ಉಡುಪಿ:
ಮಧುಮೇಹ ರೋಗಿಗಳಲ್ಲಿ ಪಾದದ ಸಮಸ್ಯೆಗಳನ್ನು ಆರಂಭಿಕ
ಹಂತದಲ್ಲೇ ಪತ್ತೆಹಚ್ಚಿ, ಗಂಭೀರ ಪರಿಣಾಮಗಳು ಹಾಗೂ ಅಂಗಚ್ಛೇದನವನ್ನು ತಡೆಗಟ್ಟುವ
ಉದ್ದೇಶದಿಂದ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ
ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿ ಇದರ ಶಲ್ಯತಂತ್ರ ವಿಭಾಗವು,
PRIAS (Podiatry Reach Across India for Awareness and Screening) ಸಂಸ್ಥೆಯ ಸಹಯೋಗದಲ್ಲಿ, 2026ರ ಮೇ 20 ಮತ್ತು
ಮೇ 23ರಂದು ಉಡುಪಿಯ ಎಸ್ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ
ಉಚಿತ ಮಧುಮೇಹ ಪಾದ ತಪಾಸಣಾ ಶಿಬಿರವನ್ನು
ಆಯೋಜಿಸಿದೆ.
ಮಧುಮೇಹದಿಂದಾಗಿ
ಪಾದಗಳಲ್ಲಿ ಉಂಟಾಗುವ ನರಗಳ ಸಂವೇದನೆ ಕುಂಠಿತವಾಗುವುದು,
ರಕ್ತಪ್ರವಾಹದ ಅಡಚಣೆ ಹಾಗೂ ಪಾದದ ಮೇಲಿನ
ಅಸಾಮಾನ್ಯ ಒತ್ತಡದಿಂದ ಹುಣ್ಣುಗಳು ಉಂಟಾಗುವಂತಹ ಸಮಸ್ಯೆಗಳು ಅನೇಕ ಬಾರಿ ಗಂಭೀರ
ಸ್ಥಿತಿಗೆ ತಲುಪುತ್ತವೆ. ಇವುಗಳನ್ನು ಸಮಯೋಚಿತ ತಪಾಸಣೆಯ ಮೂಲಕ ತಡೆಗಟ್ಟಬಹುದಾಗಿದೆ.
ಶಿಬಿರದಲ್ಲಿ
ಭಾಗವಹಿಸುವ ರೋಗಿಗಳಿಗೆ ಆಧುನಿಕ ತಪಾಸಣಾ ಸಾಧನಗಳ ಮೂಲಕ ಕೆಳಕಂಡ ಪರೀಕ್ಷೆಗಳು
ನಡೆಸಲಾಗುತ್ತದೆ:
* ಪಾದದ
ತಳಭಾಗದ ನರಗಳ ಸಂವೇದನೆ (Neuropathy) ತಪಾಸಣೆ
* ಕಾಲುಗಳಿಗೆ
ರಕ್ತಪ್ರವಾಹ ಸಮರ್ಪಕವಾಗಿದೆಯೇ ಎಂಬುದನ್ನು ತಿಳಿಯುವ ABI ಪರೀಕ್ಷೆ
* ಪಾದದ
ಮೇಲೆ ಅಸಾಮಾನ್ಯ ಒತ್ತಡದಿಂದಾಗಿ (Abnormal
loading) ಕಾರ್ನ್ (Corn)
ಅಥವಾ ಕಾಲೋಸಿಟಿ (Callosity) ಉಂಟಾಮಾಡುವ ಸಾಧ್ಯತೆ ಇರುವುದನ್ನು ಪತ್ತೆಹಚ್ಚುವುದು.
* ಪಾದದ
ಹುಣ್ಣನ್ನು ತಡೆಗಟ್ಟುವುದು
ಮಧುಮೇಹ
ರೋಗಿಗಳಲ್ಲಿ ಪಾದದ ಹುಣ್ಣು ಮತ್ತು
ಅಂಗಚ್ಛೇದನದ ಅಪಾಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಶಿಬಿರ ಅತ್ಯಂತ
ಉಪಯುಕ್ತವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಭಾರತದಾದ್ಯಂತ 67 ನಗರಗಳಲ್ಲಿ ಈ ವಿಶೇಷ ಶಿಬಿರ
ನಡೆಯುತ್ತಿದೆ. ಸೂಕ್ತ ಮಧುಮೇಹ ರೋಗಿಗಳು ಈ ಶಿಬಿರದ ಪ್ರಯೋಜನ
ಪಡೆದುಕೊಳ್ಳುವಂತೆ ಹಾಗೂ ವೈದ್ಯರು, ಆರೋಗ್ಯ
ಕಾರ್ಯಕರ್ತರು ಮತ್ತು ಸಾರ್ವಜನಿಕರು ಅಗತ್ಯವಿರುವ ರೋಗಿಗಳನ್ನು ಶಿಬಿರಕ್ಕೆ ಕಳುಹಿಸುವಂತೆ ಎಸ್ಡಿಎಂ ಆಯುರ್ವೇದ
ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಸ್ಥಳ:
ಬೋರ್ಡ್ ರೂಮ್, ಎಸ್ಡಿಎಂ ಆಯುರ್ವೇದ
ಆಸ್ಪತ್ರೆ, ಕುತ್ಪಾಡಿ, ಉಡುಪಿ
ಸಮಯ:
ಬೆಳಿಗ್ಗೆ 9.00ರಿಂದ ಸಂಜೆ 4.00ರವರೆಗೆ
ಹೆಚ್ಚಿನ
ಮಾಹಿತಿಗಾಗಿ:
0820-2520623 / 98454 07543
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


