ಮಂಗಳೂರು: ಪೂರ್ವ ಆಫ್ರಿಕಾದ ಇಥಿಯೋಪಿಯಾದ ಪ್ರಮುಖ ಖಾಸಗಿ ಬ್ಯಾಂಕ್ ಆಗಿರುವ ಡ್ಯಾಶೆನ್ ಬ್ಯಾಂಕ್ ಎಸ್.ಸಿ.ಯ
ಆಡಳಿತ ಮಂಡಳಿಯ ಸದಸ್ಯರು 22 ಮೇ 2026 ರಂದು ಎಂ.ಸಿ.ಸಿ. ಬ್ಯಾಂಕಿನ ಪ್ರಧಾನ
ಕಚೇರಿಗೆ ಅಧಿಕೃತ ಸಂಸ್ಥಾತ್ಮಕ ಸಂವಹನ ಮತ್ತು ಜ್ಞಾನ ವಿನಿಮಯ ಕಾರ್ಯಕ್ರಮದ ಅಂಗವಾಗಿ ಭೇಟಿ ನೀಡಿದರು. ಈ
ಭೇಟಿಯನ್ನು ವೃತ್ತಿಪರ ಸಂಬಂಧಗಳನ್ನು ಬೆಳೆಸುವುದು, ಭಾರತದ ಸಹಕಾರ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವುದು, ಬ್ಯಾಂಕಿಂಗ್ ಪರಿಣತಿಯನ್ನು ವಿನಿಮಯ ಮಾಡಿಕೊಳ್ಳುವುದು ಹಾಗೂ ಡಿಜಿಟಲ್ ಬ್ಯಾಂಕಿಂಗ್,
ಕಾರ್ಯಾಚರಣಾ ದಕ್ಷತೆ ಮತ್ತು ತಾಂತ್ರಿಕ ಆಧುನೀಕರಣದ ಬೆಳವಣಿಗೆಗಳನ್ನು ಅನ್ವೇಷಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು.
ಡ್ಯಾಶೆನ್
ಬ್ಯಾಂಕ್ ಎಸ್.ಸಿ.ಯ
13 ಮಂದಿ ಆಡಳಿತ ಮಂಡಳಿಯ ಹಿರಿಯ ನಿರ್ದೇಶಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡ್ಯಾಶೆನ್ ಬ್ಯಾಂಕ್ ದೇಶದಾದ್ಯಂತ 900ಕ್ಕೂ ಅಧಿಕ ಶಾಖೆಗಳು,
9 ವಿದೇಶಿ ವಿನಿಮಯ ಕೇಂದ್ರಗಳು, 1100ಕ್ಕೂ ಅಧಿಕ ಎಟಿಎಂಗಳು
ಹಾಗೂ 2,000ಕ್ಕೂ ಅಧಿಕ ಪಾಯಿಂಟ್-ಆಫ್-ಸೇಲ್ ಟರ್ಮಿನಲ್‌ಗಳ
ಜಾಲವನ್ನು ಹೊಂದಿದೆ.
ಕಾರ್ಯಕ್ರಮವು
ಮಧ್ಯಾಹ್ನ 3.00 ಗಂಟೆಗೆ ಎಂ.ಸಿ.ಸಿ.
ಬ್ಯಾಂಕಿನ ಐಟಿ ವಿಭಾಗದ ಮುಖ್ಯಸ್ಥರಾದ
ಶ್ರೀ ಅಲ್ವಿನ್ ಡಿಸೋಜಾ ಅವರ ನಿರೂಪಣೆಯಲ್ಲಿ ಸ್ವಾಗತ
ಸಮಾರಂಭದೊಂದಿಗೆ ಆರಂಭವಾಯಿತು. ಅವರು ಎಂ.ಸಿ.ಸಿ. ಬ್ಯಾಂಕಿನ ನಿರ್ದೇಶಕರು,
ಹಿರಿಯ ಅಧಿಕಾರಿಗಳು ಹಾಗೂ ಎಂ.ಸಿ.ಸಿ. ಬ್ಯಾಂಕಿನ ಕುಟುಂಬದ
ಪರವಾಗಿ ಡ್ಯಾಶೆನ್ ಬ್ಯಾಂಕ್ ಎಸ್.ಸಿ.ಯ
ಗಣ್ಯ ನಿರ್ದೇಶಕರಿಗೆ ಆತ್ಮೀಯ ಸ್ವಾಗತ ಕೋರಿದರು. ಈ ಭೇಟಿ ಕೇವಲ
ಅಧಿಕೃತ ಕಾರ್ಯಕ್ರಮವಷ್ಟೇ ಅಲ್ಲದೆ, ಎರಡೂ ಬ್ಯಾಂಕಿಂಗ್
ಸಂಸ್ಥೆಗಳ ನಡುವಿನ ಸಂಸ್ಥಾತ್ಮಕ ಸಹಕಾರ ಮತ್ತು ಪರಸ್ಪರ ಅರ್ಥೈಸಿಕೆಯನ್ನು ಬಲಪಡಿಸುವ ಮಹತ್ವದ ಅವಕಾಶವಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಎಂ.ಸಿ.ಸಿ.
