ಅಧಿಕ ಮಾಸ ಬಂತು, ಸಾಧನೆಗೆ
ಸಕಾಲ, ಅಧಿಕಾನಂದವ ತಂತು
ಪರಮಪುರುಷ ಪುರುಷೋತ್ತಮನ
ಪರಮ ಪುಣ್ಯತಮ ಮಾಸ ಬಂತು
ತಾವೇ ಹೆಚ್ಚೆಂದು ಮೆರೆವ ಮಾಸಗಳ
ಮದ ಇಳಿಸಿ, ಮಲ ಮಾಸದ ಮಲವ
ತೊಲಗಿಸಿ, ಸಕಲ ಮಾಸಗಳಿಗಿಂತ
ಅಧಿಕ ಬಲ ನೀಡಿ ಪುರುಷೋತ್ತಮನೇ
ಅಧಿಪತಿಯಾದ ಮಾಸವಿದು
ಮೂವತ್ತು- ಮೂರು ಪ್ರದಕ್ಷಿಣೆ,ನಮಸ್ಕಾರ
ಮೂವತ್ತು- ಮೂರು ಅಪೂಪ ದಾನ
ಮೂವತ್ತು- ಮೂರು ಹಾಡುಗಳ ಹಾಡಲು
ಮೂವತ್ತು- ಮೂರು ಕೋಟಿ ದೇವತೆಗಳು
ಸಂತುಷ್ಟರಾಗಿ ಅಧಿಕ ಫಲ ಕೊಡುವ ಮಾಸವಿದು
ಮೂರು ವರುಷಗಳಿಗೊಮ್ಮೆ ಬರುವ
ಈ ಅಧಿಕ ಮಾಸದಲಿ
ಶುದ್ಧ ಮನದಿ ಮಾಡಿದ ವ್ರತ ದಾನಗಳಿಗೆ
ಪುರುಷೋತ್ತಮನೊಲಿದು
ಮುಕುತಿಯ ಮಾರ್ಗವನ್ನು ತೋರುವ ಮಾಸವಿದು.
- ಶ್ರೀಮತಿ ವೀಣಾ ಬರಗಿ, ಹುಬ್ಬಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


