ವಿ.ಎಚ್.ಪಿಯಿಂದ ಧರ್ಮ ಪ್ರಸಾರ ಯಾತ್ರೆ : ಚಿತ್ರಾಪುರ ಶ್ರೀ ಪಾದಯಾತ್ರೆ

Upayuktha
0

ಮಂಗಳೂರು: ವಿಶ್ವ ಹಿಂದೂ ಪರಿಷತ್ ಮಂಗಳೂರು ಜಿಲ್ಲೆಯ ಧರ್ಮ ಪ್ರಸಾರ ಹಾಗೂ ಸಾಮಾಜಿಕ ಸಮರಸತಾ ವಿಭಾಗ ದ ವತಿಯಿಂದ ಚಿಲಿಂಬಿ ಗುಡ್ಡೆಯ ಉಪೇಕ್ಷಿತ ಬಂದುಗಳ ವಸತಿಯಲ್ಲಿ ಚಿತ್ರಾಪುರ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಗಳಿಂದ ಸಂತರ ಪಾದ ಯಾತ್ರೆ ಕಾರ್ಯಕ್ರಮ ರವಿವಾರ ನಡೆಯಿತು.


ಶ್ರೀಪಾದರು ಹತ್ತಕ್ಕೂ ಹೆಚ್ಚು ಉಪೇಕ್ಷಿತ ಬಂಧುಗಳ ಮನೆಗೆ ತೆರಳಿ ಧರ್ಮ ಪಾಲನೆ ಮತ್ತು ರಕ್ಷಣೆಯ ಮಹತ್ವವನ್ನು ತಿಳಿಸಿದರು. ಚಿಲಿಂಬಿ ಗುಡ್ಡೆ ಶ್ರೀ ರಾಮಾಂಜನೆಯ ಭಜನಾ ಮಂದಿರದಲ್ಲಿ ಶ್ರೀಪಾದರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮಕ್ಕೆ ಶ್ರೀ ರಾಮಾಂಜನೆಯ ಯುವಕ ಮಂಡಲದ ಪದಾಧಿಕಾರಿಗಳು ಪೂರ್ಣ ಸಹಕಾರವನ್ನಿತ್ತರು.


ಈ ಸಂದರ್ಭದಲ್ಲಿ ವಿ. ಹಿಂ.ಪ ಜಿಲ್ಲಾಧ್ಯಕ್ಷರಾದ  H K ಪುರುಷೋತ್ತಮ್,  ವಿ. ಹಿಂ. ಪ ಜಿಲ್ಲಾ ಪ್ರಮುಖರಾದ  ಗುರುಪ್ರಸಾದ್ ಕಡಂಬಾರ್, ಜಯರಾಮ್ ಆಚಾರ್ಯ, ರವಿ ಕಾಪಿಕ್ಕಾಡ್, ರಾಜು ಕುಲಾಲ್, ವಸಂತ ಶೇಟ್, ಸತೀಶ್ ಶೆಟ್ಟಿ  ನೆಕ್ಕಿಲ, ಪ್ರಸಾದ್ ಕೊಂಚಾಡಿ, ಹರೀಶ್ ಶೇಟ್ ಮತ್ತು ಮಣ್ಣಾಗುಡ್ಡೆ ಪ್ರಖಂಡ ಪ್ರಮುಖರಾದ ಲೊಕೇಶ್ ಶೆಟ್ಟಿ, ಪ್ರಶಾಂತ್ ನಾಯ್ಕ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top