ಬೆಂಗಳೂರು :
ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳು ಕೇವಲ ಪ್ರಾರ್ಥನಾ ಸ್ಥಳಗಳಲ್ಲ,
ಬದಲಿಗೆ ಸಮಾಜಕ್ಕೆ ಸಂಸ್ಕಾರ ನೀಡುವ ಕೇಂದ್ರಗಳಾಗಿವೆ. ಈ ಪರಂಪರೆಯನ್ನು ಮುಂದುವರಿಸಲು
ಸನಾತನ ಸಂಸ್ಥೆ ವತಿಯಿಂದ 9 ರಿಂದ 15 ವರ್ಷದ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ 'ಸನಾತನ ಸಂಸ್ಕಾರ ತರಬೇತಿ ವರ್ಗ’ವನ್ನು ಆಯೋಜಿಸಲಾಗಿದೆ. ದೇವಾಲಯಗಳ ಸಾತ್ವಿಕ ವಾತಾವರಣದಲ್ಲಿ ನಡೆಯುವ ಈ ವರ್ಗವು ಮಕ್ಕಳ
ಸರ್ವಾಂಗೀಣ ಬೆಳವಣಿಗೆಗೆ ಅತ್ಯಂತ ಉಪಯುಕ್ತವಾಗಲಿದೆ ಎಂದು ಸನಾತನ ಸಂಸ್ಥೆಯ
ಸೌ. ಶಾರದಾ ಯೋಗೇಶ್ ಮಾಹಿತಿ ನೀಡಿದ್ದಾರೆ.
ಸನಾತನ
ಸಂಸ್ಥೆಯು ಕಳೆದ 26 ವರ್ಷಗಳಿಂದ ಅಧ್ಯಾತ್ಮ ಪ್ರಸಾರ ಕಾರ್ಯವನ್ನು ಮಾಡುತ್ತಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್ ಮತ್ತು ಟಿವಿಯಲ್ಲಿ ಹೆಚ್ಚು ಮಗ್ನರಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರಿಗೆ
ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಮತ್ತು ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ
ದೇವಾಲಯಗಳಲ್ಲಿ ಐದು ದಿನಗಳ ಈ
ತರಬೇತಿ ವರ್ಗವನ್ನು ಆಯೋಜಿಸಲಾಗಿದೆ.
ತರಬೇತಿ
ವರ್ಗದ ವೈಶಿಷ್ಟ್ಯಗಳು:
ಐದು
ದಿನಗಳ ವರ್ಗ : ಪ್ರತಿದಿನ 3 ಗಂಟೆಗಳ ಅವಧಿ.
ಪ್ರಾರ್ಥನೆ
ಮತ್ತು ನಾಮಜಪ: ದೇವರಿಗೆ ಪ್ರಾರ್ಥನೆ ಸಲ್ಲಿಸುವುದು, ನಾಮಜಪ ಮತ್ತು ಉತ್ತಮ ಹವ್ಯಾಸಗಳ ಬಗ್ಗೆ ಮಾರ್ಗದರ್ಶನ.
ನೈತಿಕ
ಮೌಲ್ಯಗಳು :
ಸದ್ಗುಣಗಳ ಸಂವರ್ಧನೆ ಮತ್ತು ನೈತಿಕತೆಯ ಕುರಿತು ವಿಶೇಷ ವ್ಯಾಖ್ಯಾನ.
ಮನರಂಜನೆ :
ಕಥೆ ಹೇಳುವುದು, ಆಧ್ಯಾತ್ಮಿಕ ಆಟಗಳು ಮತ್ತು ಆಸಕ್ತಿದಾಯಕ ಸ್ಪರ್ಧೆಗಳು,
ಸಂಸ್ಕೃತಿ
ಪರಿಚಯ :
ಭಾರತೀಯ ಸಂಸ್ಕೃತಿಯ ಪರಿಚಯ ಮತ್ತು ವ್ಯಕ್ತಿತ್ವ ವಿಕಸನ.
ಸಾತ್ವಿಕ
ವಾತಾವರಣ :
ಮಂದಿರದ ಸಕಾರಾತ್ಮಕ ವಾತಾವರಣವು ಮಕ್ಕಳ ಮೇಲೆ ಉತ್ತಮ ಪರಿಣಾಮ
ಬೀರುತ್ತದೆ.
ನೋಂದಣಿ
(Registration) ವಿವರಗಳು
:
ಕೊನೆಯ
ದಿನಾಂಕ : 05.05.2026
ಸಂಪರ್ಕ
: 9482016286
ಸ್ಥಳ:
ಶ್ರೀ ಗಣಪತಿ ಅಯ್ಯಪ್ಪ, ರಾಘವೇಂದ್ರ, ಅನ್ನಪೂರ್ಣೇಶ್ವರಿ ದೇವಸ್ಥಾನ, 6 ನೇ ಕ್ರಾಸ್, ಚೌಡಪ್ಪ
ಲೇಔಟ್ ರಸ್ತೆ, ಬಾಪೂಜಿ ನಗರ, ಬೆಂಗಳೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

