ಹೃದಯ್ ಮಧ್ಯಮ ವರ್ಗ ದ ಹುಡುಗನಾಗಿದ್ದರಿಂದ ಆತನಿಗೆ ಶ್ರೀಮಂತಿಕೆಯ ಆಸೆ ಇದ್ದರೂ ಶ್ರೀಮಂತರ ಜೊತೆ ಗೆಳೆತನ ಬೆಳೆಸುವುದರಲ್ಲಿ ಅಷ್ಟೇನು ಆಸಕ್ತಿ ಇರಲಿಲ್ಲ.ಏಕೆಂದರೆ ಶ್ರೀಮಂತರ ಜೊತೆಗಿನ ಗೆಳೆತನ ಮುಂದೆ ಆತನಿಗೆ ನೋವು ತರುತ್ತದೆ ಎಂಬ ಭಾವನೆ ಅವನ ಮನಸ್ಸಿನಲ್ಲಿ ಆಳವಾಗಿ ಉಳಿದಿತ್ತು.
ಹಿಮಾ ಸುಳ್ಳು ಹೇಳಿದ್ದರಿಂದ ಹೃದಯ್ ಯ ಮನಸ್ಸಿನಲ್ಲಿ ಹಿಮಾ ಜೊತೆಗಿನ ಗೆಳೆತನದ ಬಗ್ಗೆ ಅನುಮಾನ ಶುರುವಾಯಿತು.ಆದರೂ.. ಹಿಮಾ ಜೊತೆಗಿನ ಗೆಳೆತನ ಮುಂದುವರೆಸುತ್ತಾ ಹೋದ ಹೃದಯ್ ಹೀಗೆ ಒಂದು ದಿನ ಆಕೆಯ ತುಂಬಾ ಹತ್ತಿರದ ಗೆಳತಿಯೊಬ್ಬಳ ಜೊತೆ ಮಾತನಾಡಲು ಶುರು ಮಾಡುತ್ತಾನೆ.ಆಕೆಯ ಹೆಸರು ಮೈತ್ರಿ.ಮೈತ್ರಿ ಒಬ್ಬ ಸಾಧಾರಣ ಮಧ್ಯಮ ವರ್ಗ ದ ಹುಡುಗಿ. ನೇರ ನುಡಿ ,ಯಾರ ಮನಸನ್ನು ನೋಯಿಸಲು ಇಷ್ಟಪಡದ ಮುಗ್ಧ ಮನಸ್ಸಿನ ಪ್ರಬುದ್ಧ ಮನಸ್ಥಿತಿಯುಳ್ಳ ಹುಡುಗಿ.ಇಡೀ ಪ್ರಪಂಚಕ್ಕೆ ಈಕೆ ಮೌನಿಯಂತೆ ಕಂಡರು.. ತನಗೆ ಹತ್ತಿರವಾದವರ ಜೊತೆ ಒಳ್ಳೆಯ ಮಾತುಗಾರ್ತಿಯೇ ಸರಿ.
ಮೊದಲೆಲ್ಲ ಸದಾ ಬೇಜಾರಿಂದ ತುಂಬಿದ್ದ ಹೃದಯ್,ಹಿಮಾ ಗೆಳೆತನದ ಜೊತೆಗೆ ಮೈತ್ರಿ ಗೆಳೆತನವನ್ನು ಬೆಳೆಸಿದ ನಂತರ ಸದಾ ಖುಷಿಯಿಂದಲೇ ತನ್ನ ದಿನಗಳನ್ನು ಕಳೆಯುತ್ತಾ ಇದ್ದ.ಆದರೂ...ತನ್ನಲ್ಲಿ ಏನೋ ಒಂದು ಸಂಶಯ. "ಹಿಮಾ ತನ್ನೊಂದಿಗೆ ಮಾತ್ರ ಇಷ್ಟು ಮಾತನಾಡುತ್ತಾ ಇದ್ದಾಳೆಯೇ ಅಥವಾ ನಾನು ಆಕೆಗೆ ಬರೀ ಮನೋರಂಜನೆಯ ವಸ್ತುವಂತೆ ಕಾಣುತ್ತಿದ್ದೇನೆಯೇ?" ಹಿಮಾಳ ಎಲ್ಲಾ ಆಗು ಹೋಗುಗಳನ್ನು ಹಾಗೂ ಆಕೆಯ ಪೂರ್ವ ಕಥೆಗಳನ್ನು ತಿಳಿದು ಕೊಳ್ಳಲು ಹೃದಯ್ ಮೈತ್ರಿ ಜೊತೆ ಪ್ರತಿ ದಿನ ಮಾತನಾಡಲು ಶುರು ಮಾಡುತ್ತಾನೆ.