ಭಾರತಕ್ಕೆ ಆಧ್ಯಾತ್ಮಿಕ ಕವಚ ಲಭಿಸಲು ಮುಂಬೈನಲ್ಲಿ ‘ಶ್ರೀ ರಾಜಮಾತಂಗಿ ಮಹಾಯಜ್ಞ’ ಸಂಪನ್ನ!

Upayuktha
0

 'ರಾಮರಾಜ್ಯ' ಸಂಕಲ್ಪ ಪೂರ್ತಿಗಾಗಿ ಪ್ರಭಾದೇವಿಯಲ್ಲಿ ಸಾಗರೋಪಾದಿಯಲ್ಲಿ ಹರಿದು ಬಂದ ಸಾವಿರಾರು ಭಕ್ತರು. ಭಾರತ, ಅಮೆರಿಕ, ಕೆನಡಾ, ಜಪಾನ್, ಜರ್ಮನಿ ಸೇರಿದಂತೆ 40 ದೇಶಗಳ ಸಾವಿರಾರು ಭಕ್ತರಿಂದ ಆನ್ಲೈನ್ ನಲ್ಲೂ ಸಹಭಾಗ !

 


ಮುಂಬೈ: ಪ್ರಸ್ತುತ ಜಾಗತಿಕ ಅಶಾಂತಿ ಮತ್ತು ಯುದ್ಧದ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಭಾರತಕ್ಕೆ ನಾಲ್ಕೂ ದಿಕ್ಕುಗಳಿಂದ ಅಭೇದ್ಯ ಆಧ್ಯಾತ್ಮಿಕ ರಕ್ಷಣಾ ಕವಚ ಲಭಿಸಬೇಕೆಂಬ ಮುಖ್ಯ ಉದ್ದೇಶದಿಂದ ಮುಂಬೈನಲ್ಲಿಶ್ರೀ ರಾಜಮಾತಂಗಿ ಮಹಾಯಜ್ಞಅತ್ಯಂತ ಚೈತನ್ಯಮಯ ವಾತಾವರಣದಲ್ಲಿ ಸಂಪನ್ನಗೊಂಡಿತು. ಸನಾತನ ಸಂಸ್ಥೆಯ ವತಿಯಿಂದ ಪ್ರಭಾದೇವಿ, ಮುಂಬೈನ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಹಾಯಜ್ಞದಲ್ಲಿ 7000 ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ರಾಷ್ಟ್ರರಕ್ಷಣೆ, ದೇಶದ ಸರ್ವಾಂಗೀಣ ಪ್ರಗತಿ ಮತ್ತುರಾಮರಾಜ್ಯ ಸಂಕಲ್ಪವನ್ನು ಪ್ರತ್ಯಕ್ಷವಾಗಿ ತರುವುದು ಆಯೋಜನೆಯ ಮುಖ್ಯ ಸಂಕಲ್ಪವಾಗಿತ್ತು.

 

ಸಂದರ್ಭದಲ್ಲಿ ಶಾಸಕರಾದ ಶ್ರೀ. ರಮೇಶ್ ಮ್ಹಾತ್ರೆ, ಶಾಸಕರಾದ ಶ್ರೀ. ಜ್ಞಾನೇಶ್ವರ್ ಮ್ಹಾತ್ರೆ, ಶಾಸಕಿ ಡಾ. ಮನೀಷಾ ಕಾಯಂದೆ, ಶ್ರೀ. ಸಿದ್ಧಿವಿನಾಯಕ ಮುಂಬೈ ಮಂದಿರದ ಕೋಶಾಧ್ಯಕ್ಷರಾದ ಶ್ರೀ. ಆಚಾರ್ಯ ತ್ರಿಪಾಠಿ, ಸ್ವಾತಂತ್ರ್ಯವೀರ ಸ್ಮಾರಕದ ಅಧ್ಯಕ್ಷರಾದ ಶ್ರೀ. ರಣಜಿತ್ ಸಾವರ್ಕರ್, ಪೀತಾಂಬರಿ ಉದ್ಯಮ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ರವೀಂದ್ರ ಪ್ರಭುದೇಸಾಯಿ ಅವರೂ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಸಂತರು ಉಪಸ್ಥಿತರಿದ್ದರು. ಮಹಾಯಜ್ಞದ ನೇರ ಪ್ರಸಾರವನ್ನು ಸನಾತನ ಸಂಸ್ಥೆಯ ಯೂಟ್ಯೂಬ್ ವಾಹಿನಿಯ ಮೂಲಕ ಜಗತ್ತಿನಾದ್ಯಂತ ವೀಕ್ಷಿಸಲು ಅನುಕೂಲ ಮಾಡಿಕೊಡಲಾಗಿತ್ತು. ಇದರ ಲಾಭವನ್ನು ಭಾರತದ ಅನೇಕ ರಾಜ್ಯಗಳು ಸೇರಿದಂತೆ ಅಮೆರಿಕ, ಕೆನಡಾ, ಜಪಾನ್, ಜರ್ಮನಿ, ಚೀನಾ, ಅರ್ಜೆಂಟೀನಾ, ಪೋಲೆಂಡ್, ಥೈಲ್ಯಾಂಡ್, ಬ್ರಜಿಲ್ ಮುಂತಾದ 40 ದೇಶಗಳ ಸಾವಿರಾರು ಭಕ್ತರು ಪಡೆದುಕೊಂಡರು.