ಬ್ಯಾಂಕಿನ ನಿರ್ದೇಶಕರಾದ ಶ್ರೀಮತಿ ಐರಿನ್ ರೆಬೆಲ್ಲೋ, ಶ್ರೀ ಹೆರಾಲ್ಡ್ ಜೆ.
ಮೊಂತೇರೋ, ವೃತ್ತಿಪರ ನಿರ್ದೇಶಕರಾದ ಶ್ರೀ ಸಿ.ಜಿ.
ಪಿಂಟೋ, ಶ್ರೀ ಸುಶಾಂತ್ ಸಲ್ಡಾನ್ಹಾ,
ಮಹಾಪ್ರಬಂಧಕರಾದ ಶ್ರೀ ಸುನಿಲ್ ಮಿನೇಜಸ್
ಹಾಗೂ ಉಪ ಮಹಾಪ್ರಬಂಧಕರಾದ ಶ್ರೀ
ರಾಜ್ ಎಫ್. ಮಿನೇಜಸ್ ಉಪಸ್ಥಿತರಿದ್ದರು.
ಎಂ.ಸಿ.ಸಿ. ಬ್ಯಾಂಕಿನ
ಗೌರವಾನ್ವಿತ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್
ಲೋಬೋ ಅವರ ಚುರುಕಾದ ನಾಯಕತ್ವ
ಮತ್ತು ಪರಿವರ್ತನಾ ದೃಷ್ಟಿಕೋನವನ್ನು ಕಾರ್ಯಕ್ರಮದ ಅವಧಿಯಲ್ಲಿ ಪ್ರಶಂಸಿಸಲಾಯಿತು. ಎಂ.ಸಿ.ಸಿ
ಬ್ಯಾಂಕಿನ ಆಧುನೀಕರಣ, ವಿಸ್ತರಣೆ ಹಾಗೂ ನಿರಂತರ ಬೆಳವಣಿಗೆಗೆ
ಅವರು ನೀಡಿದ ಮಹತ್ವದ ಕೊಡುಗೆಯನ್ನು ಸಭೆಯಲ್ಲಿ ಗುರುತಿಸಲಾಯಿತು. ಬ್ಯಾಂಕಿನ ಕಾರ್ಯಾಚರಣಾ ದಕ್ಷತೆ, ತಾಂತ್ರಿಕ ಸಮನ್ವಯ, ಶಾಖೆಗಳ ವಿಸ್ತರಣೆ ಹಾಗೂ ಗ್ರಾಹಕ ಕೇಂದ್ರಿತ ಬ್ಯಾಂಕಿಂಗ್
ಸೇವೆಗಳನ್ನು ಬಲಪಡಿಸುವಲ್ಲಿ ಅವರ ಪ್ರಯತ್ನಗಳನ್ನು ವಿಶೇಷವಾಗಿ
ಉಲ್ಲೇಖಿಸಲಾಯಿತು. ಈ ಪ್ರಯತ್ನಗಳಿಂದ ಎಂ.ಸಿ.ಸಿ. ಬ್ಯಾಂಕ್
ಕರ್ನಾಟಕದ ಪ್ರಮುಖ ನಗರ ಸಹಕಾರ ಬ್ಯಾಂಕುಗಳಲ್ಲಿ
ಒಂದಾಗಿದೆ ಎಂಬುದನ್ನು ಗಮನಕ್ಕೆ ತರಲಾಯಿತು.