ಆಕೆಯ ನೇರ ನುಡಿ,ಆಕೆಯ ವ್ಯಕ್ತಿತ್ವಕ್ಕೆ ಹೃದಯ್ ಮಾರುಹೋಗುತ್ತಾನೆ.ಆದರೆ ಹೃದಯ್ ಆಕೆಯನ್ನು ಗೆಳತಿ ಎಂದೇ... ಪರಿಗಣಿಸಿ ಮಾತನಾಡುತ್ತಾ ಇರುತ್ತಾನೆ.ಮೈತ್ರಿ ಒಳ್ಳೆಯ ಹಾಡುಗಾರ್ತಿ.ಒಂದೆರಡು ಭಾರಿ ಆಕೆ ತನ್ನ ಸುಮಧುರ ಕಂಠದಿಂದ ಹಾಡಿದ ಹಾಡನ್ನು ಹೃದಯ್ ಗೆ ಪೋನ್ ನ ಮೂಲಕ ಕಳುಹಿಸುತ್ತಾಳೆ ಹಾಗೂ ಹೃದಯ್ ಆಕೆಯ ಹಾಡಿರುವ ಹಾಡುಗಳನ್ನು ಮನಸಾರೆ ಮೆಚ್ಚಿರುತ್ತಾನೆ.ಹೀಗೆ ಒಂದೆರಡು ವಾರಗಳೇ ಕಳೆದವು. ಹೃದಯ್ ಯ ಮನಸ್ಸಿನಲ್ಲಿ ಮೈತ್ರಿ ಯ ಬಗ್ಗೆ ಒಳ್ಳೆಯ ಅಭಿಪ್ರಾಯ ಹಾಗೂ ಭಾವನೆಗಳು ಮನೆಮಾಡಲು ಶುರುವಾಯಿತು.
ಹೃದಯ್ ಹಿಮಾ ಬಗ್ಗೆ ಮೈತ್ರಿ ಯ ಬಳಿ ಕೇಳಿ ತಿಳಿದುಕೊಳ್ಳುತ್ತಾನೆ -ಹಿಮಾ ಬರೀ ಹೃದಯ್ ಯ ಜೊತೆ ಮಾತ್ರವಲ್ಲ ಇನ್ನೂ 2-3 ಹುಡುಗರ ಜೊತೆಯೂ.. ಹತ್ತಿರವಾಗಿದ್ದಾಳೆ ಎಂದು.ಈ ವಿಷಯ ತಿಳಿದ ನಂತರ ಹೃದಯ್ ಯ ಮನಸ್ಸು ಚಂಚಲವಾಗುತ್ತದೆ."ಅಯ್ಯೋ ನಾನೊಬ್ಬ ಮೂರ್ಖ,ಆಕೆ ನನ್ನೊಂದಿಗೆ ಮಾತ್ರ ಇಷ್ಟು ಚೆನ್ನಾಗಿ ಲವಲವಿಕೆಯಿಂದ ಮಾತನಾಡುತ್ತಿದ್ದಾಳೆ ಅಂದುಕೊಂಡಿದ್ದೆ ಆದರೆ ಆಕೆ ನನ್ನನ್ನು ಬರೀ.. ಕಾಲಹರಣದ ವಸ್ತುವಾಗಿ ಕಂಡಲಲ್ಲ" ಎಂದು ನೊಂದುಕೊಳ್ಳುತ್ತಾನೆ.ಆದರೂ ಕೂಡ ಹಿಮಾ ಬಗ್ಗೆ ಒಂದಿಷ್ಟು ಅಭಿಪ್ರಾಯ ಬದಲಿಸದೆ ಆಕೆಯ ಜೊತೆ ಗೆಳೆತನ ಮುಂದುವರೆಸುತ್ತಾನೆ ಆದರೂ ಆಕೆಯ ಮೇಲೆ ಅನುಮಾನ ಇರುವ ಕಾರಣ ಸ್ವಲ್ಪ ಅಂತರ ಕಾಯ್ದುಕೊಳ್ಳುತ್ತಾನೆ.