 

ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ್ ವರ್ತಕ್ ಅವರು ಮಾತನಾಡಿ, "ಇಂದು ದೇಶವು ನಾಲ್ಕೂ ದಿಕ್ಕುಗಳಿಂದ ವಿವಿಧ ಸವಾಲುಗಳಿಂದ ಸುತ್ತುವರಿದಿದ್ದು, ಭಾರತದ ರಕ್ಷಣೆಗಾಗಿ ಕೇವಲ ಭೌತಿಕ ಸಾಮರ್ಥ್ಯ ಸಾಲದು, ಇದರ ಜೊತೆಗೆ ಆಧ್ಯಾತ್ಮಿಕ ಬಲವೂ ಇರಬೇಕು. ಆದಿಶಕ್ತಿಯ 'ದಶಮಹಾವಿದ್ಯಾ'ಗಳಲ್ಲಿ ಅತ್ಯಂತ ಶಕ್ತಿಶಾಲಿ ಎಂದು ನಂಬಲಾದ ಶ್ರೀ ರಾಜಮಾತಂಗಿ ದೇವಿಯ ಮಹಾಯಜ್ಞವು ಭಾರತಕ್ಕೆ ಒಂದು ಅಭೇದ್ಯ ಆಧ್ಯಾತ್ಮಿಕ ಕವಚವನ್ನು ಪ್ರದಾನ ಮಾಡುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ್ ಆಠವಲೆ ಅವರು ಯಾವ ಮುಂಬಾಪುರಿಯಿಂದ (ಮುಂಬೈನಿಂದ) ಧರ್ಮಕಾರ್ಯದ ಶ್ರೀಗಣೇಶ (ಪ್ರಾರಂಭ) ಮಾಡಿದ್ದರೋ, ಅದೇ ಭೂಮಿಯಿಂದ ರಾಷ್ಟ್ರನಿರ್ಮಾಣದ ಒಂದು ಐತಿಹಾಸಿಕ ಹೆಜ್ಜೆ ಇಡಲಾಗಿದೆ," ಎಂದರು.

 

ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ್ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡ್ಗೀಳ್ ಅವರು ಮುಖ್ಯ ಯಜಮಾನರಾಗಿ, ನೂರಾರು ಸಹ-ಯಜಮಾನರ ಜೊತೆಗೂಡಿ ಶಕ್ತಿಶಾಲಿ ವೈದಿಕ ಅನುಷ್ಠಾನವನ್ನು ನೆರವೇರಿಸಿದರು. ಶಂಖನಾದ ಮತ್ತು ರಾಷ್ಟ್ರಕಲ್ಯಾಣದ ಮಹಾಸಂಕಲ್ಪದೊಂದಿಗೆ ಯಜ್ಞಕ್ಕೆ ಚಾಲನೆ ನೀಡಲಾಯಿತು. ಶ್ರೀಮಹಾಲಕ್ಷ್ಮಿ ಅಷ್ಟೋತ್ತರ ನಾಮಾವಳಿಯ ಉಚ್ಚಾರಣೆಯೊಂದಿಗೆ ಕುಂಕುಮಾರ್ಚನೆ ಮತ್ತು ಶ್ರೀ ರಾಜಮಾತಂಗಿ ದೇವಿಯ ಮೂಲಮಂತ್ರಗಳೊಂದಿಗೆ ಯಜ್ಞಕುಂಡದಲ್ಲಿ ಆಹುತಿಗಳನ್ನು ಸಮರ್ಪಿಸಲಾಯಿತು. 'ಮಹಿಷಾಸುರಮರ್ದಿನಿ ಸ್ತೋತ್ರದ' ಸಾಮೂಹಿಕ ಪಾಠದೊಂದಿಗೆ ವಿಧಿಕ್ರಿಯೆಗಳು ಮುಕ್ತಾಯಗೊಂಡವು. ಯಜ್ಞದ ಪೌರೋಹಿತ್ಯವನ್ನು ಇರೋಡ್, ತಮಿಳುನಾಡಿನ ಶಿವಾಗಮ ವಿದ್ಯಾನಿಧಿ ಆಗಮಾಚಾರ್ಯ ಶ್ರೀ. ಅರುಣ್ಕುಮಾರ್ ಗುರುಮೂರ್ತಿ ಅವರು ನೆರವೇರಿಸಿದರು, ಹಾಗೂ ಶಿವಾಚಾರ್ಯ ಶ್ರೀ ಗುರುಮೂರ್ತಿ ಅವರು ಯಜ್ಞದ ಮುಖ್ಯ ಆಚಾರ್ಯರಾಗಿದ್ದರು.

 

ಪ್ರಸ್ತುತ ಸೋಮನಾಥ ಜ್ಯೋತಿರ್ಲಿಂಗ ಮಂದಿರದ ಪುನರ್ನಿರ್ಮಾಣಕ್ಕೆ 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶದಾದ್ಯಂತಸೋಮನಾಥ ಸ್ವಾಭಿಮಾನ ಪರ್ವವನ್ನು ಆಚರಿಸಲಾಗುತ್ತಿದೆ. ಐತಿಹಾಸಿಕ ಪರ್ವದ ಔಚಿತ್ಯವನ್ನು ಪಡೆದು 1 ಸಾವಿರ ವರ್ಷಗಳ ಹಿಂದೆ ಪರಕೀಯ ಆಕ್ರಮಣಕಾರ ಮಹಮ್ಮದ್ ಗಜನಿಯಿಂದ ಭಗ್ನಗೊಂಡ, ಸಾಕ್ಷಾತ್ ಭಗವಾನ್ ಚಂದ್ರದೇವರಿಂದ ಸ್ಥಾಪಿಸಲ್ಪಟ್ಟ ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶದ ನೇರ ದರ್ಶನ ಪಡೆಯುವ ಅಭೂತಪೂರ್ವ ಸುವರ್ಣ ಅವಕಾಶವನ್ನು ಯಜ್ಞಸ್ಥಳದಲ್ಲಿ ಭಕ್ತರಿಗೆ ಕಲ್ಪಿಸಲಾಗಿತ್ತು; ಇದರ ಲಾಭವನ್ನು ಸಾವಿರಾರು ಭಕ್ತರು ಅತ್ಯಂತ ಭಾವಪೂರ್ಣವಾಗಿ ಪಡೆದುಕೊಂಡರು. ಆಧ್ಯಾತ್ಮಿಕ ಸಡಗರದ ಜೊತೆಗೆ ಯಜ್ಞಸ್ಥಳದಲ್ಲಿ ಸನಾತನ ನಿರ್ಮಿತ ಆಧ್ಯಾತ್ಮ, ರಾಷ್ಟ್ರರಕ್ಷಣೆ, ಆಯುರ್ವೇದ ಮತ್ತು ಧರ್ಮಶಾಸ್ತ್ರ ವಿಷಯಗಳ ಕುರಿತಾದ ಅಮೂಲ್ಯ ಗ್ರಂಥ ಹಾಗೂ ಫಲಕ ಪ್ರದರ್ಶನಕ್ಕೆ ಮುಂಬೈಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು.

 

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಂತ-ಮಹಂತರು, ಹಿಂದುತ್ವನಿಷ್ಠರು ಮತ್ತು ಮಂದಿರದ ಟ್ರಸ್ಟಿಗಳು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು. ಎಲ್ಲರೂ ಒಮ್ಮತದಿಂದ ಭಾರತದ ಸರ್ವಾಂಗೀಣ ವಿಕಾಸ ಮತ್ತು ಶತ್ರುಗಳ ನಾಶಕ್ಕಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದರು.

 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top