ಸ್ವಯಂ ಸೇವಾ ಸಂಸ್ಥೆಗಳ ಬಲವರ್ಧನೆ ಹಾಗೂ ದೃಷ್ಟಿಕೋನ: ಒಂದು ದಿನದ ಕಾರ್ಯಾಗಾರ

Upayuktha
0

  


ಹುನಗುಂದ: ವಿಜ್ಞಾನ ಭಾರತಿ-ಇಂಡಿಯಾ (ವಿಭಾವಾಣಿ) ನವದೆಹಲಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಬರ್ಡ್ಸ ಹುನಗುಂದ ಆತ್ಮ ಸಾಕ್ಷಿ ತರಬೇತಿ ಕೇಂದ್ರದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಬಲವರ್ಧನೆ ಮತ್ತು ದೃಷ್ಟಿಕೋನದ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.

 

ಕಾರ್ಯಕ್ರಮವನ್ನು ವಿಭಾವಾಣಿ -ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಎನ್. ಪಿ ಉದ್ಘಾಟಿಸಿ ಮಾತನಾಡಿ ವಿಭಾವಾಣಿ ಇದು ಒಕ್ಕೂಟ ಅಲ್ಲ ಅಸೋಶಿಯೇಶನ್ ಆಗಿದೆ ಕರ್ನಾಟಕ ಚಾಪ್ಟರ ನೋಂದಣಿ ಮಾಡಿಸಿದ ಸ್ವಯಂ ಸೇವಾ ಸಂಸ್ಥೆಗಳಿಗೆ ಸಿ.ಎಸ್. ಆರ್ ಹಣಕಾಸಿನ ನೆರವು ಸಿಗಲೆಂದು ಪ್ರಪೋಜಲ್ ಬರೆಯುವ ಕುರಿತು ತರಬೇತಿ ನೀಡುತ್ತಿದೆ. ಕಳೆದ 10 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿ ಮುಂದಿನ ಮೂರು ವರ್ಷಗಳ ಕಾರ್ಯತಂತ್ರ ಯೋಜನೆ ವಿವರಿಸಿದರು.

 

ಅಧ್ಯಕ್ಷತೆ ವಹಿಸಿದ್ದ ಬರ್ಡ್ಸ ಸಂಸ್ಥೆಯ ಮಹಾಂತೇಶ ಅಗಸಿಮುಂದಿನ ಮಾತನಾಡುತ್ತಾ ಹುದ್ದೆಗಳು ಆದೇಶ ಮಾಡುವುದಕ್ಕಲ್ಲ ತಳ ಮಟ್ಟದಿಂದ ಕೆಲಸ ನಿರ್ವಹಿಸುವುದು ಕೆಳ ವರ್ಗದ ಜನರ ಅಭ್ಯುದಯಕ್ಕಾಗಿ ಶ್ರಮಿಸುವುದಾಗಿದೆ, ಅಲ್ಪ ಸಮಯದಲ್ಲಿ ತಾವು ಬಿಡುವು ಮಾಡಿಕೊಂಡು ಭಾಗವಹಿಸಿರುವುದು ಶ್ಲ್ಯಾಘನೀಯ, ನಿಮಗೆ ಉಚಿತವಾಗಿ ಸೇವೆ ಬೇಕೆಂದರೆ ವಿಭಾವಾಣಿ ಹಾಗೂ ಬರ್ಡ್ಸ ಸಂಸ್ಥೆ ಸದಾ ಸಿದ್ದ ಎಂದರು.

 

ರಾಜ್ಯ ಅಧ್ಯಕ್ಷರಾದ ಸುಗರಯ್ಯಸ್ವಾಮಿ ಸ್ವಾಗತಿಸಿ ಸಂಪನ್ಮೂಲ ಕ್ರೋಢೀಕರಣ ಕುರಿತು ಮಾತನಾಡಿದರು. ಕಾರ್ಯದರ್ಶಿ ವಿ. ಚಕ್ರಪಾಣಿ ವಿಭಾವಾಣಿ-ಕನಾಟಕ ಚಾಪ್ಟರ ಕುರಿತು ಮಾತನಾಡಿದರು. ರಾಜ್ಯ ಸಂಯೋಜಕ ಡಿ.ಟಿ. ಶ್ರೀನಿವಾಸಮೂರ್ತಿ ಸಂಸ್ಥೆಯ ರಚನೆ ಹಾಗೂ ವಿಭಾವಾಣಿ ಸದಸ್ಯತ್ವ ಕುರಿತು ವಿವರಿಸಿದರು, ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ಡಾ.ಜಿ.ವಿ. ಲಕ್ಷ್ಮೀ ದೇವಿ ಮಹಿಳಾ ಕಾರ್ಯಕ್ರಮ ಕುರಿತು ವಿವರಿಸಿದರು, ಸಂಪನ್ಮೂಲ ವ್ಯೆಕ್ತಿಗಳಾದ ಮಹಾಂತೇಶ ಅಗಸಿಮುಂದಿನ ಸಿ.ಎಸ್. ಆರ್ ಚಟುವಟಿಕೆ ಕುರಿತು ಮಾಹಿತಿ ನೀಡಿದರು. ಗೋವಿಂದಯ್ಯ ಯೋಜನಾ ವರದಿ ತಯಾರಿಕೆ ಪದ್ಧತಿ ವಿವರಿಸಿದರು. ಆನಂದ.ಬಿ. ಶಿರಬೂರ ಗ್ರೀನ್ ಹೌಸ್ ಹಾಗೂ ಪರಿಸರದ ಸಂರಕ್ಷಣೆ ಕುರಿತು ಮಾತನಾಡಿದರು. ವಿ.ಎನ್. ಮೂರ್ತಿ ಹಾಗೂ ಹರೀಶ ಫೀಡಬ್ಯಾಕ್ ಹೇಳಿದರು. ಚಕ್ರಪಾಣಿ ವಂದಿಸಿದರು. ಕಾರ್ಯಕ್ರಮವನ್ನು ವಿರೇಶ ಅಳವಂಡಿ  ನಿರ್ವಹಿಸಿದರು. ಒಟ್ಟು 50 ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top