ವಿವೇಕಾನಂದ ಕಾಲೇಜು: ರಾಜ್ಯಶಾಸ್ತ್ರ ವಿಭಾಗದ ರಾಷ್ಟ್ರೀಯ ವಿಚಾರ ಸಂಕಿರಣ

Upayuktha
0

 ಭಾರತದ ಭವಿಷ್ಯದತ್ತ ಯುವಜನತೆ ಗಮನಹರಿಸಬೇಕು- ಪ್ರೊ.ಗೋಪಕುಮಾರ್

ಪುತ್ತೂರು: ಇಂದಿನ ಯುವಜನತೆ ಭಾರತದ ಭದ್ರ ಭವಿಷ್ಯದತ್ತ ಗಮನಹರಿಸಬೇಕಾದುದು ಅತೀ ಅಗತ್ಯ. ಭಾರತದ ಒಟ್ಟು ಜನಸಂಖ್ಯೆಯನ್ನು ಗಮನಿಸುವುದಾದರೆ ನಮ್ಮ ಪೀಳಿಗೆಯೇ 50 ಶೇಕಡವಿದ್ದಾರೆ. ಭಾರತ ಒಂದು ವಿಶಾಲ ರಾಷ್ಟ್ರ. ನಮ್ಮ ಐತಿಹಾಸಿಕ ಹಿನ್ನಲೆಯನ್ನು ನಾವು ಎಂದಿಗೂ ಮರೆಯಬಾರದು. 5000 ವರ್ಷಗಳಷ್ಟು ಸುದೀರ್ಘ ಅಸ್ತಿತ್ವದ ಕುರಿತು ನಾವು ಹೆಮ್ಮೆ ಪಡಬೇಕು. ನಾವು ಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡಬೇಕು. ಮೂಲಕ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಪಾಲ್ಗೊಂಡು ಮೂಲಕ ವಿಕಸಿತ ಭಾರತದ ಭಾಗವಾಗಬೇಕು ಎಂದು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ. ಗೋಪ ಕುಮಾರ್ ಹೇಳಿದರು.

ಇವರು ವಿವೇಕಾನಂದ  ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ಇಲ್ಲಿನ ರಾಜ್ಯಶಾಸ್ತ್ರ ವಿಭಾಗ, ವಿವೇಕಾನಂದ ಸಂಶೋಧನಾ ಕೇಂದ್ರ, ಐಕ್ಯೂಎಸಿ ಸಂಘ ಹಾಗೂ ಮಾನವಿಕ ವಿಭಾಗಗಳ ಸಹಯೋಗದಲ್ಲಿ 'ರಿ ಇಮ್ಯಾಜಿನಿಂಗ್ ಇಂಡಿಯಾ: ಫ್ರಮ್ ಪೊಲಿಟಿಕಲ್ ಡಿಸ್ಕೋರ್ಸ್ ಟು ಕನ್ಟೆಪರಿರಿ ರಿಯಾಲಿಟಿಸ್' ಎನ್ನುವ ವಿಚಾರದ ಮೇಲೆ ನಡೆದ ರಾಷ್ಟೀಯ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡುತ್ತಾ, ಭಾರತ ಧರ್ಮ, ಸಂಸ್ಕೃತಿಗೆ ಹೆಸರುವಾಸಿಯಾದ ದೇಶ. ಧರ್ಮದ ಆಧಾರದಲ್ಲಿಯೇ ನಾವು ನಡೆಯಬೇಕು. ನಮ್ಮ ದೇಶಕ್ಕೆ ಅಬ್ದುಲ್ ಕಲಾಂ, ಚಿದಂಬರಂ ಮೊದಲಾದ ವಿಜ್ಞಾನಿಗಳ ಕೊಡುಗೆ ಅಪಾರ. ದೇಶ ಕೇವಲ ಒಬ್ಬರಿಗೆ ಸೇರಿದ್ದಲ್ಲ. ಎಲ್ಲರೂ ರಾಷ್ಟ್ರ ಕಾರ್ಯದಲ್ಲಿ ಭಾಗಿಗಳಾದಾಗ ನಿಜವಾದ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣದ ಸಾರಾಂಶ ಪುಸ್ತಕ ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್, ಸ್ನಾತಕೋತ್ತರ ವಿಭಾಗದ ಡೀನ್ ಹಾಗೂ ರಾಷ್ಟೀಯ ವಿಚಾರ ಸಂಕಿರಣದ ಸಂಯೋಜಕಿ ಡಾ. ವಿಜಯ ಸರಸ್ವತಿ ಬಿ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಸ್ವಾಗತಿಸಿ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಹಾಗೂ ರಾಷ್ಟೀಯ ವಿಚಾರ ಸಂಕಿರಣದ ಸಂಯೋಜಕಿ ಅನಿತಾ ಕಾಮತ್ ವಂದಿಸಿ,  ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಡಾ. ನಿಶಿತಾ ಪುತ್ತೂರು ಹಾಗೂ ಕನ್ನಡ ವಿಭಾಗ ಉಪನ್ಯಾಸಕ ಮಧುಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ವಿವಿಧ ವಿಚಾರಗಳ ಬಗೆಗೆ ವಿಚಾರ ಸಂಕಿರಣ ನಡೆದಿದ್ದು ಇದರಲ್ಲಿ ನವದೆಹಲಿಯ ಜವಹಾರ್ ಲಾಲ್ ನೆಹರೂ ಯುನಿವರ್ಸಿಟಿ ಪ್ರೊಫೆಸರ್ ಡಾ.ಅಂಶು ಜೋಷಿ, ಪಾಂಡಿಚೇರಿ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ. ನಂದ ಕಿಶೋರ್ ಎಂ.ಎಸ್, ನವದೆಹಲಿಯ ಸೆಂಟರ್ ಫಾರ್ ಮೆರಿಟೈಂ ಎಕಾನಮಿ  ಹಾಗೂ ಆರ್ ಐಎಸ್, ಎಂಇಎ ಇದರ ಕನ್ಸಲ್ಟೆಂಟ್ ಆಗಿರುವ ಡಾ.ಜಸ್ವಂತ್ ಸಿಂಗ್ ಕೈನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿವಿಧ ವಿಚಾರಗಳನ್ನು ಚರ್ಚಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು ಹಾಗೂ ಸಮನ್ವಯಕಾರರಾಗಿ ಮಾಜಿ ವಿಧಾನ ಸಭಾ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಭಾಗವಹಿಸಿದರು.

ನಂತರ ವಿವಿಧ ಕಾಲೇಜುಗಳಿಂದ ಆಗಮಿಸಿದ ಸಂಶೋಧನಾರ್ಥಿಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ಸಂಶೋಧನಾ ಪ್ರಬಂಧ ಮಂಡನೆ ನಡೆಯಿತು.

 

ಸಮಾರೋಪ ಸಮಾರಂಭ

ಉನ್ನತ ಶಿಕ್ಷಣದತ್ತ ಒಲವು ಹೆಚ್ಚಾದಂತೆ ಉದ್ಯೋಗದ ಕೊರತೆಯೂ ಹೆಚ್ಚಾಗುತ್ತಿದೆ. ಪದವಿ ಪಡೆದವರು ಮಾತ್ರ ಉದ್ಯೋಗಸ್ಥರಲ್ಲ. ಕಡಿಮೆ ಶಿಕ್ಷಣ ಪಡೆದುಕೊಂಡು ಉತ್ತಮ ಬದುಕು ಕಟ್ಟಿಕೊಂಡವರನ್ನು ಕೂಡ ನಮ್ಮ ಸುತ್ತ-ಮುತ್ತ ಅನೇಕರಿದ್ದಾರೆ. ನಾವು ನಮ್ಮ ಯೋಚನಾ ಶೈಲಿಯನ್ನು ಬದಲಾಯಿಸಿಕೊಂಡು, ಋಣಾತ್ಮಕ ಆಲೋಚನೆಯನ್ನು ತೊಡೆದು ಹಾಕಬೇಕು. ನಮ್ಮ ದೇಶದ ನಿಜವಾದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಮರುಕಲ್ಪನೆ ಮಾಡಿಕೊಂಡು ಭಾರತದ ಧನಾತ್ಮಕ ಬದಲಾವಣೆಗೆ ಶ್ರಮಿಸಬೇಕು. ಎಂದು ಸಮಾರೋಪ ಸಮಾರಮಭದಲ್ಲಿ ಭಾಗವಹಿಸಿದ ಕರ್ನಾಟಕ ಸರ್ಕಾರದ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಮಾತನಾಡುತ್ತಾ, ಭಾರತ ಬದಲಾವಣೆಗೊಂಡು ಯಾವ ರೀತಿ ಮುಂದುವರೆಯಬೇಕು ಎಂದು ಯೋಚಿಸುವುದು ಅಗತ್ಯ.ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಉನ್ನತ ರೀತಿಯಲ್ಲಿ ಅಭಿವೃದ್ಧಿಗೊಂಡಾಗ ಮಾತ್ರ ಜಗತ್ತಿನ ಅತ್ಯಂತ ಪ್ರಬಲ ರಾಷ್ಟ್ರಗಳ ಸಾಲಿನಲ್ಲಿ ಭಾರತ ಗುರುತಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

  ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ವಿದ್ಯಾ. ಎಸ್ ಸ್ವಾಗತಿಸಿ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಕವಿತಾ ಬಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

Post a Comment

0 Comments
Post a Comment (0)
To Top