ಮೇ-ಜೂನ್ ತಿಂಗಳ ಪಡಿತರ ಮೇ ತಿಂಗಳಲ್ಲಿಯೇ ವಿತರಣೆ

Upayuktha
0

ಮಂಗಳೂರು: ರಾಷ್ಟ್ರ್ರೀಯ ಆಹಾರ ಭದ್ರತಾ ಕಾಯಿದೆ (ಎನ್.ಎಫ್.ಎಸ್.) ಅಡಿ ಮೇ ಮತ್ತು ಜೂನ್ ಎರಡೂ ತಿಂಗಳ ಆಹಾರ ಧಾನ್ಯವನ್ನು ಮೇ  ತಿಂಗಳಲ್ಲಿಯೇ ವಿತರಣೆ ಮಾಡಲು ಸರ್ಕಾರದ ನಿರ್ದೇಶನದ ಅನ್ವಯ ಕೆಳಕಂಡ ವಿತರಣಾ ಪ್ರಮಾಣದಲ್ಲಿ ಪಡಿತರ ಚೀಟಿದಾರರಿಗೆ ಅಕ್ಕಿ ಹಂಚಿಕೆ ಮಾಡಲಾಗಿದೆ.

ಅಂತ್ಯೋದಯ ಪಡಿತರ ಚೀಟಿದಾರರಿಗೆ ಮೇ  ಮತ್ತು ಜೂನ್ ತಿಂಗಳಿಗೆ 35 ಕೆ.ಜಿ ಅಕ್ಕಿ (ಒಟ್ಟು 70 ಕೆ.ಜಿ), ಆದ್ಯತಾ ಪಡಿತರ ಚೀಟಿದಾರರಿಗೆ (ಕೇಂದ್ರ) (ಪ್ರತಿ ಸದಸ್ಯರಿಗೆ) 5 ಕೆ.ಜಿ ಅಕ್ಕಿ (ಒಟ್ಟು 10 ಕೆ.ಜಿ), ಆದ್ಯತಾ ಪಡಿತರ ಚೀಟಿದಾರರಿಗೆ (ರಾಜ್ಯ) (ಪ್ರತಿ ಸದಸ್ಯರಿಗೆ) 5 ಕೆ.ಜಿ ಅಕ್ಕಿ (ಒಟ್ಟು 10 ಕೆ.ಜಿ).

ಮೇ ಹಾಗೂ ಜೂನ್ ತಿಂಗಳ ಹಂಚಿಕೆಯನ್ನು ಮೇ ತಿಂಗಳಲ್ಲಿಯೇ ಒಟ್ಟಾಗಿ ಎರಡು ಕಂತಿನಲ್ಲಿ ವಿತರಿಸಲಾಗುತ್ತಿದೆ. ಪಡಿತರ ಚೀಟಿದಾರರು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯಲ್ಲಿ ಮೇ ಮತ್ತು ಜೂನ್  ತಿಂಗಳ ಪ್ರತ್ಯೇಕವಾಗಿ ಎರಡು ಬಾರಿ ಬಯೋ ನೀಡಿ ಪಡಿತರವನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಪಡಿತರ ವಿತರಣಾ ಕಾರ್ಯಕ್ಕಾಗಿ ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಸರ್ವರ್ ಲಭ್ಯವಿರುವುದರಿಂದ ಪಡಿತರ ಚೀಟಿದಾರರು ಬಯೋ ನೀಡಿ ಪಡಿತರ ಪಡೆಯಬಹುದು. ಮೇ ಹಾಗೂ ಜೂನ್ ಮಾಹೆಯ ಎನ್.ಎಫ್.ಎಸ್. ಹಂಚಿಕೆ ಪಡೆಯಲು ಮೇ  31 ಕೊನೆಯ ದಿನ. ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದಲ್ಲಿ ಅಂತಹ ಪಡಿತರ ಚೀಟಿಯನ್ನು ರದ್ದುಪಡಿಸಲಾಗುತ್ತದೆ.

ಪಡಿತರ ವಿತರಣೆಯ ಬಗ್ಗೆ ಏನಾದರೂ ದೂರುಗಳು ಇದ್ದಲ್ಲಿ ಕೇಂದ್ರ ಸಹಾಯವಾಣಿ ಸಂಖ್ಯೆ 1967ಕ್ಕೆ ಕರೆ ಮಾಡಬಹುದು ಅಥವಾ ಹತ್ತಿರದ ಆಹಾರ ಇಲಾಖೆಯಲ್ಲಿ ಕಛೇರಿಗೆ ಭೇಟಿ ನೀಡಿ ದೂರು ನೀಡಬಹುದು. ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿದಾರರು ನ್ಯಾಯಬೆಲೆ ಅಂಗಡಿಯಲ್ಲಿ ನಿಗಧಿತ ಪ್ರಮಾಣದಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ವಿತರಣೆ ಮಾಡಬೇಕು. ಪಡಿತರ ಚೀಟಿದಾರರು ಮೇ ಮತ್ತು ಜೂನ್ 2026 ತಿಂಗಳ ಆಹಾರ ಧಾನ್ಯವನ್ನು ಉಚಿತವಾಗಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top