ಹೀಗೆ ಒಂದು ದಿನ ಹೃದಯ್ ತನ್ನ ಹಳೆಯ ಗೆಳತಿಯೊಬ್ಬಳ ಬಳಿ ತನ್ನ ಕಥೆಯನ್ನು ವಿವರಿಸುತ್ತಾ ಇರುವಾಗ ಆತನಿಗೆ ತಿಳಿಯುತ್ತದೆ ಹಿಮಾ ಒಬ್ಬ ಶ್ರೀಮಂತ ಹುಡುಗಿಯ ಎಂದು.ಇದನ್ನು ತಿಳಿದ ಹೃದಯ್ ಈಗ ಹಿಮಾ ಜೊತೆಗಿನ ಗೆಳೆತನವನ್ನೇ ನಿಲ್ಲಿಸುವ ಅಂದಾಜು ಮಾಡುತ್ತಾನೆ.ಏಕೆಂದರೆ ಆತನಿಗೆ ಶ್ರೀಮಂತರ ಮೇಲಿರುವ ಅಭಿಪ್ರಾಯ ಅಂತದ್ದು."ಈಕೆಯ ಜೊತೆ ಗೆಳೆತನ ಮುಂದುವರೆಸುವುದು, ಈಕೆಯ ಮೇಲೆ ಭಾವನೆಗಳನ್ನು ಇಟ್ಟುಕೊಳ್ಳುವುದು ಮುಂದೆ ಒಂದು ದಿನ ಅಪಘಾತಕ್ಕೆ ದಾರಿ"ಎಂದು ಮನದಲ್ಲೇ ಯೋಚಿಸುತ್ತಾನೆ.ಪ್ರತಿ ದಿನ ಹಿಮಾ ಜೊತೆ ಮಾತನಾಡುತ್ತಿದ್ದ ಹೃದಯ್ ಈಗ ಅಪರೂಪಕ್ಕೆ ಒಮ್ಮೆ ಮಾತನಾಡುವ ಸ್ಥಿತಿಗೆ ಬರುತ್ತಾನೆ.
ನಂತರ ಮೈತ್ರಿ ಜೊತೆಗಿನ ಗೆಳೆತನ ಮುಂದುವರೆಸುತ್ತಾ ಹೋದ ಹೃದಯ್ ಗೆ ಈಗ ಮೈತ್ರಿ ಮಾತಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತಾನೆ.ಆಕೆಯ ಮಾತುಗಳಲ್ಲಿ ಪ್ರೀತಿ ಇರುವ ಸೂಚನೆಯನ್ನು
ಕಂಡು ಹೃದಯ್ ಆಕೆಯನ್ನು ನೇರವಾಗಿ ಪ್ರಶ್ನಿಸಿದ -"ನಿನ್ನ ಮಾತುಗಳನ್ನು ನೋಡಿದರೆ.. ನನ್ನ ಮೇಲೆ ಏನೋ ಭಾವನೆ ಇಟ್ಟುಕೊಂಡಂತೆ ಕಾಣುತ್ತಿದೆ".ಇದಕ್ಕೆ ಮೈತ್ರಿ "ಹೌದು!!ನನಗೆ ನಿಮ್ಮ ಮೇಲೆ ಭಾವನೆ ಇತ್ತು.!ಆದರೆ ಈಗ ನಾನು ನಿಮ್ಮ ಮೇಲಿನ ಭಾವನೆಗಳನ್ನು ತ್ಯಜಿಸಿದ್ದೇನೆ,ನನಗೆ ನನ್ನ ಮುಂದಿನ ಭವಿಷ್ಯ ಹಾಗೂ ನನ್ನ ಗುರಿ ಮುಖ್ಯ.ನಿಮ್ಮ ಮೇಲಿನ ಭಾವನೆಯನ್ನು ಮುಂದುವರೆಸುವುದರಿಂದ ನನ್ನ ಕನಸನ್ನು ನಾ ಮರೆಯಬೇಕಾಗುತ್ತದೆ ಅದಕ್ಕೆ ನಾನು ತಯಾರಿಲ್ಲ !"ಎಂದು ಹೇಳುತ್ತಾಳೆ. ಇದನ್ನು ಕೇಳಿದ ಹೃದಯ್ ಕೆಲ ಕಾಲ ಮೌನಿಯಾಗುತ್ತಾನೆ.ನಂತರ ಆಕೆಯ ಎಲ್ಲಾ ಮಾತುಗಳನ್ನು ಅರ್ಥೈಸಿಕೊಂಡು ಆಕೆಯ ಮೇಲೆ ಪ್ರೀತಿಯ ಬದಲು ಗೌರವವನ್ನು ಬೆಳೆಸಿಕೊಳ್ಳುತ್ತಾನೆ.
