ಡಾ. ಡಿ.ಕೆ. ಚೌಟ ನೆನಪಿನಲ್ಲಿ ಜೂ.1ರಂದು ರಂಗ ಸಂಭ್ರಮ

Upayuktha
0

ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಗೀತೆ, ರಂಗ ಗೌರವ ಹಾಗೂಮಿತ್ತಬೈಲು ಯಮುನಕ್ಕ’ ನಾಟಕ ಪ್ರದರ್ಶನ

 


ಬೆಂಗಳೂರು: ಕನ್ನಡ ರಂಗಭೂಮಿಯ ಹಿರಿಯ ಸಾಹಿತಿ ಹಾಗೂ ನಾಟಕಕಾರರಾದ ಡಾ. ಡಿ.ಕೆ. ಚೌಟ ಅವರ 88ನೇ ಜನ್ಮಸ್ಮರಣೆಯ ಅಂಗವಾಗಿ ಬೆಂಗಳೂರಿನ ಸಾಂಸ್ಕೃತಿಕ ಸಂಘಟನೆರಂಗ ಚಂದಿರಟ್ರಸ್ಟ್ ವತಿಯಿಂದ ಜೂನ್ 1ರಂದು ಸೋಮವಾರ ಸಂಜೆ 5.30ಕ್ಕೆ ನಗರದ ಜೆಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ವೈವಿಧ್ಯಮಯ ರಂಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

 

ಕಾರ್ಯಕ್ರಮದಲ್ಲಿ ರಂಗಗೀತೆಗಳ ಗಾಯನ, ರಂಗ ಕ್ಷೇತ್ರದ ಗಣ್ಯರಿಗೆರಂಗ ಗೌರವಪ್ರಶಸ್ತಿ ಪ್ರದಾನ ಹಾಗೂ ಡಾ. ಚೌಟ ಅವರ ಕಾದಂಬರಿ ಆಧಾರಿತಮಿತ್ತಬೈಲು ಯಮುನಕ್ಕನಾಟಕ ಪ್ರದರ್ಶನ ನಡೆಯಲಿದ್ದು, ರಂಗಭೂಮಿ ಪ್ರೇಮಿಗಳಿಗೆ ಸಾಂಸ್ಕೃತಿಕ ರಸದೌತಣ ಒದಗಿಸಲಿದೆ.

 

ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಖ್ಯಾತ ಚಿಂತಕ ಪ್ರೊ. ಕೆ.. ರಾಧಾಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜ ಮೂರ್ತಿ, ಖ್ಯಾತ ನಾಟಕಕಾರ ಡಾ. ನಾ. ದಾಮೋದರ ಶೆಟ್ಟಿ ಹಾಗೂ ಕಲಾ ನಿರ್ದೇಶಕ ಶಶಿಧರ ಉಡುಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಂಗ ಚಂದಿರ ಟ್ರಸ್ಟ್ ಗೌರವಾಧ್ಯಕ್ಷ ರಾಧಾಕೃಷ್ಣ ಹೆಗಡೆ ಉಪಸ್ಥಿತರಿರುವರು.

 

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಹಾಗೂ ರಂಗ ಚಂದಿರ ಕಾರ್ಯದರ್ಶಿ ಜಿಪಿಒ ಚಂದ್ರು ಕಾರ್ಯಕ್ರಮವನ್ನು ಆಯೋಜಿಸಿದ್ದು, ಉತ್ತಮ ಕೃಷಿಕ ಪ್ರಶಸ್ತಿ ಪುರಸ್ಕೃತ ನರೇಂದ್ರಬಾಬು ಕಾರ್ಯಕ್ರಮ ನಿರೂಪಣೆ ಮಾಡುವರು.

