ಬೆಂಗಳೂರು:
ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ
ಶೃಂಗೇರಿ ಇವರ ಆಶ್ರಯದಲ್ಲಿನ ಬಾಲ
ಭಾರತಿ ಸಂಸ್ಥೆ ವತಿಯಿಂದ ಬೆಂಗಳೂರಿನ ಅಕ್ಷಯನಗರದ ಶ್ರೀ ವಾದಿರಾಜ ಕಲಾ
ಭವನದಲ್ಲಿ ಮೇ 15-21 ರ ವರೆಗೆ ನಡೆದ
ಮಕ್ಕಳ ಬೇಸಿಗೆ ಸಂಸ್ಕಾರ ಶಿಬಿರದಲ್ಲಿ 12-16 ವಯೋಮಿತಿಯ 55 ಮಕ್ಕಳು ಭಾಗವಹಿಸಿದ್ದರು.
ಸಂಕ್ಷಿಪ್ತ
ಪೂಜಾ ಪದ್ಧತಿ, ಸುವಿಚಾರ, ಕ್ರೀಡೆ,ಆತ್ಮ ನಿರ್ಭರತೆ, ಮೌಲ್ಯಗಳು,
ಯೋಗಾಭ್ಯಾಸ- ಮೊದಲಾದ ತರಗತಿ ಮತ್ತು ತರಬೇತಿ ಮಕ್ಕಳನ್ನು ಆಕರ್ಷಿಸಿದವು.
ಶ್ರೀ
ಮಠದ ವಿದ್ಯಾರ್ಥಿ, ವಿದ್ವಾನ್ ಶ್ರೀ ನಿರಂಜನ ನಾರಾಯಣ
ಭಟ್ ಈ ಏಳು ದಿನಗಳ
ಶಿಬಿರವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.
ಡಾ.
ಹೆಚ್.ಕೆ. ಪ್ರಕಾಶ್ ಸನಾತನ
ಸಂಸ್ಕಾರದ ಅಗತ್ಯ ಹಾಗೂ ಮಹತ್ವ ಕುರಿತು
ಮಾತನಾಡಿದರು. ಇಂತಹ ಶಿಬಿರಗಳ ಉಪಯುಕ್ತತೆ
ಅರ್ಥ ಮಾಡಿಕೊಂಡು ಮಕ್ಕಳನ್ನು ಕಳುಹಿಸಿಕೊಟ್ಟ ಪಾಲಕರಿಗೂ, ಪಾಲ್ಗೊಂಡ ಮಕ್ಕಳಿಗೂ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೂ ಶೃಂಗೇರಿ ಮಠದ ಬಾಲ ಭಾರತಿ
ಸಂಸ್ಥೆಗೂ ಅಭಿನಂದನೆ ಸಲ್ಲಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

