ಯಾವುದೇ ಕಲಾ ಪ್ರಕಾರವಿರಲಿ ಸಂಪೂರ್ಣ ತೊಡಗಿಸಿಕೊಂಡು ಪ್ರಬುದ್ದತೆ ಪಡೆಯಬೇಕು: ಅಮರೇಶ್ ನುಗಡೋಣಿ

Upayuktha
0

 


 

ಬಳ್ಳಾರಿ: ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಇಂದು ರಾಯಚೂರಿನ ಬೆಳಕು ಸಾಹಿತ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನಿಂದ ಗಡಿನಾಡು ಸಮ್ಮೇಳನ ನಡೆಯಿತು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಅಮರೇಶ ನುಗಡೋಣಿ ಅವರು ಸಮ್ಮೇಳನ ಉದ್ಘಾಟನೆ ಮಾಡಿ, ರಾಜ್ಯದ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಕಾರ್ಯಕ್ರಮದ ಮೂಲಕ ಆಗುತ್ತಿರುವುದು ಸಂತಸದ ಸಂಗತಿ. ಯಾವುದೇ ಕಲಾ ಪ್ರಕಾರ ಇರಲಿ, ಅದರಲ್ಲಿ ಸಂಪೂರ್ಣ ಮನಸ್ಸು ತೊಡಗಿಸಿಕೊಂಡು ಪ್ರಬುದ್ದತೆ ಪಡೆಯಬೇಕು ಎಂದರು.

ಯಾಕೆ, ಯಾರಿಗಾಗಿ ಕಲೆ ಸಾಹಿತ್ಯ ಎಂಬ ಅರಿವು ಸಹ ಇರಬೇಕು. ಕೇವಲ ಫ್ಯಾಶನ್ ಆಗದೆ, ಕಲಾತ್ಮಕತೆಯನ್ನು ಮೈಗೂಡಿಸಿಕೊಳ್ಳಬೇಕು. ಎಷ್ಟು ಬರೆದೆ ಎಂಬುದು ಮುಖ್ಯ ಅಲ್ಲ. ಅವು ಎಷ್ಟು ಕಾಲ ಸಮಾಜಕ್ಕೆ ಪ್ರಸ್ತುತ ಎಂಬುದನ್ನು ಅರಿತು. ಲೋಕದ ಅನಿಷ್ಟತೆಯನ್ನು ಪ್ರಶ್ನಿಸುವಂತಿರಬೇಕು. ಅಂತಹುದನ್ನು ನಾವು ಶಿವ ಶರಣ ವಚನಗಳಲ್ಲಿ ಕಾಣುತ್ತೇವೆ ಎಂದರು.ಮಸಮಾರಂಭಗಳಲ್ಲಿ ಸನ್ಮಾನ ಮಾಡುವುದು, ಮಾಡಿಸಿಕೊಳ್ಳುವುದೇ ಮುಖ್ಯ ಆಗದೆ. ಸಮಾಜದಲ್ಲಿ ಸನ್ಮಾನ ಮಾಡಿಸಿಕೊಂಡವರು ಹತ್ತು ವರ್ಷಗಳ ನಂತರ ಹೇಗೆ ಗುರುತಿಸಿಕೊಳ್ಳುವಂತೆ ಆಗಿದ್ದಾರೆ ಎನ್ನುವಂತಾಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ, ಸರ್ಕಾರದ ಅನುದಾನ ಪಡೆಯದೇ ಬೆಳಕು ಸಂಸ್ಥೆ ಕಲಾವಿದರ ಪ್ರೋತ್ಸಾಹಿಕವಾಗಿ ದಾನಿಗಳ ನೆರವಿನಿಂದಲೇ ನಡೆಸುತ್ತ ಬಂದಿರುವುದು ಹೆಮ್ಮೆಯ ಸಂಗತಿ. ನಮ್ಮ ಕಾರ್ಯಕ್ರಮಗಳ ಮೂಲಕ ಅನೇಕ ಕಲಾವಿದರನ್ನು ಬೆಳಕಿಗೆ ತಂದಿದೆ,ಆನಂತರ ಅಂತಹವರನ್ನು ಸಾಹಿತ್ಯ ಪರಿಷತ್, ಸರ್ಕಾರ ಗುರುತಿಸಿದೆಂದರು.

ವೇಳೆ ಬೆಳಕು ಸಂಸ್ಥೆಯ ಗೌರವ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಹಿರೇಮಠ ಅವರು ಗೀತಾ ವಿ.ಆರ್. ಅವರ "ಗೀತಾಮೃತ" ಕೃತಿಯನ್ನು ಲೋಕಾರ್ಪಣೆ ಮಾಡಿದರು. ನಾಡಿನ ಅನೇಕ ಗಣ್ಯರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ, ಕವಿಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.

ಸಮ್ಮೇಳನದ ಅಧ್ಯಕ್ಷ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಜೋಳದರಾಶಿ ತಿಮ್ಮಪ್ಪ, ಡಾ.ಮಯನಿಯಪ್ಪ, ಸಿದ್ದರಾಮ ಕಲ್ಮಠ, ಬಸವರಾಜ್ ಬಿಸಲಹಳ್ಳಿ, ಶಿವಮೂರ್ತಿ ಹಿರೇಮಠ, ಎನ್.ಬಸವರಾಜ್, ಎನ್.ವೀರಭದ್ರಗೌಡ, ಡಾ.ವಿಷ್ಣು ಎಂ.ಶಿಂದೆ, ಉಮ್ಮತ್ತೂರು ಇಂದು ಶೇಖರ್, ಡಾ.ಎಸ್.ಎಸ್.ಪಾಟೀಲ್ ಹುಬ್ಬಳ್ಳಿ ಮೊದಲಾದವರು ಇದ್ದರು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

Post a Comment

0 Comments
Post a Comment (0)
To Top