ಕಾಸರಗೋಡು: ಮಂಜೇಶ್ವರ ತಾಲೂಕು ಮೀಯಪದವಿನ ಶ್ರೀರಾಮ ತಲೆಂಗಳ ಅವರು ಹಾರ್ಟಿಕಲ್ಚರ್ ನ ವೆಜಿಟೆಬಲ್ ಸೈನ್ಸ್ ವಿಭಾಗದಲ್ಲಿ ಮಂಡಿಸಿದ ಪಿಎಚ್‌ಡಿ ಸಂಶೋಧನಾ ಮಹಾಪ್ರಬಂಧಕ್ಕೆ ಛತ್ತಿಸಗಢ ರಾಜ್ಯದ ರಾಯಪುರದ ಇಂದಿರಾ ಗಾಂಧಿ ಕೃಷಿ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಶುಕ್ರವಾರ ವಿ.ವಿ.ಯಲ್ಲಿ ನಡೆದ 11ನೇ ಘಟಿಕೋತ್ಸವದಲ್ಲಿ ಅವರು ಪದವಿ ಸ್ವೀಕರಿಸಿದರು.
ಅವರು ವಿ.ವಿ.ಯ ಡಾ.ಜಿತೇಂದ್ರ ತ್ರಿವೇದಿ ಮಾರ್ಗದರ್ಶನದಲ್ಲಿ ‘ಇಫೆಕ್ಟ್ ಆಫ್ ಮಲ್ಚಿಂಗ್ ಆ್ಯಂಡ್ ಟ್ರೈನಿಂಗ್ ಸಿಸ್ಟಮ್ಸ್ ಆನ್ ಗ್ರೋಥ್, ಯೀಲ್ಡ್ ಆ್ಯಂಡ್ ಸೀಡ್ ಕ್ವಾಲಿಟಿ ಆಫ್ ಟೊಮ್ಯಾಟೋ’ ವಿಷಯದಲ್ಲಿ ಪ್ರಬಂಧ ಸಿದ್ಧಪಡಿಸಿದ್ದರು. ಅವರು ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಸ್ಕೂಲ್, ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ.
ಮೈಸೂರಿನ ಕಾಲೇಜ್ ಆಫ್ ಹಾರ್ಟಿಕಲ್ಚರ್‌ನಲ್ಲಿ ಬಿಎಸ್ಸಿ ಪದವಿ, ಮಹಾರಾಷ್ಟ್ರದ ರಾಹುರಿಯ ಮಹಾತ್ಮಾ ಫುಲೆ ಕೃಷಿ ವಿದ್ಯಾಪೀಠದಲ್ಲಿ ಹಾರ್ಟಿಕಲ್ಚರ್ ನ ವೆಜಿಟೇಬಲ್ ಸೈನ್ಸ್ ಎಂಎಸ್ಸಿ ವ್ಯಾಸಂಗ ಪೂರೈಸಿದ್ದರು. ಪ್ರಸ್ತುತ ಕೇರಳದ ಪಡನ್ನಕಾಡಿನ ಕಾಲೇಜ್ ಆಫ್ ಅಗ್ರಿಕಲ್ಚರ್‌ನಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಫ್ ಹಾರ್ಟಿಕಲ್ಚರ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಮೀಯಪದವಿನ ನಿವೃತ್ತ ಶಿಕ್ಷಕ ದಂಪತಿ ಸದಾಶಿವ ಭಟ್ ತಲೆಂಗಳ-ನಳಿನಿ ಇವರ ದ್ವಿತೀಯ ಪುತ್ರ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


