ಹುಬ್ಬಳ್ಳಿ: ತದ್ವಿದ್ಯ ಸಂಭಾಷ ಪರಿಷತ್ ವತಿಯಿಂದ ಆಯೋಜಿಸಲಾದ 8ನೇ ಅಂತರರಾಷ್ಟ್ರೀಯ ಸಮ್ಮೇಳನವು ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಮೇ 1 ರಂದು ಭವ್ಯವಾಗಿ ನಡೆಯಿತು. ಈ ಸಂದರ್ಭದಲ್ಲಿ, ಕಣಚೂರು ಆಯುರ್ವೇದ ಮೆಡಿಕಲ್ ಕಾಲೇಜು ನಾಟೆಕಲ್ ಮಂಗಳೂರು ಇಲ್ಲಿನ ಸಹ ಪ್ರಾಧ್ಯಾಪಕರಾದ ಡಾ. ಅಶ್ವಿನ್ ಕೆ ಅವರಿಗೆ ಪ್ರತಿಷ್ಠಿತ “ರಚನಾವಿಧ – ಯಂಗ್ ಅನಾಟಮಿಸ್ಟ್ ಪ್ರಶಸ್ತಿ” ಯನ್ನು ಶಾಲು ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಪ್ಲಾಸ್ಟಿನೇಷನ್ ತಂತ್ರಜ್ಞಾನವು ಜೀವಕೋಶಗಳಲ್ಲಿರುವ ನೀರು ಮತ್ತು ಕೊಬ್ಬುಗಳನ್ನು ಪಾಲಿಮರ್ ಮೂಲಕ ಬದಲಾಯಿಸುವ ಅತ್ಯಾಧುನಿಕ ವಿಧಾನವಾಗಿದ್ದು, ಅನಾಟಮಿ ಅಧ್ಯಯನದಲ್ಲಿ ಮಹತ್ವದ ಸ್ಥಾನ ಪಡೆದಿದೆ.
ಈ ಪ್ರಶಸ್ತಿಯನ್ನು ಅವರು ಭಾರತದಲ್ಲಿ ಮೊದಲ ಬಾರಿಗೆ ಪೂರ್ಣ ಭ್ರೂಣವನ್ನು ಪ್ಲಾಸ್ಟಿನೇಷನ್ ಮಾಡುವ ಸಾಧನೆಗಾಗಿ ನೀಡಿ ಗೌರವಿಸಲಾಗಿದೆ. ಈ ಸಾಧನೆ ಅನಾಟಮಿ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಿದೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಆಯುಷ್ ವಿಭಾಗದ (NCISM )ಅಧ್ಯಕ್ಷ ಡಾ ಅಲ್ಲಮ ಪ್ರಭು ಗುಡ್ಡ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಜೊತೆಗೆ ಗಣ್ಯರಾದ ಡಾ ಪ್ರಶಾಂತ್ ಎ ಎಸ್, ಗೋವಿಂದ ಜೋಶಿ, ಡಾ ವಿ ಎಸ್ ಪಿ ಪ್ರಸಾದ್ ಡಾ ಜೆ ಆರ್ ಜೋಶಿ ಮತ್ತು ಸಂಜೀವ ಜೋಶಿ ಉಪಸ್ಥಿತರಿದ್ದರು.
ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಪಂಡಿತರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದು, ಆಯುರ್ವೇದ ಹಾಗೂ ಸಂಬಂಧಿತ ವಿಜ್ಞಾನಗಳಲ್ಲಿ ನಡೆಯುತ್ತಿರುವ ಹೊಸ ಆವಿಷ್ಕಾರಗಳ ಬಗ್ಗೆ ಚರ್ಚೆ ನಡೆಸಿದರು.
ಈ ಗೌರವವು ಯುವ ಸಂಶೋಧಕರು ಪರಂಪರಾಗತ ಹಾಗೂ ಆಧುನಿಕ ವೈದ್ಯಕೀಯ ಕ್ಷೇತ್ರಗಳಲ್ಲಿ ನೀಡುತ್ತಿರುವ ಮಹತ್ವದ ಕೊಡುಗೆಯನ್ನು ಮತ್ತೊಮ್ಮೆ ಬೆಳಗಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


