ಮಂಗಳೂರು: "ಕಲಾವಿದನ ಕೈಯ್ಯಲ್ಲಿ ಒಂದು ಪಾತ್ರ ಮರುಹುಟ್ಟು ಪಡೆದು ಪ್ರಸ್ತುತ ಪಡಿಸುವಾಗ ಅದರ ಹಿಂದೆ ಅವನ ಕ್ಷಮತೆ ಅಪಾರವಾಗಿರುತ್ತದೆ. ಪಾತ್ರದ ಪೂರ್ವಾಪರ ತಿಳಿದು ಹೃದಯಸ್ಪರ್ಶಿಯಾಗಿ ಅಭಿನಯಸುವುದೇ ಯಕ್ಷಗಾನದ ವಿಶೇಷತೆ. ಮಾತಿನಲ್ಲೇ ಸಮಸ್ತ ಲೋಕವನ್ನೇ ಒಂದು ರಂಗಭೂಮಿಯಲ್ಲೇ ಸೃಜಿಸಿ; ಪಾತ್ರ ಗೌರವವನ್ನು ಕಾಪಾಡಿಕೊಂಡು ರಂಗ ಪ್ರಸ್ತುತಿಯನ್ನು ಮಾಡುವಲ್ಲಿ ಕಲಾಗಾರ ತನ್ನನ್ನು ತಾನು ದುಡಿಸಿಕೊಳ್ಳಬೇಕು. ಇದು ಯಕ್ಷಗಾನಕ್ಕೆ ಇರುವ ವಿಶೇಷತೆ. ಅದನ್ನು ಉಳಿಸಿ-ಬೆಳೆಸಿ ಕಾಪಾಡಿಕೊಳ್ಳೋಣ" ಎಂದು ವಳಚ್ಚಿಲ್ ಎಕ್ಸ್ ಪರ್ಟ್ ಕಾಲೇಜಿನ ಉಪನ್ಯಾಸಕ ಬಾಲಕೃಷ್ಣ ಶೆಟ್ಟಿ ನುಡಿದರು. ಅವರು ಕದ್ರಿಯಲ್ಲಿ ನಡೆಯುತ್ತಿರುವ ಸರಯೂ ಅಷ್ಠಾಹದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂತರಾಷ್ಟ್ರೀಯ ದೇಹದಾರ್ಡ್ಯ ಪಟು, ಚಿನ್ನದ ಸರದಾರ ದೇವದಾಸ್ ಕೂಳೂರುರವರನ್ನು ಸನ್ಮಾನಿಸಲಾಯಿತು. ನಿವೃತ್ತ ಉಪನ್ಯಾಸಕ, ಯಕ್ಷಕಲಾವಿದ ಜಿ.ಕೆ.ಭಟ್ ಸೇರಾಜೆ, ಕಲಾ ಪೋಷಕ ಸಿ.ಎಸ್. ಭಂಡಾರಿ, ಗಣಪತಿ ಭಟ್,ಪೂರ್ಣಿಮಾ ಪೇಜಾವರ್, ಮನ್ವಿತ್ ಶೆಟ್ಟಿ, ಸುಧಾಕರ ರಾವ್ ಪೇಜಾವರ್, ದೀಪಕ್ ಅತಿಥಿಗಳಾಗಿದ್ದರು.
ಶ್ರೀಮತಿ ತನುಜಾಕ್ಷಿ ಬಿ.ಶೆಟ್ಟಿ ಸನ್ಮಾನ ಪತ್ರವನ್ನು ವಾಚಿಸಿದರು. ಗೌತಂ ಭಂಡಾರಿ ನಿರ್ವಹಿಸಿದರು. ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ಧನವಾದವಿತ್ತರು. ಶ್ರೀದೇವಿ ಮಹಾತ್ಮೆ ಬಯಲಾಟ ಜರಗಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


