ಉಡುಪಿ: ರಾಗಧನ ಉಡುಪಿ (ರಿ) ಸಂಸ್ಥೆಯ 37ನೆಯ ವಾರ್ಷಿಕ ಮಹಾಸಭೆ, ಇತ್ತೀಚೆಗೆ ನಿಧನರಾದ ಹಿರಿಯ ಸಂಗೀತ ಗುರು ಹಾಗೂ ಕೊಳಲು ವಿದ್ವಾನ್ ದಿ. ಕೆ.ಯು. ರಾಘವೇಂದ್ರ ರಾವ್ ಅವರಿಗೆ ನುಡಿ ನಮನ ಮತ್ತು ರಾಗರತ್ನ ಮಾಲಿಕೆ- 49 ಸರಣಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಮೇ 31ರ ಭಾನುವಾರ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಅಪರಾಹ್ನ 3.00 ಗಂಟೆಗೆ ಸಂಸ್ಥೆಯ ವಾರ್ಷಿಕ ಮಹಾಸಭೆ ಆರಂಭವಾಗಲಿದ್ದು, ಸಂಜೆ 4.00 ಗಂಟೆಯಿಂದ ದಿ. ಕೆ.ಯು. ರಾಘವೇಂದ್ರ ರಾಯರಿಗೆ ನುಡಿ ನಮನ ಸಲ್ಲಿಕೆ ನಡೆಯಲಿದೆ.
ನಂತರ ಹೇರಂಭ್ ಹಾಗೂ ಹೇಮಂತ್ ಅವರ ದ್ವಂದ್ವ ಕೊಳಲು ವಾದನ ಕಛೇರಿ ನಡೆಯಲಿದ್ದು, ಇವರಿಗೆ ಮೃದಂಗದಲ್ಲಿ ಕೆ.ಯು. ಜಯಚಂದ್ರ ರಾವ್ ಮತ್ತು ವಾಳಪ್ಪಳ್ಳಿ ಕೃಷ್ಣ ಕುಮಾರ್ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


