ಧ್ಯೇಯ ತಪಸ್ವಿ- ಮಖನ್ ಲಾಲ್ ಸರ್ಕಾರ್

Upayuktha
0


ಕೋಲ್ಕತ್ತಾದ ಆ ಮೈದಾನದಲ್ಲಿ ಜನಸಾಗರ ಉಕ್ಕಿ ಹರಿಯುತ್ತಿದೆ. ಒಂದು ಕಡೆ ದೆಹಲಿಯ ಘಟಾನುಘಟಿ ನಾಯಕರು. ಇನ್ನೊಂದು ಕಡೆ ಇತಿಹಾಸ ಬರೆದು ಮುಖ್ಯಮಂತ್ರಿ ಪಟ್ಟಕ್ಕೇರುತ್ತಿರುವ ಸುವೇಂದು ಅಧಿಕಾರಿ. ಇಡೀ ದೇಶದ ಕಣ್ಣು ಆ ಸ್ಟೇಜ್ ಮೇಲಿದೆ. ಅಷ್ಟರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಯ ಮೇಲೆ ನಡ್ಕೊಂಡು ಹೋಗ್ತಾ ದಿಢೀರ್ ಅಂತ ನಿಲ್ತಾರೆ. ಎದುರಿಗೆ ಒಬ್ಬ 98 ವರ್ಷದ ವೃದ್ಧ ಕುಳಿತಿದ್ದಾರೆ. ಮೋದಿ ಯೋಚನೆ ಕೂಡ ಮಾಡದೆ ನೇರ ಹೋಗಿ ಅವರ ಕಾಲಿಗೆ ಅಡ್ಡಬಿದ್ದು ನಮಸ್ಕರಿಸ್ತಾರೆ! ಅಷ್ಟೇ ಅಲ್ಲ, ಮಗುವಿನಂತೆ ಅವರನ್ನ ತಬ್ಬಿಕೊಳ್ತಾರೆ.


ಯಾರು ಈ ವೃದ್ಧ? ದೇಶದ ಪ್ರಧಾನಿ ಇವರ ಕಾಲಿಗೆ ಬೀಳೋಕೆ ಕಾರಣವೇನು? ಅವರ ಹೆಸರೇನು?


ಮಖನ್ ಲಾಲ್ ಸರ್ಕಾರ್... ಇವತ್ತು ಬಂಗಾಳದಲ್ಲಿ ಕೇಸರಿ ಬಾವುಟ ಹಾರಿರಬಹುದು, ವಿಜಯೋತ್ಸವ ನಡೀತಿರಬಹುದು. ಆದ್ರೆ ಈ ಮಖನ್ ಲಾಲ್ ಸರ್ಕಾರ್ ಅನ್ನೋ ವ್ಯಕ್ತಿ ಇದ್ದಾರಲ್ಲ, ಇವತ್ತು ಬಿಜೆಪಿ ಸರ್ಕಾರ ಅರಳೋಕೆ ಇಂಥವರೇ ಕಾರಣ.


ಇವರು ಆರು ದಶಕಗಳ ಹಿಂದೆ ಮಾಡಿದ ಒಂದು ಕೆಲಸದ ಬಗ್ಗೆ ನೀವು ತಿಳ್ಕೊಬೇಕು. ಅದು ಕಾಂಗ್ರೆಸ್ ಆಡಳಿತವಿದ್ದ ಕಾಲ.. RSS ಬ್ಯಾನ್ ಆಗಿದ್ದ ಸಂದರ್ಭ.. ಆಗ ಈ ಮಖನ್ ಲಾಲ್ ಸರ್ಕಾರ್ ರಸ್ತೆಯಲ್ಲಿ ನಿಂತು ದೇಶಭಕ್ತಿ ಗೀತೆ ಹಾಡ್ತಿದ್ರು ಅನ್ನೋ ಕಾರಣಕ್ಕೆ ದೆಹಲಿ ಪೊಲೀಸರು ಇವರನ್ನ ಅರೆಸ್ಟ್ ಮಾಡಿ ಕೋರ್ಟ್ ಮುಂದೆ ನಿಲ್ಲಿಸ್ತಾರೆ.


ಜಡ್ಜ್ ಕೇಳ್ತಾರೆ, "ನೀನು ಮಾಡಿರೋ ತಪ್ಪಿಗೆ ಕ್ಷಮೆ ಕೇಳು, ಬಿಟ್ಟುಬಿಡ್ತೀನಿ" ಅಂತ. ಅದಕ್ಕೆ ಈ ಮನುಷ್ಯ ಕೊಟ್ಟ ಉತ್ತರ ಕೇಳಿ... "ನಾನು ಮಾಡಿರೋದು ಅಪರಾಧ ಅಲ್ಲ, ದೇಶದ ಬಗ್ಗೆ ಹಾಡು ಹಾಡೋದು ತಪ್ಪಾ? ಕ್ಷಮೆ ಕೇಳೋ ಪ್ರಶ್ನೆಯೇ ಇಲ್ಲ" ಅಂತ ಗರ್ಜಿಸ್ತಾರೆ. ಅಷ್ಟೇ ಅಲ್ಲ, ಜಡ್ಜ್ ಆ ಹಾಡು ಯಾವುದು ಅಂತ ಕೇಳಿದ್ದಕ್ಕೆ, ಅದೇ ಕೋರ್ಟ್ ರೂಮ್‌ನಲ್ಲಿ ಎಲ್ಲರ ಎದುರು ಮತ್ತೆ ಅದೇ ದೇಶಭಕ್ತಿ ಗೀತೆಯನ್ನ ಹಾಡ್ತಾರೆ!