 

ರಂಗ ಕ್ಷೇತ್ರದ ಸಾಧಕರಿಗೆರಂಗ ಗೌರವ

ಸಂದರ್ಭದಲ್ಲಿ ಕನ್ನಡ ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿದ ಹಿರಿಯ ರಂಗ ನಿರ್ದೇಶಕರಾದ ಕೃಷ್ಣಮೂರ್ತಿ ಕವತ್ತಾರ್, ಸುರೇಶ ಆನಗಳ್ಳಿ, ಹಿರಿಯ ಸಾಹಿತಿ ಮುಹಮ್ಮದ್ ಕುಳಾಯಿ, ರಂಗ ಸಂಘಟಕಿ ಪ್ರಿಯಾ ಎಸ್.ಕೆ. ಸಿಂಗ್ ಹಾಗೂ ಹಿರಿಯ ಪತ್ರಕರ್ತ ಕೆ. ಶಿವಸುಬ್ರಹ್ಮಣ್ಯ ಅವರನ್ನುರಂಗ ಗೌರವನೀಡಿ ಸನ್ಮಾನಿಸಲಾಗುತ್ತಿದೆ.

 

ರಂಗಗೀತೆಗಳ ಮೂಲಕ ಸಾಂಸ್ಕೃತಿಕ ರಸಧಾರೆ

ಸಂಜೆ 5.30ಕ್ಕೆ ರಾಜಗುರು ಹೊಸಕೋಟೆ ಮತ್ತು ತಂಡದವರಿಂದ ರಂಗಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ರಂಗಭೂಮಿಯ ಸುವರ್ಣಗೀತೆಗಳು ಪ್ರೇಕ್ಷಕರ ಮನಸೂರೆಗೊಳ್ಳಲಿವೆ.

 

ಮಿತ್ತಬೈಲು ಯಮುನಕ್ಕನಾಟಕ ಪ್ರದರ್ಶನ:

ಸಂಜೆ 6 ಗಂಟೆಗೆ ಡಾ. ಡಿ.ಕೆ. ಚೌಟ ಅವರ ಕಾದಂಬರಿ ಆಧಾರಿತಮಿತ್ತಬೈಲು ಯಮುನಕ್ಕನಾಟಕ ಪ್ರದರ್ಶನವಾಗಲಿದೆ. ಬಸವರಾಜ ಸೂಳೇರಿಪಾಳ್ಯ ನಾಟಕಕ್ಕೆ ರಂಗರೂಪ ನೀಡಿದ್ದು, ಹಾಡುಗಳನ್ನು ಬಸವರಾಜ ಸೂಳೇರಿಪಾಳ್ಯ ಹಾಗೂ ದಾಮೋದರ ಶೆಟ್ಟಿ ರಚಿಸಿದ್ದಾರೆ. ರಾಜಗುರು ರಂಗ ವಿನ್ಯಾಸ, ಸಂಗೀತ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

 

ನಾಟಕದ ನಿರ್ವಹಣೆಯನ್ನು ನಯನ ಜೆ. ಸೂಡ ಹಾಗೂ ಜಿಪಿಒ ಚಂದ್ರು ವಹಿಸಿಕೊಂಡಿದ್ದು, “ರಂಗ ಪಯಣ ಬೆಂಗಳೂರುತಂಡ ನಾಟಕವನ್ನು ಪ್ರಸ್ತುತಪಡಿಸಲಿದೆ.

 

ಕಾರ್ಯಕ್ರಮದ ಆಯೋಜನೆಯಲ್ಲಿ ರಂಗ ನಿರಂತರ, ಶಾರದ ಪ್ರತಿಷ್ಠಾನ, ರಂಗನಾಯಕ ಪ್ರಭಾಕರ್ ಹಾಗೂ ರಂಗಭೂಮಿ ಗೆಳೆಯರು ಸಹ ಕೈಜೋಡಿಸಿದ್ದು, ಕನ್ನಡ ರಂಗಭೂಮಿಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಸದೌತಣವನ್ನು ಕಣ್ತುಂಬಿಕೊಳ್ಳಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top