ಚಿಕ್ಕಬಳ್ಳಾಪುರ:
ನಂದಿ ಹೋಬಳಿಯ ಪೋಶೆಟ್ಟಿಹಳ್ಳಿಯಲ್ಲಿರುವ ಶ್ರೀ ಮಾರುತಿ ಬ್ರಹ್ಮ
ಚೈತನ್ಯ ಶ್ರೀರಾಮ ಮಂದಿರದಲ್ಲಿ ನೂತನ ದ್ವಾರಪಾಲಕರ ಪ್ರತಿಷ್ಠಾಪನೆ
ಹಾಗೂ ಕುಂಭಾಭಿಷೇಕ ಮಹೋತ್ಸವವು ಭಕ್ತಿ ಭಾವಪೂರ್ಣವಾಗಿ ವಿಜೃಂಭಣೆಯಿಂದ ನೆರವೇರಿತು.
ಉತ್ತರ
ಪಿನಾಕಿನಿ ನದಿ ತೀರದಲ್ಲಿರುವ, ಶ್ರೀ
ವ್ಯಾಸರಾಜರಿಂದ ಪ್ರತಿಷ್ಠಾಪಿತ ವೀರಾಂಜನೇಯ ಸ್ವಾಮಿಯ ದೇವಾಲಯದಲ್ಲಿ ಪಾಂಚರಾತ್ರ ಆಗಮ ವಿಧಾನದಂತೆ ಜಯ–ವಿಜಯ ದ್ವಾರಪಾಲಕರ ಪ್ರತಿಷ್ಠಾಪನೆ
ನೆರವೇರಿಸಲಾಯಿತು. ಮಹೋತ್ಸವದ ಅಂಗವಾಗಿ ವಿವಿಧ ಹೋಮ–ಹವನಗಳು ನಡೆದಿದ್ದು,
ಪೂರ್ಣಾಹುತಿ ಕಾರ್ಯಕ್ರಮವು ವೈದಿಕ ಮಂತ್ರೋಚ್ಚಾರಣೆಯ ಮಧ್ಯೆ ಭಕ್ತಿಭಾವದಿಂದ ಜರುಗಿತು.
ಕಾರ್ಯಕ್ರಮದಲ್ಲಿ
ಹಿರಿಯ ಐಎಎಸ್ ಅಧಿಕಾರಿ ಕಾಂತರಾಜು, ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಆರ್. ಗುರುಪ್ರಸಾದ್,
ಪಿ.ಜಿ. ಶ್ರೀನಿವಾಸ, ಪಿ.ಆರ್. ವೆಂಕಟೇಶ ಹಾಗೂ
ದೇವಾಲಯದ ಪ್ರಧಾನ ಅರ್ಚಕ ಪಿ.ವಿ. ರಾಜಕುಮಾರ
ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಲೇಖಕ ಡಾ. ಗುರುರಾಜ
ಪೋಶೆಟ್ಟಿಹಳ್ಳಿ ಮಾತನಾಡಿ, ಸನಾತನ ಧರ್ಮದ ರಕ್ಷಣೆಯ ಹಾಗೂ ಭಕ್ತಿ ಪರಂಪರೆಯ
ಪುನರುಜ್ಜೀವನದ ಉದ್ದೇಶದಿಂದ ಶ್ರೀ ವ್ಯಾಸರಾಜರು ದಕ್ಷಿಣ
ಭಾರತದಾದ್ಯಂತ 732 ಪ್ರಾಣದೇವರ ದೇವಾಲಯಗಳನ್ನು ಸ್ಥಾಪಿಸಿ ಧಾರ್ಮಿಕ ಚೈತನ್ಯವನ್ನು ವಿಸ್ತರಿಸಿದ ಮಹತ್ವವನ್ನು ಸ್ಮರಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


