ಅಕ್ಷಯ ಪದವಿ ಕಾಲೇಜಿನಲ್ಲಿ ಬಿಹೆಚ್ಎಸ್ ವಿಭಾಗದ ವತಿಯಿಂದ TASTHRYA ಫುಡ್ ಫೆಸ್ಟ್

Upayuktha
0


ಪುತ್ತೂರು: ಅಕ್ಷಯ ಪದವಿ ಕಾಲೇಜಿನಲ್ಲಿ ಬಿಹೆಚ್ಎಸ್ ವಿಭಾಗದ ವತಿಯಿಂದ TASTHRYA ಫುಡ್ ಫೆಸ್ಟ್  ಅಮೆರಿಕಾದ ಶ್ರೀ ರಘುನಾಥ್ ಮೂರ್ತಿಯವರ ಪ್ರಾಯೋಜಕತ್ವದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಸ್ಟರ್ ಶೆಫ್ ಮಹಮ್ಮದ್ ಆಶಿಕ್ ತಾನು ಬೆಳೆದು ಬಂದ ಜೀವನದ ಕಠಿಣ ಹಾದಿಗಳನ್ನು ಮೆಲುಕು ಹಾಕುತ್ತಾ ಕಠಿಣತೆ ಸಾಧನೆಗೆ ದಾರಿ ಮಾಡಿಕೊಡುತ್ತದೆ. ಪ್ರತೀ ಕ್ಷಣವೂ ಕಲಿಕೆಯನ್ನು ನೀಡುತ್ತದೆ ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಉದ್ಯಮಿ ಗೌರಿ ಅಕ್ಷಯ ಮಾತನಾಡಿ ಕಾರ್ಯಕ್ರಮಕ್ಕೆ ಬಂದಿರುವುದು ನನ್ನ ಪುಣ್ಯ. ಉತ್ತಮ ಸಂಯೋಜನೆಯ ಕಾರ್ಯಕ್ರಮ. ನನ್ನ ಸಂಪೂರ್ಣ ಸಹಕಾರ ಕಾಲೇಜಿಗೆ ಎಂದಿಗೂ ಇರುವುದು ಎನ್ನುತ್ತಾ ಮನಸಾರೆ ಶುಭಾಶಯಗಳನ್ನು ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಜಯಂತ್ ನಡುಬೈಲು  ಇಂದಿನ ಕಾರ್ಯಕ್ರಮಕ್ಕೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ  ಶ್ರಮ ಸಾರ್ಥಕವಾಗಿದೆ. ಮತ್ತು ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಮತ್ತು ಶೇ.100ರಷ್ಟು ಪ್ಲೇಸ್ಮೆಂಟ್ ಆಗಿರುವುದು  ಅಕ್ಷಯ ಕಾಲೇಜಿನ ಯಶಸ್ಸು ಮತ್ತು ಹೆಮ್ಮೆ ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು.



ವೇದಿಕೆಯಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್,   ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ, ಆಡಳಿತ ಅಧಿಕಾರಿ ಅರ್ಪಿತ್ ಟಿ. , ಶೈಕ್ಷಣಿಕ ಮಾರ್ಗದರ್ಶಕ ಅಭಿಲಾಶ್ ಕ್ಷತ್ರಿಯ ಮತ್ತು ಕಾಯು ಸಂಘದ  ಅಧ್ಯಕ್ಷ ಗಗನ್ ಉಪಸ್ಥಿತರಿದ್ದರು.

ಇದೆ ವೇಳೆ ಚೆಂಡೆ, ನೃತ್ಯ, ಹಾಡು ಸೇರಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆದುವು. ಮಂಗಳೂರು ಅಡುಗೆ ಶೈಲಿಯ ಸಾಂಸ್ಕೃತಿಕ ಮಹತ್ವ, ಆಧುನಿಕ ಪ್ರಭಾವಗಳು,  ಆಧುನಿಕ ಪದಾರ್ಥಗಳ  ತಯಾರಿಕಾ ವಿಧಾನಗಳನ್ನು ಉಳಿಸುವ ಅಗತ್ಯ, ಹಾಗೂ ಶ್ರೀಮಂತ ಆಹಾರ ಪರಂಪರೆಯನ್ನು ಮುಂದಿನ ಪೀಳಿಗೆಯವರು ಹೇಗೆ ಕಾಪಾಡಬಹುದು ಎಂಬ ವಿಚಾರಗಳ ಕುರಿತಾಗಿ ವಿಚಾರ ಗೋಷ್ಠಿ ನಡೆಯಿತು. ಫುಡ್ ಫೆಸ್ಟ್ ನಲ್ಲಿ ರುಚಿಯಾದ ಅನೇಕ  ಖಾದ್ಯಗಳು ಇದ್ದು ನೂರಾರು ಮಂದಿ ಇದನ್ನು ಸವಿದರು.

ಬಿಹೆಚ್ಎಸ್ ವಿಭಾಗದ ಮುಖ್ಯಸ್ಥ ಅವಿನಾಶ್ ಸ್ವಾಗತಿಸಿ, ಪ್ರಜ್ವಲ್ ವಂದಿಸಿ,  ಉಪನ್ಯಾಸಕಿ ಶ್ರತ ಅತಿಥಿಗಳನ್ನು ಪರಿಚಯಿಸಿ ನಿರೂಪಿಸಿದರು

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top