ಹೀಗೆ ಕೆಲ ದಿನಗಳು ಕಳೆದವು.ಒಂದು ದಿನ ಹಿಮಾಳ ಮನೆಯಲ್ಲಿ ಏನೋ ಒಂದು ಕಾರ್ಯಕ್ರಮ ಇಟ್ಟುಕೊಂಡು ಇರುತ್ತಾರೆ. ಆ ಕಾರ್ಯಕ್ರಮಕ್ಕೆ ಹೃದಯ್,ಮೈತ್ರಿ ಹಾಗೂ ಇನ್ನೂ ಹಲವರನ್ನು ಹಿಮಾ ಆಮಂತ್ರಿಸಿರುತ್ತಾಳೆ.ಹಿಮಾಳ ಜೊತೆ ಅಂತರ ಕಾಯ್ದ ಹೃದಯ್ ಆಕೆಯ ಮನೆಗೆ ಹೋಗಲು ನೂರು ಭಾರಿ ಯೋಚಿಸಿದರೂ ಆಕೆಯ ಮೇಲೆ ಇರುವ ಅಭಿಪ್ರಾಯವನ್ನು ಪರಿಗಣಿಸಿ ಆಕೆಯ ಆಮಂತ್ರಣವನ್ನು ಒಪ್ಪಿ ಆಕೆಯ ಮನೆ ಕಾರ್ಯಕ್ರಮಕ್ಕೆ ಹೋಗುತ್ತಾನೆ.
ಆಕೆಯ ಆಕೆ ಧರಿಸಿದ್ದ ಉಡುಪು,ಆಕೆಯ ಅಲಂಕಾರ,ಆಕೆಯ ಹೊಳೆಯುವ ಕಣ್ಣುಗಳು ,ಆಕೆಯ ನಗುಮುಖ ನೋಡಿ ಹೃದಯ್ ಮತ್ತೊಮ್ಮೆ ಆಕೆಗೆ ಮಾರುಹೋಗುತ್ತಾನೆ. ಆ ಕಾರ್ಯಕ್ರಮದಲ್ಲಿ ಮೈತ್ರಿ ಒಬ್ಬ ಹುಡುಗನನ್ನು ಹಿಮಾ ಜೊತೆ ಸಂಬಂಧ ಕಲ್ಪಿಸಿ ಕಾಲು ಎಳೆಯುತ್ತಾ ಇರುತ್ತಾಳೆ. ಈ ಸಂದರ್ಭದಲ್ಲಿ ಹೃದಯ್ ಯ ಮನಸ್ಸಿನಲ್ಲಿ ಏನೋ ಒಂಥರಾ ಭಾವನೆ,ಹೊಟ್ಟೆಗೆ ಬೆಂಕಿ ಇಟ್ಟಂತೆ ಭಾಸವಾಗುತ್ತಾ ಇರುತ್ತದೆ.
ತನಗೆ ನಿಜವಾಗಿಯೂ ಹಿಮಾ ಮೇಲೆ ಭಾವನೆ ಇರುವುದೇ ಹೊರತು ಮೈತ್ರಿ ಮೇಲೆ ಗೌರವ ಹಾಗೂ ಗೆಳೆತನದ ಭಾವನೆ ಅಷ್ಟೇ ಇರುವುದು ಎನ್ನುವುದು ಹೃದಯ್ ಗೆ ಈಗ ಅರಿವಿಗೆ ಬರುತ್ತದೆ.ಆದರೆ ಈಗಾಗಲೇ ಹಿಮಾಳನ್ನು ದೂರವಿಟ್ಟಿರುವ ವಿಷಯ ಮೈತ್ರಿಯ ಬಳಿ ಹಾಗೂ ಇನ್ನೂ ಕೆಲವು ಗೆಳೆಯರ ಬಳಿಯೂ ಹೇಳಿಕೊಂಡಿರುವ ಕಾರಣ ಈಗ ಪುನಃ ಆಕೆಯ ಜೊತೆ ಒಡನಾಟ ಬೆಳೆಸಿಕೊಂಡರೆ ಒಂದಷ್ಟು ಜನ ನನ್ನ ಬಗ್ಗೆ ತಪ್ಪಾಗಿ ಅಂದುಕೊಳ್ಳುತ್ತಾರೆ ಹಾಗೂ ಈ ಎಲ್ಲಾ ವಿಷಯವನ್ನು ಮನಬಿಚ್ಚಿ ಹಿಮಾ ಬಳಿ ಹೇಳಿಕೊಂಡರೆ!!ತನ್ನ ಶ್ರೀಮಂತಿಕೆಯನ್ನು ಕಂಡು ಹೃದಯ್ ಈಗ ತನಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾನೆ ಎನ್ನುವ ತಪ್ಪು ಕಲ್ಪನೆ ಆಕೆಯ ಮನಸ್ಸಿನಲ್ಲಿ ಮೂಡುತ್ತದೆ ಎಂದು ಹೃದಯ್ ಚಿಂತೆಗೆ ಒಳಗಾಗುತ್ತಾನೆ.
ಇಷ್ಟೆಲ್ಲಾ ಚಿಂತನೆಗಳ ನಡುವೆ ಹೃದಯ್ ಯ ಮುಂದಿನ ನಡೆ ?..(ಮುಂದುವರೆಯುವುದು.....)
-ಈಶಕೃಷ್ಣ
ಡೇಟಾ ಸೈನ್ ವಿಭಾಗ
ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

