ಗಿರಿ ಹೇಳಿಕೆ ನೇೂಡುವಾಗ ಮತಕಟ್ಟೆಯ ಫಲಿತಾಂಶದಿಂದ ಮಮತಾ ಎಷ್ಟೊಂದು ಮತಿಗೆಟ್ಟು ಹೇೂಗಿದ್ದಾರೆ ಅನ್ನುವುದು ಅಷ್ಟೇ ಸ್ವಷ್ಟವಾಗುತ್ತಿದೆ.


ಚುನಾವಣಾ ಫಲಿತಾಂಶ ಹೊರ ಬಿದ್ದ ತಕ್ಷಣವೇ ತಮ್ಮ ಸೇೂಲನ್ನು ಒಪ್ಪಿಕೊಂಡು ಮರ್ಯಾದೆ, ಗೌರವದಿಂದ ತಮ್ಮ ಸೇೂಲನ್ನು ಮನಸಾರೆ ಒಪ್ಪಿಕೊಂಡು ರಾಜ್ಯಪಾಲರಿಗೆ ತಮ್ಮ  ರಾಜೀನಾಮೆ ನೀಡಲು ಮುಂದಾಗಬೇಕಿತ್ತುಇದು ಅವರ ಘನತೆ, ಗೌರವ ಸ್ವಲ್ಪವಾದರೂ ಹೆಚ್ಚಿಸುತ್ತಿತ್ತು.ಅದನ್ನು ಬಿಟ್ಟು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನೆ ಧಿಕ್ಕರಿಸಿ ಉಡಾಫೆ ಮಾಡಿ ಸಂವಿಧಾನಕ್ಕೆ ಕಳಂಕ ತರುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ನೇೂಡಿದರೆ ಅವರ ಮನಸ್ಸು ಎಷ್ಟೊಂದು ಧೃತಿಗೆಟ್ಟು ಹೇೂಗಿರುವುದಕ್ಕೆ ಇನ್ನೊಂದು ಉದಾಹರಣೆ ಬೇಕಾ?


ಈಗ ಅವರನ್ನು ಕಾಡುತ್ತಿರುವ ಮೊದಲ ಸಮಸ್ಯೆ ಅಂದರೆ  ಆಕೆ ಎರಡು ಕ್ಷೇತ್ರಗಳಲ್ಲಿ ಸೇೂತ ಕಾರಣದಿಂದಾಗಿ ವಿಧಾನ ಸಭೆಯನ್ನು ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ವೇದನೆಯನ್ನು ಪ್ರದಶ೯ನ ಮಾಡುವ  ಇನ್ನೊಂದು  ನಾಟಕದ ವೇದಿಕೆ ಸಜ್ಜು ಮಾಡಿಕೊಂಡಂತಿದೆ.


* ಇವರ  ರೀತಿಯ ನಡೆಯಿಂದ ಸಂವಿಧಾನಕವಾಗಿ ಯಾವುದೆ ಸಮಸ್ಯೆ ಸೃಷ್ಟಿಯಾಗುದಿಲ್ಲ. ಬದಲಾಗಿ ಮುಖ್ಯ ಮಂತ್ರಿಯಾಗಿ ಇಷ್ಟೊಂದು ಕಾಲ ಅಧಿಕಾರ ನಡೆಸಿದ ಅವರ ಮರ್ಯಾದೆಗೆ ಬೆಲೆ ಇಲ್ಲದಂತೆ ಆಗುವ ಪರಿಸ್ಥಿತಿ ನಿಮಾ೯ಣ ಮಾಡಿಕೊಂಡಿರುವುದು ಅತ್ಯಂತ  ಖೇದ ಪ್ರಸಂಗವೆಂದೇ ಹೇಳಬಹುದು.


* ಇವರು ರಾಜಿನಾಮೆ ಕೊಡಲಿ ಬಿಡಲಿ ಸದನದ ಅವಧಿ ಮುಗಿದ ತಕ್ಷಣವೇ ಇವರ ಅಧಿಕಾರ ಸ್ವಾಭಾವಿಕವಾಗಿ ಕೊನೆಗೊಳ್ಳುತ್ತದೆ. ಅವರಿಗೆ ನೀಡಿದ ವಿಶೇಷ ಸವಲತ್ತುಗಳು, ಅಧಿಕಾರಿಗಳು ದೂರ ಸರಿಯಲೇ ಬೇಕು.


* ಬಹುಮತ ಗಳಿಸಿದ ಪಕ್ಷದ ನಾಯಕರು, ರಾಜ್ಯಪಾಲರನ್ನು ಕಂಡು ಸರ್ಕಾರ ಕಟ್ಟಲು ಅನುಮತಿ ಕೇೂರುತ್ತಾರೆ. ಹೊಸ ಮುಖ್ಯ ಮಂತ್ರಿ ಪದಗ್ರಹಣ ಕೂಡಾ ವಿಧಿವತ್ತಾಗಿ ನಡೆಯುತ್ತದೆ. ಅವರಿಗೆ ಬೇಕಾದ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ  ನೇಮಿಸುತ್ತಾರೆ.


ಇಲ್ಲಿ ನಮಗೆ ಆಶ್ಚರ್ಯವಾಗುವುದೆಂದರೆ ದೀದಿಯವರು ನಿರೀಕ್ಷೆ ಮಾಡದ ಸೇೂಲಿನಿಂದ ಧೃತಿ ಕೆಡುವುದು ಸಹಜ.ಇವರನ್ನು  ಬೆಂಬಲಿಸಿಕೊಂಡು ಮಾತನಾಡುವ ಇತರ ಪಕ್ಷದ  ನಾಯಕರು ಇದ್ದರಲ್ಲಾ. ಇವರ ದೃತಿಗೆ ಮತಿಗೆ ಏನಾಗಿದೆ ಅನ್ನುವುದು ಅತೀ ದೊಡ್ಡ  ಪ್ರಶ್ನೆ.

 

ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ

ಉಡುಪಿ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top