ಮಂಗಳೂರು: "ಕಲೆ- ಕಲಾರಾಧಕರ ಮಧ್ಯೆ ಈಗಿನ ಕಾಲಘಟ್ಟದಲ್ಲಿ ಗಣನೀಯವಾದ ಏರಿಕೆ ಕಂಡು ಬರುತ್ತಿದೆ. ಉತ್ತಮ ಕಲಾವಿದರೆನಿಸಿಕೊಳ್ಳಲು ಕಲೆಯನ್ನು ಆರಾಧನಾ ದೃಷ್ಟಿಯಿಂದ ಸ್ವೀಕರಿಸುವ ವರ್ಗ ಬೇಕು. ಇಂದು ಶಿಕ್ಷಿತ ಪ್ರೇಕ್ಷಕ ವರ್ಗ ಕಲೆಯನ್ನು ಪ್ರೀತಿಸುತ್ತಾ ಬರುತ್ತಿದೆ. ಅದನ್ನೇ ಯಕ್ಷಗಾನದಲ್ಲೂ ನಾವು ಕಾಣಬಹುದು. ಈ ನೆಲದ ಮಣ್ಣಿನ ಕಲೆಯ ಸತ್ತ್ವ ಬಲವಾಗಿ ಬೇರೂರಿ ಕಲೆಯನ್ನು ಪ್ರೀತಿಸುವ ಮಂದಿ ಹೆಚ್ಚಾಗಿದ್ದಾರೆ. ಒಂದು ಕಾಲಕ್ಕೆ ಯಕ್ಷಗಾನ ಕಲೆ ಬಳಲಿತು ಎಂಬಾಗ ಅದನ್ನು ಯಥಾಸ್ಥಿತಿಗೆ ತರಲು ಈ ಕಲಾ ಶ್ರೇಷ್ಠರೇ ಕಾರಣ. ಹಾಗಾಗಿ, ಈ ಕಲೆಯ ಏಳ್ಗೆಗಾಗಿ ಕಾಣ್ಕೆ ನೀಡುತ್ತಿರುವ ಸರಯೂ ತಂಡ ಇನ್ನೂ ಚೆನ್ನಾಗಿ ಕಲಾವಲಯದಲ್ಲಿ ಬೆಳಗಲಿ" ಎಂದು ವಳಚ್ಚಿಲ್ ಶ್ರೀನಿವಾಸ ಯೂನಿವರ್ಸಿಟಿಯ ಫಾರ್ಮಸಿ ವಿಭಾಗದ ಮುಖ್ಯಸ್ಥರಾದ ಡಾ.ಎ.ಆರ್. ಶಬರಾಯ ನುಡಿದರು.
ಅವರು ಕದ್ರಿಯಲ್ಲಿ ನಡೆಯುತ್ತಿರುವ ಸರಯೂ ಆಷ್ಟಾಹ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುಣ್ಣಂಬಳ ವಿಶ್ವೇಶ್ವರ ಭಟ್ ರವರು ಸಂಸ್ಥೆಗೂ ಸನ್ಮಾನಿತರಿಗೂ ಶುಭ ಕೋರಿದರು. ಯಕ್ಷಕಲಾವಿದ, ಸಂಘಟಕ ಹೊಸಬೆಟ್ಟು ವಿನಯ ಆಚಾರ್ಯರನ್ನು "ಯಕ್ಷ ಸರಯೂ" ಬಿರುದಿತ್ತು ಸನ್ಮಾನಿಸಲಾಯಿತು.
ಜಯಶ್ರೀ ಎಂ. ಕೋಟ್ಯಾನ್ ಸನ್ಮಾನ ಪತ್ರ ವಾಚಿಸಿದರು. ಸತ್ಯಶಂಕರ ಭಟ್, ಪ್ರಭಾಕರ ರಾವ್, ಪೇಜಾವರ ಸನ್ಮಾನಿತರಿಗೆ ಶುಭ ಸಂದೇಶಗಳನ್ನು ನೀಡಿದರು. ಸುಧಾಕರ ರಾಯರು ನಿರ್ವಹಿಸಿದರು. ಗೌತಂ ಭಂಡಾರಿ ಧನ್ಯವಾದವಿತ್ತರು. ಎ.ಮಧುಸೂದನ ವಂದಿಸಿದರು. ಬಭ್ರುವಾಹನ ಯಕ್ಷಗಾನ ಬಯಲಾಟ ಜರಗಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

