ಕವನ: ಮದುವೆ ಸಂಭ್ರಮ

Upayuktha
0


ಹೊರಟೆವು ಸಂಭ್ರಮದಿಂದಲಿ ಮದುವೆಗೆ 

ಪಟ್ಟೆಯ ಸೀರೆಯ ಧರಿಸುತ್ತ

ಕೊರಳಲಿ ಪಳಪಳ ಹೊಳೆಯುವ ಹಾರವು 

ಕಣ್ಣನು ಕುಕ್ಕುವ ಬಂಗಾರ ||


ಬೆಳಗಿನ ಕಾಫಿಗೆ ಇಡ್ಲಿ ರಸಾಯನ

ಕ್ಷೀರದ ಜೊತೆಯಲಿ  ಉಪ್ಪಿಟ್ಟು

ಉದ್ದಿನ ವಡೆಯೂ ಚಟ್ನಿ ಸಾಂಬಾರು 

ನಂದಿನಿ ಮೊಸರು ಬಲುಮೋದ||


ಸೋಡಾ ಶರ್ಬತ್, ಕಬ್ಬಿನ ಹಾಲೂ

ಹಲಸಿನ ಕುರು ಕುರು ಸವಿ ಚಿಪ್ಸು

ಬೇಸಿಗೆಯಲ್ಲೂ ತಂಪಿನ ಅನುಭವ

ಮಲ್ಲಿಗೆ ಹೂವಿನ ನರುಗಂಪು||


ವೈದಿಕ ವರ್ಗದ ತಾರಕ ಮಂತ್ರ

ಕೇಳಲು ಏನೋ ಕರ್ಣಾನಂದ

ಛಾಯಾಗ್ರಾಹಕರೆಲ್ಲರ ನಯನ

ನೂತನ ದಂಪತಿಗಳ ನಡೆಯೆಡೆಗೆ||


ಕೈಯನು ಕುಲುಕುತ ಸೇಸೆಯನಿಕ್ಕಲು 

ವೇದಿಕೆಯೆಡೆಗೇ ಆಗಮನ 

ಬಂಧು ಮಿತ್ರರ ಅಪೂರ್ವ ಸಂಗಮ 

ಮುಖದಲಿ ಸಂತಸ ಸಮಾಗಮ||


ಮಧ್ಯಾಹ್ನಕೆ ಸವಿ ಮೃಷ್ಟಾನ್ನ ಭೋಜನ 

ಬಾಳೆಲೆ ತುಂಬಾ ವ್ಯಂಜನವು

ಬಿದ್ದಿತು ಮೊದಲಿಗೆ ಪಾಯಸ ಬಲಬದಿ, 

ತುದಿಯಲಿ ಕೋಸಂಬರಿ ಚಿತ್ರಾನ್ನ||


ಬಗೆ ಬಗೆ ಪಲ್ಯದ ಜೊತೆ ಮೆಣಸ್ಕಾಯಿ

ನೈವೇದ್ಯ ಹಪ್ಪಳ ಉಪ್ಪಿನಕಾಯಿ

ಘಮಘಮಿಸುವ ಸಾರು ಸಾಂಬಾರು 

ಎಡೆಯಲಿ ಬಂದಿತು ಪಲಾವ್ ಗೊಜ್ಜು ||


ಪೂರಿ ಸಾಗು ಖರ್ಜೂರ ಪಾಯಸ

ಹೋಳಿಗೆ ತುಪ್ಪ ಕಾಯ್ಹಾಲು 

ಖಾರಕೆ ಬಂದಿತು ಗೆಣಸಿನ ಪೋಡಿ

ಮೆಲ್ಲುತ ಹಾಡುವ ಚೂರ್ಣಿಕೆ ನೋಡಿ ||


ಹೊಟ್ಟೆಯು ಬಿರಿದು ಢರ್ರನೆ ತೇಗಲು 

ಬಂದಿತು ಮೇಲೋಗರ ಮಜ್ಜಿಗೆಯು

ಹರ ಹರ ಮಹದೇವನ ಸ್ಮರಿಸುತ

ಎದ್ದರು ಎಲ್ಲರೂ ಜೊತೆಯಲ್ಲಿ||


ಕ್ಯಾಂಡಿಯ ಸವಿಯಲು ತಂಪಿನ ಅನುಭವ 

ಜೊತೆಯಲಿ ಇದ್ದಿತು ಮಸಾಲೆ ಬೀಡ 

ಬಡಿಸುವ ತವಕವು ಒಂದೆಡೆಯಾದರೆ

ಹೊರಡುವ ಗೌಜಿಯು ಮನೆಯೆಡೆಗೆ||



- ಲಕ್ಷ್ಮೀ ವಿ ಭಟ್, ತಲಂಜೇರಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top