 

ಆ ಹಾಡಿನ ಕಿಚ್ಚು ಎಷ್ಟಿತ್ತಂದ್ರೆ, ಜಡ್ಜ್ ಸಾಹೇಬರು ಇವರನ್ನ ಬಿಡುಗಡೆ ಮಾಡಿದ್ದಷ್ಟೇ ಅಲ್ಲ, ಗೌರವದಿಂದ ಊರಿಗೆ ಹೋಗೋಕೆ ಫಸ್ಟ್ ಕ್ಲಾಸ್ ಟಿಕೆಟ್ ಕೊಟ್ಟು, ಕೈಗೆ ನೂರು ರೂಪಾಯಿ ಇಟ್ಟು ಕಳಿಸಿಕೊಡ್ತಾರೆ!


ಆದ್ರೆ ಅಸಲಿ ಕಥೆ ಇದಲ್ಲ. 1952ರಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಕಾಶ್ಮೀರದಲ್ಲಿ ತಿರಂಗಾ ಹಾರಿಸೋಕೆ ಹೋದಾಗ, ಅವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದವರು ಇದೇ ಮಖನ್ ಲಾಲ್ ಸರ್ಕಾರ್. ಮುಖರ್ಜಿ ಅವರನ್ನ ಅರೆಸ್ಟ್ ಮಾಡಿದಾಗ ಇವರೂ ಅವರ ಜೊತೆ ಜೈಲಿಗೆ ಹೋದ್ರು. ಕಣ್ಣೆದುರೇ ತಮ್ಮ ನಾಯಕ ಪ್ರಾಣ ಬಿಟ್ಟಿದ್ದನ್ನ ನೋಡಿದ್ರು.


ಅವತ್ತು ಆ ಸಣ್ಣ ವಯಸ್ಸಿನಲ್ಲಿ ಬಿದ್ದ ಕಿಡಿ, ಇವತ್ತು 98ನೇ ವಯಸ್ಸಿನಲ್ಲಿ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬರೋವರೆಗೂ ಆರಿರಲಿಲ್ಲ..


ಯಾವಾಗ ಬಿಜೆಪಿ ಅನ್ನೋ ಪಕ್ಷಕ್ಕೆ ಬಂಗಾಳದಲ್ಲಿ ಅಡ್ರೆಸ್ಸೇ ಇರಲಿಲ್ವೋ, ಯಾರೂ ಜೈ ಶ್ರೀರಾಮ್ ಅನ್ನೋಕೂ ಹೆದರುತ್ತಿದ್ರೋ... ಅಂತಹ ಕಾಲದಲ್ಲಿ ಒಬ್ಬೊಬ್ಬರನ್ನೇ ಸೇರಿಸ್ತಾ ಕೇವಲ ಒಂದು ವರ್ಷದಲ್ಲಿ 10 ಸಾವಿರ ಜನರನ್ನ ಸಂಘಟಿಸಿದ್ರು ಈ ಮಖನ್ ಲಾಲ್.


ಇವತ್ತು ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತಗೊಳ್ತಿರೋದು ಬರೀ ರಾಜಕೀಯ ಗೆಲುವಲ್ಲ. ಅದು ಈ ಮಖನ್ ಲಾಲ್ ಸರ್ಕಾರ್ ಅಂತಹ ಸಾವಿರಾರು ಮೌನ ಕ್ರಾಂತಿಕಾರಿಗಳ 70 ವರ್ಷಗಳ ಕಾಯುವಿಕೆಗೆ ಸಿಕ್ಕ ಪ್ರತಿಫಲ.


ಪ್ರಧಾನಿ ಮೋದಿ ಇವರ ಕಾಲಿಗೆ ಬಿದ್ದಿದ್ದು ಬರೀ ಒಬ್ಬ ವ್ಯಕ್ತಿಗಲ್ಲ, ಬಂಗಾಳದ ಆ ಮಣ್ಣಿನ ಹಠಕ್ಕೆ.. ಅಪ್ಪಟ ದೇಶಪ್ರೇಮಕ್ಕೆ!


ಯೋಚನೆ ಮಾಡಿ ನೋಡಿ... ಅಂದು ಆ ಕೋರ್ಟ್ ರೂಮ್‌ನಲ್ಲಿ ಮಖನ್ ಲಾಲ್ ಸರ್ಕಾರ್ ಕ್ಷಮೆ ಕೇಳಿದ್ರೆ ಇವತ್ತು ಈ ಇತಿಹಾಸ ಇರ್ತಿತ್ತಾ? ಸತ್ಯ ಅಂದ್ರೆ... ಇತಿಹಾಸ ನಿರ್ಮಾಣವಾಗೋದು ಅಧಿಕಾರದಿಂದಲ್ಲ, ಇಂತಹ ಅಚಲವಾದ ಛಲದಿಂದ! ನಿಮ್ಮ ಪ್ರಕಾರ ಒಬ್ಬ ಮನುಷ್ಯ ತನ್ನ ನಂಬಿಕೆಗಾಗಿ 70 ವರ್ಷ ಕಾಯೋದು ಅಂದ್ರೆ ಅದು ಸಾಮಾನ್ಯ ವಿಷಯನಾ?


ಇಂಥಾ ಅಸಾಮಾನ್ಯರು ಅದೆಷ್ಟೋ..


- ಹಿಂದೂಸ್ತಾನ್ 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top