ಹರಿದಾಸ ಪರಂಪರೆ ನಿರಂತರವಾಗಿ ಮುಂದುವರಿಯಲಿ- ಸುಂದರ ಶೆಟ್ಟಿ ಬೆಟ್ಟಂಪಾಡಿ

Upayuktha
0

  


ಸುರತ್ಕಲ್: ಕಥಾ ಕೀರ್ತನೆಯು ಜೀವನ ಮೌಲ್ಯಗಳು ಮತ್ತು ಪೌರಾಣಿಕ ಪ್ರಜ್ಞೆಯನ್ನು ಮೂಡಿಸುವ ಶ್ರೇಷ್ಠ ಕಲೆಯಾಗಿದೆ. ಕಥಾ ಕೀರ್ತನೆಗೆ ಹಿರಿದಾದ ಪರಂಪರೆಯಿದ್ದು ಧಾರ್ಮಿಕ ಕೇಂದ್ರಗಳು ಕಲೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕಾಗಿವೆ. ಹರಿದಾಸ ಪರಂಪರೆ ನಿರಂತರವಾಗಿ ಮುಂದುವರಿಯಲಿ ಎಂದು ವಿಜಯ ಬ್ಯಾಂಕ್ ನಿವೃತ್ತ ಮುಖ್ಯ ಪ್ರಬಂಧಕ ಮತ್ತು ಪುತ್ತೂರು ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷಗಾನ ಪ್ರತಿಷ್ಠಾನದ ಅಧ್ಯಕ್ಷ ಸುಂದರ ಶೆಟ್ಟಿ ಬೆಟ್ಟಂಪಾಡಿ ನುಡಿದರು.

 

ಅವರು ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ) ಇವರ ಆಶ್ರಯದಲ್ಲಿ ಸುರತ್ಕಲ್ ಅನುಪಲ್ಲವಿಯ ಶ್ರೀ ವಿಶ್ವೇಶ ತೀರ್ಥ ಸಭಾಂಗಣದಲ್ಲಿ ನಡೆದ ಕಥಾ ಕೀರ್ತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

 

ಹರಿಕಥಾ ಪರಿಷತ್ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಮಾತನಾಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿದಾಸರ ಸಂಖ್ಯೆ ಕಡಿಮೆಯಾಗುತ್ತಿದ್ದು ಯುವ ಸಮುದಾಯ ಆಸಕ್ತಿ ತಾಳಬೇಕಾಗಿದೆ. ಹರಿಕಥಾ ಪರಿಷತ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಸಂಸ್ಥೆಗಳ ಸಹಕಾರ ಅಗತ್ಯ ಎಂದರು.

 

ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ಅವರಿಂದ ಶ್ರೀ ಕೃಷ್ಣ ತುಲಾಭಾರ ಕಥಾ ಕೀರ್ತನ ನಡೆಯಿತು. ತಬಲಾದಲ್ಲಿ ದೀಪಕ್ ರಾಜ್ ಉಳ್ಳಾಲ್, ಕೀ ಬೋರ್ಡ್ ನಲ್ಲಿ ಸತೀಶ್ ಸುರತ್ಕಲ್ ಮತ್ತು ಸಹ ಗಾಯನದಲ್ಲಿ ಅಭಿಷೇಕ್ ಸಹಕರಿಸಿದರು. ಹರಿಕಥಾ ಪರಿಷತ್ ಉಪಾಧ್ಯಕ್ಷ ನಾರಾಯಣ ರಾವ್ ಮತ್ತು ವಿಭು ರಾವ್ ಉಪಸ್ಥಿತರಿದ್ದರು.

 

ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿದರು. ಕೃಷ್ಣಮೂರ್ತಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top