ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯಗಳ ಅಸ್ವಾದನೆ ವಿಶಿಷ್ಟ ಅನುಭವ

Upayuktha
0

ಸುರತ್ಕಲ್:  ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯಗಳ ಅಸ್ವಾದನೆಯು ವಿಶಿಷ್ಟ ಅನುಭವವಾಗಿದೆ. ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಪರಂಪರೆ ಯನ್ನು ಉಳಿಸುವ ಮತ್ತು ಪೋಷಿಸುವ ಹೊಣೆಗಾರಿಕೆ ಸಮಾಜದ್ದಾಗಿದೆ ಎಂದು ನಮ್ಮ ಟಿ. ವಿ. ಯ ನಿರೂಪಕ ಪ್ರಕಾಶ್ ಪುತ್ತೂರು ನುಡಿದರು.


ಅವರು ಸುರತ್ಕಲ್ ನ ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ ಯ ಆಶ್ರಯದಲ್ಲಿ  ಅನುಪಲ್ಲವಿಯ ಶ್ರೀ ವಿಶ್ವೇಶ ತೀರ್ಥ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಕದ್ರಿ ನೃತ್ಯ ಭಾರತಿಯ ನಿರ್ದೇಶಕಿ ವಿದುಷಿ ಗೀತಾ ಸರಳಾಯ ಮಾತನಾಡಿ ಶಾಸ್ತ್ರೀಯ ನೃತ್ಯದ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಂಗೀತದ ಅರಿವು ಅತೀ ಅವಶ್ಯಕವಾಗಿದ್ದು, ಇವೆರಡು ಪರಸ್ಪರ ಪೂರಕವಾಗಿವೆ. ಶಾಸ್ತ್ರೀಯ ನೃತ್ಯ ಕಲಾ ಕ್ಷೇತ್ರದಲ್ಲಿ ಇಂದು ನೂತನ ಪ್ರಯೋಗಗಳು ನಡೆಯುತ್ತಿವೆ ಎಂದರು.


ಮಣಿ ಕೃಷ್ಣಸ್ವಾಮಿ ಅಕಾಡೆಮಿಯ  ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಶುಭ ಹಾರೈಸಿದರು.  ಹಿರಿಯ ಸಂಗೀತ ಗುರು ಸತ್ಯವತಿ ಮೂಡಂಬಡಿತ್ತಾಯ. ನಾದಸ್ವರ ಕಲಾವಿದ ನಾಗೇಶ್ ಬಪ್ಪನಾಡು, ನಾಗರಿಕ ಸಲಹಾ ಸಮಿತಿಯ ಟ್ರಸ್ಟಿ ಸಾವಿತ್ರಿ ರಮೇಶ್ ಭಟ್, ಪ್ರೊ. ರಮೇಶ್ ಭಟ್ ಎಸ್. ಜಿ., ವಿಭು ರಾವ್ ಉಪಸ್ಥಿತರಿದ್ದರು.


ನಿಟ್ಟೆ ಕ್ಷೇಮದ ಪ್ರಸೂತಿ ತಜ್ಞೆ ಡಾ.ಶುಭದಾ. ಕೆ. ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್ ನಲ್ಲಿ ಟಿ. ಅನ್ವಿತಾ, ತಾಲ್ಪಂಜೆ, ಮೃದಂಗದಲ್ಲಿ ಕೃಷ್ಣ ಪವನ್ ಕುಮಾರ್, ತಂಬೂರದಲ್ಲಿ ವಿದ್ವತ್ ರಾವ್ ಸಹಕರಿಸಿದರು.


ಕದ್ರಿ ನೃತ್ಯ ಭಾರತಿಯ ನಿರ್ದೇಶಕಿ ವಿದುಷಿ ಗೀತಾ ಸರಳಾಯ ಮತ್ತು ವಿದುಷಿ ರಶ್ಮಿ ಚಿದಾನಂದ್ ಅವರ ಶಿಷ್ಯೆ ದೀಪ್ತಿಶ್ರೀ ಎಸ್. ಜೋಗಿ, ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಮಣಿ ಕೃಷ್ಣಸ್ವಾಮಿ ಅಕಾಡೆಮಿ ಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿದರು. ಕೃಷ್ಣಮೂರ್ತಿ ವಂದಿಸಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top