ಅಣ್ಣ ಎಂದರೆ ಬರಿ ಹೆಸರಲ್ಲ ಅದೇಷ್ಟೋ ತಂಗಿಯರ ಕನಸು ಅಣ್ಣ ಎನ್ನುವುದು ಜೀವನದಲ್ಲಿ ದೇವರು ಕೊಟ್ಟ ಅಮೂಲ್ಯವಾದ ಉಡುಗೊರೆ. ಅಣ್ಣ ಕೇವಲ ಕುಟುಂಬದ ಸದಸ್ಯನಲ್ಲ, ಒಳ್ಳೆಯ ಸ್ನೇಹಿತ, ಮಾರ್ಗದರ್ಶಕ ಮತ್ತು ರಕ್ಷಕ ಕೂಡ ಹೌದು. ಸಂತೋಷದ ಸಮಯದಲ್ಲಿಯೂ ಕಷ್ಟದ ಸಮಯದಲ್ಲಿಯೂ ಅಣ್ಣ ಸದಾ ನಮ್ಮ ಜೊತೆ ನಿಂತಿರುತ್ತಾನೆ. ಅಣ್ಣನಲಿ ನಾನು ಕಂಡಿದ್ದು ಒಳ್ಳೆಯ ಸ್ನೇಹಿತ, ಕಾವಲುಗಾರ, ಒಮ್ಮೊಮ್ಮೆ ಅಪ್ಪನೆ ಆಗಿ ಬಿಡುತ್ತಾನೆ.
ಅದೆಷ್ಟೋ ಬಾರಿ ಜಗಳ ಆಡಿದರೂ ಕೂಡ ಅದೇ ಪ್ರೀತಿ ಅದೇ ಬಾಂಧವ್ಯ. ಸಹೋದರನ ಬಾಂಧವ್ಯವು ಪ್ರೀತಿ, ನಂಬಿಕೆ ಮತ್ತು ರಕ್ಷಣೆಯ ಅದ್ಭುತ ಸಂಗಮವಾಗಿದೆ. ಒಬ್ಬ ಸಹೋದರನು ಕೇವಲ ರಕ್ತಸಂಬಂಧಿಯಲ್ಲದೆ, ಜೀವನದ ಪ್ರತಿ ಹಂತದಲ್ಲೂ ಜೊತೆಗಿರುವ ಆಪ್ತ ಸ್ನೇಹಿತ ಮತ್ತು ಮಾರ್ಗದರ್ಶಕನಾಗಿರುತ್ತಾನೆ. ಬಾಲ್ಯದ ತುಂಟಾಟಗಳಿಂದ ಹಿಡಿದು ವಯಸ್ಸಾದ ಮೇಲಿನ ಜವಾಬ್ದಾರಿಗಳವರೆಗೆ, ಅವನು ನಮಗೆ ಧೈರ್ಯ ಮತ್ತು ಬೆಂಬಲದ ಬೆನ್ನೆಲುಬಾಗಿ ನಿಲ್ಲುತ್ತಾನೆ. ಎಷ್ಟೇ ಜಗಳಗಳಿದ್ದರೂ ಸಹೋದರನ ನಡುವಿನ ಪ್ರೀತಿಯು ನಿಷ್ಕಲ್ಮಶವಾಗಿದ್ದು, ಸಂಕಷ್ಟದ ಸಮಯದಲ್ಲಿ ಮೊದಲು ನೆರವಾಗುವವನೇ ಸಹೋದರ.
ಒಟ್ಟಾರೆಯಾಗಿ ಹೇಳುವುದಾದರೆ, ಸಹೋದರತ್ವವು ಬದುಕಿಗೆ ಭದ್ರತೆ ಮತ್ತು ಸಂತೋಷವನ್ನು ನೀಡುವ ಒಂದು ಪವಿತ್ರ ಬಂಧವಾಗಿದೆ.
ನನ್ನ ಯಶಸ್ಸನ್ನು ನನಗಿಂತ ನನ್ನ ಅಣ್ಣನೇ ಹೆಚ್ಚಾಗಿ ಸಂಭ್ರಮಿಸುತ್ತಾನೆ. ನನಗೆ ಅದೇನೆ ಸಮಸ್ಯೆ ಬಂದರೂ ಮೊದಲು ನನಗೆ ನೆನಪಾಗುವುದು ನನ್ನ ಅಣ್ಣ ಮಾತ್ರ. ಅವನಲ್ಲಿ ನಾನು ಪಡೆದಿದ್ದು ಅಮೂಲ್ಯವಾದ ಪ್ರೀತಿ ಮತ್ತು ಆರೈಕೆ. ನನ್ನ ಜೊತೆ ಯಾರು ಇಲ್ಲದ ಸಮಯದಲ್ಲಿ ಜೊತೆ ನಿಂತುದು ಅವನೇ ಬೈದು ಬುದ್ಧಿ ಹೇಳಿದ್ದು ಅವನೆ ಕೆಲವೊಮ್ಮೆ ಅಣ್ಣನಿಗಿಂತಾ ಅಪ್ಪನ ಹಾಗೆ ವರ್ತಿಸುತ್ತಾನೆ. ಅದೆಷ್ಟೇ ಕಷ್ಟ ಬಂದರೂ ನಿನ್ನ ಜೊತೆ ನಾನಿದ್ದೇನೆ ಎಂದು ಬೆನ್ನ ಹಿಂದೆ ನಿಂತ ಒಬ್ಬ ವ್ಯಕ್ತಿ ಅಂದರೆ ಅವನೆ ನನ್ನ ಅಣ್ಣ.
-ಚೈತನ್ಯ ವೇದಿಕಾ
ದ್ವಿತೀಯ ಪತ್ರಿಕೋಧ್ಯಮ
ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


