ಬೆಂಗಳೂರು: ಅಧಿಕ ಮಾಸದ ಪ್ರವಚನ ಮಾಲಿಕೆ

Upayuktha
0

ಬೆಂಗಳೂರು: ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ಮೇ 17 ರಿಂದ ಜೂನ್ 14ರ ವರೆಗೆ ಪ್ರತಿದಿನ ಸಂಜೆ 6-00ಕ್ಕೆ ವಿವಿಧ ಪಂಡಿತರುಗಳಿಂದ ಧಾರ್ಮಿಕ ಪ್ರವಚನ ಮಾಲಿಕೆ ಹಮ್ಮಿಕೊಳ್ಳಲಾಗಿದೆ.


ಕಾರ್ಯಕ್ರಮಗಳು : ಮೇ 17ರಂದು ಉದ್ಘಾಟನೆ, 18 ರಿಂದ 24- ಕಂಬಾಲೂರು ಶ್ರೀವತ್ಸಾಚಾರ್ಯರಿಂದ "ಅಧಿಕ ಮಾಸ ಮಹಾತ್ಮೆ", ಮೇ 25 ರಿಂದ 31- ಗುರು ಪವನಾಚಾರ್ಯರಿಂದ "ಶ್ರೀಮದ್ಭಾಗವತ" (ಪ್ರಥಮ ಸ್ಕಂದದಿಂದ ಸಪ್ತಮ ಸ್ಕಂದ), ಜೂನ್ 1 ರಿಂದ 7-ಡಾ|| ಕೃಷ್ಣಾಚಾರ್ ಕೆಂಪದಾಳಹಳ್ಳಿ ಇವರಿಂದ "ಶ್ರೀಮದ್ಭಾಗವತ" (ಅಷ್ಟಮ ಸ್ಕಂದದಿಂದ ದ್ವಾದಶ ಸ್ಕಂದ), ಜೂನ್ 8 ರಿಂದ 14- ವಿಜಯೀಂದ್ರಾಚಾರ್ ಪಸಗಿ ಇವರಿಂದ "ಹರಿದಾಸರ ಕೀರ್ತನೆಗಳಲ್ಲಿ ಜ್ಞಾನ-ಭಕ್ತಿ-ವೈರಾಗ್ಯ" ವಿಷಯವಾಗಿ ಧಾರ್ಮಿಕ ಪ್ರವಚನಗಳು ಜರುಗಲಿವೆ.


ವಿಶೇಷ ಕಾರ್ಯಕ್ರಮಗಳು : ಮೇ 24, ಭಾನುವಾರ ಸಂಜೆ 5-30ಕ್ಕೆ "ಸಾಮೂಹಿಕ ದುರ್ಗಾ ನಮಸ್ಕಾರ", ಜೂನ್ 11, ಗುರುವಾರ ಸಂಜೆ 5-30ಕ್ಕೆ "ಹರಿದಾಸರುಗಳಿಂದ ರಚಿಸಲ್ಪಟ್ಟ 33 ಹಾಡುಗಳ ಗಾಯನ" ಹಾಗೂ "ಹರಿವಾಣ ಸೇವೆ", ಜೂನ್ 14, ಭಾನುವಾರ "ಸರ್ವ ಸಮರ್ಪಣೋತ್ಸವ", "ನರಸಿಂಹ ಮಹಾ ಮಂತ್ರ ಹೋಮ" ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top