ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

Upayuktha
0


ಮಂಗಳೂರು: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಮಂಗಳೂರು (ಗ್ರಾಮಾಂತರ) ವ್ಯಾಪ್ತಿಯ

(1) ನಾಗರಕಟ್ಟೆ  ಮಾರ್ಪಾಡಿ ವಾರ್ಡ್ 5-ಮೂಡಬಿದ್ರೆ  

(2)ಮರಿಯಾಡಿ, iರಿಯಾಡಿ ಗ್ರಾಮ ವಾರ್ಡ್ ನಂ.1 -ಮೂಡಬಿದ್ರೆ,

(3) ಬಬ್ಬುಕಟ್ಟೆ,  ಉಳ್ಳಾಲ ನಗರಸಭೆ ವಾರ್ಡ್ ನಂ.19,

(4) ಮಾಡೂರು, ಕೋಟೆಕಾರು ಪಟ್ಟಣ ಪಂಚಾಯತ್ 03,

(5) ಮದನಿನಗರ-2, ಮುನ್ನೂರು ಗ್ರಾಮ ಉಳ್ಳಾಲನಗರಸಭೆ,

(6) ಒಂಭತ್ತುಕೆರೆ, ಉಳ್ಳಾಲನಗರ ಸಭೆ  ವಾರ್ಡ್ ನಂ.12,

(7) ಮೊಂಟೆಪದವು, ಮಂಜನಾಡಿ ಗ್ರಾಮ,

(8) ಐಕುಕೊಪ್ಪಳ, ಹರೇಕಳ ಗ್ರಾಮ,

(9) ಕಾರ್ನಾಡು, ವಾರ್ಡ್ ನಂ.9 ಕಾರ್ನಾಡು ಗ್ರಾಮ,

(10) ರಾಜರತ್ನಪುರ,  ಮೆನ್ನಬೆಟ್ಟು, ವಾರ್ಡ್ ನಂ.6 ಕಿನ್ನಿಗೋಳಿ ಗ್ರಾಮ,

(11) ತಾರಿಕಂಬಳ, ವಾರ್ಡ್ ನಂ.7 ಬಜ್ಪೆ ಗ್ರಾಮ,

(12) ಗಣೇಶತೋಟ, ಅರ್ಕುಳ ಗ್ರಾಮ ಅಡ್ಯಾರ್,

(13) ಸುಂಕದಕಟ್ಟೆ, ಕೊಳಂಬೆ ಗ್ರಾಮ,

ಒಟ್ಟು 13 ಕಂ ಕ್ರಷ್ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿ ಲಭ್ಯವಿಲ್ಲದೇ ಇದ್ದಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10 ನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಹಾಗೂ ಕಂ ಕ್ರಷ್ ಅಂಗನವಾಡಿ ಸಹಾಯಕಿ  ಹುದ್ದೆಗೆ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಸದರಿ ವಿದ್ಯಾರ್ಹತೆಯ ಅಭ್ಯರ್ಥಿಯು ಲಭ್ಯವಿಲ್ಲದಿದ್ದಲ್ಲಿ ಕನಿಷ್ಟ 7ನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಗರಿಷ್ಠ ವಯೋಮಿತಿ 35 ವರ್ಷ ಆಗಿರುತ್ತದೆ. ಅರ್ಜಿ ಸಲ್ಲಿಸಲು ಮೇ 30 ಕೊನೆಯ ದಿನ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ನಗರದ ಅಶೋಕನಗರ ಉರ್ವ ಮಾರ್ಕೆಟ್ ಕಟ್ಟಡದ 3ನೇ ಮಹಡಿಯಲ್ಲಿರುವ ಮಂಗಳೂರು (ಗ್ರಾಮಾಂತರ) ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳೂರು ಗ್ರಾಮಾಂತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top