ಪರಿಚಯಾತ್ಮಕ
ಅಧಿವೇಶನದಲ್ಲಿ ಡ್ಯಾಶೆನ್ ಬ್ಯಾಂಕ್ ಎಸ್.ಸಿ.ಯ
ಪ್ರತಿನಿಧಿಗಳು ತಮ್ಮನ್ನು ಪರಿಚಯಿಸಿಕೊಂಡು ತಮ್ಮ ವೃತ್ತಿಪರ ಜವಾಬ್ದಾರಿಗಳು
ಹಾಗೂ ಪರಿಣತಿ ಕ್ಷೇತ್ರಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಹಂಚಿಕೊಂಡರು. ಈ ಅಧಿವೇಶನವು ಎರಡೂ
ಸಂಸ್ಥೆಗಳ ಪ್ರತಿನಿಧಿಗಳ ನಡುವೆ ಮುಕ್ತ ಸಂವಾದ ಮತ್ತು ವೃತ್ತಿಪರ ವಿಚಾರ ವಿನಿಮಯಕ್ಕೆ ಉತ್ತೇಜನ ನೀಡುವ ಆತ್ಮೀಯ ಮತ್ತು ಸಂವಾದಾತ್ಮಕ ವಾತಾವರಣವನ್ನು ಸೃಷ್ಟಿಸಿತು.
ವೃತ್ತಿಪರ
ನಿರ್ದೇಶಕರಾದ ಶ್ರೀ ಸಿ.ಜಿ.
ಪಿಂಟೋ ಅವರು ಸಭೆಯನ್ನು ಉದ್ದೇಶಿಸಿ
ಮಾತನಾಡಿ, ಕರಾವಳಿ ಕರ್ನಾಟಕದ ಪ್ರಮುಖ ಬ್ಯಾಂಕಿಂಗ್ ಹಾಗೂ ಶೈಕ್ಷಣಿಕ ಕೇಂದ್ರವಾಗಿರುವ
ಮಂಗಳೂರಿನ ಐತಿಹಾಸಿಕ ಮತ್ತು ಸಾಮಾಜಿಕ-ಆರ್ಥಿಕ ಮಹತ್ವದ ಕುರಿತು ವಿವರಣಾತ್ಮಕ ಮಾಹಿತಿ ನೀಡಿದರು. ಈ ಪ್ರದೇಶದ ಬಲಿಷ್ಠ
ಸಹಕಾರ ಸಂಸ್ಕೃತಿ ಮತ್ತು ಉದ್ಯಮಶೀಲ ಮನೋಭಾವವು ಸಹಕಾರ ಬ್ಯಾಂಕಿಂಗ್ ಸಂಸ್ಥೆಗಳ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿರುವುದನ್ನು ಅವರು ವಿವರಿಸಿದರು.
ಶ್ರೀ
ಸಿ.ಜಿ. ಪಿಂಟೋ ಅವರು
ಎಂ.ಸಿ.ಸಿ. ಬ್ಯಾಂಕಿನ
ಇತಿಹಾಸ ಮತ್ತು ಬೆಳವಣಿಗೆಯ ಕುರಿತಾದ ವಿವರಗಳನ್ನು ಹಂಚಿಕೊಂಡರು. ಪರಸ್ಪರ ಸಂವಾದದ ನಂತರ ಎಂಸಿಸಿ. ಬ್ಯಾಂಕಿನ
114 ವರ್ಷಗಳ ಪರಂಪರೆಯನ್ನು ಪರಿಚಯಿಸುವ ಡಾಕ್ಯುಮೆಂಟರಿಯನ್ನು ಪ್ರತಿನಿದಿಗಳಿಗೆ ಪ್ರದರ್ಶಿಸಲಾಯಿತು.
ಕೋರ್
ಬ್ಯಾಂಕಿAಗ್ ಸೊಲ್ಯೂಷನ್ ಜಾರಿ,
ಡಿಜಿಟಲ್ ಬ್ಯಾಂಕಿಂಗ್ ವೇದಿಕೆಗಳ ಪರಿಚಯ, ಮೊಬೈಲ್ ಬ್ಯಾಂಕಿಂಗ್ ಸೇವೆಗಳು, ಎಟಿಎಂ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಮೂಲಸೌಕರ್ಯ, ಗ್ರಾಹಕಕೇಂದ್ರಿತ ಡಿಜಿಟಲ್ ಸೇವೆಗಳು ಹಾಗೂ ಸುಧಾರಿತ ಆಂತರಿಕ
ಕಾರ್ಯಾಚರಣಾ ವ್ಯವಸ್ಥೆಗಳಂತಹ ಬ್ಯಾಂಕಿನ ಆಧುನೀಕರಣ ಯೋಜನೆಗಳಿಗೆ ವಿಶೇಷ ಮಹತ್ವ ನೀಡಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



