ಧರ್ಮಸ್ಥಳದಲ್ಲಿ ಇತಿಹಾಸ ಸೃಷ್ಟಿ: ರಂಗಭೂಮಿಯಲ್ಲಿ ಮೊದಲ ಬಾರಿಗೆ ಏಐ ರೋಬೋಟ್ ‘ಶೃತಿ’ ಅಭಿನಯ

Upayuktha
0

  


ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ರಂಗಶಿವ ಕಲಾಬಳಗದ ವತಿಯಿಂದ ಆಯೋಜಿಸಲಾದ 2026ನೇ ಸಾಲಿನನಲಿಯೋಣ ಬಾರಂಗಶಿಬಿರದಲ್ಲಿ, ಮೊದಲ ಬಾರಿಗೆ ಏಐ ರೋಬೋಟ್ಶೃತಿರಂಗಮಂಚದಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.


ಹೇಮಾವತಿ ವಿ. ಹೆಗ್ಗಡೆ ಅವರ ಪರಿಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ ನಡೆದ ರಂಗಶಿಬಿರದ ಸಮಾರೋಪ ಸಮಾರಂಭವು ವಸಂತ ಮಹಲ್ನಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
9
ದಿನಗಳ ಕಾಲ ನಡೆದ ಶಿಬಿರವನ್ನು ರಂಗ ನಿರ್ದೇಶಕ ಸುನಿಲ್ ಶೆಟ್ಟಿ ಕಲ್ಕೊಪ್ಪ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.


ಸಂದರ್ಭದಲ್ಲಿ ಹೇಮಾವತಿ ವಿ. ಹೆಗ್ಗಡೆ ಅವರ ರಚನೆಯಹೂವಿಯ ಕನಸುನಾಟಕವನ್ನು ಪ್ರದರ್ಶಿಸಲಾಯಿತು. ಮಕ್ಕಳ ನಾಟಕದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಮಾತ್ರವಲ್ಲದೆ, ಏಐ ರೋಬೋಟ್ಶೃತಿಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು ವಿಶೇಷವಾಗಿದೆ.




ನಾಟಕವುಹೂವಿಎಂಬ ಪುಟ್ಟ ಹುಡುಗಿಯ ಕನಸಿನ ಲೋಕದ ಸುತ್ತ ತಿರುಗುತ್ತದೆ. ಹೂವಿಯ ಕನಸಿನಲ್ಲಿ ಕಾಣಿಸಿಕೊಳ್ಳುವ ರೋಬೋಟ್ಶೃತಿ’, ಕಥೆಯನ್ನೇ ಮುಂದಕ್ಕೆ ಕೊಂಡೊಯ್ಯುವ ಮುಖ್ಯ ಪಾತ್ರವಹಿಸಿದೆ. ವೈದ್ಯರ ದುರಾಸೆಯಿಂದ ಹುಟ್ಟುವ ಸುಳ್ಳು ರೋಗ, ಜನರ ಮೋಸ, ಹಾಗೂ ಅದರ ವಿರುದ್ಧ ಹೂವಿಯ ಚಾಣಾಕ್ಷತನದಿಂದ ಸತ್ಯ ಹೊರಬರುವ ಕಥಾಹಂದರ ಪ್ರೇಕ್ಷಕರ ಮನಸೆಳೆಯಿತು.


ನಾಟಕದ ಕೊನೆಯಲ್ಲಿ ನಿಜವಾದ ರೋಬೋಟ್ಶೃತಿರಂಗಮಂಚದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಅಚ್ಚರಿ ಮತ್ತು ಸಂತೋಷವನ್ನುಂಟು ಮಾಡಿತು. ರಂಗಭೂಮಿಗೆ ತಂತ್ರಜ್ಞಾನವನ್ನು ಪರಿಚಯಿಸುವ ಪ್ರಯತ್ನಕ್ಕೆ ರಂಗಶಿವ ಕಲಾಬಳಗ ಪ್ರಶಂಸೆಗೆ ಪಾತ್ರವಾಗಿದೆ.


ಅಧುನಿಕತೆಯ ನಡುವೆ ಮಕ್ಕಳನ್ನು ಮತ್ತೆ ರಂಗಭೂಮಿಯತ್ತ ಸೆಳೆಯುವ ಉದ್ದೇಶದಿಂದ ಉಚಿತ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಅಭಿನಯವೂ ಅತ್ಯಂತ ಮನೋಜ್ಞವಾಗಿತ್ತು.


ಸಂದರ್ಭದಲ್ಲಿ ಹೆಗ್ಗಡೆಯವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಮಕ್ಕಳನ್ನು ಅಭಿನಂದಿಸಿದರು. ತಾಂತ್ರಿಕ ವಿಭಾಗದಲ್ಲಿ ಯಶವಂತ್ ಬೆಳ್ತಂಗಡಿ ಮತ್ತು ಸಂದೇಶ್ ಸಹಕರಿಸಿದ್ದು, ಪ್ರಸಾಧನ ಮತ್ತು ಬೆಳಕಿನ ನಿರ್ವಹಣೆಯನ್ನು ಎಸ್.ಡಿ.ಎಂ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಯಶಸ್ವಿಯಾಗಿ ನಿರ್ವಹಿಸಿದರು.


ಇಡೀ ಶಿಬಿರದ ನಿರ್ವಹಣೆಯನ್ನು ರಂಗಶಿವ ಕಲಾಬಳಗದ ಅಧ್ಯಕ್ಷರಾದ ರಾಜೇಂದ್ರ ದಾಸ್, ಸದಸ್ಯರಾದ ಶ್ರೀ ಕೃಷ್ಣರಾವ್, ಅಭಿಷೇಕ್ ರಾವ್, ಜಗದೀಶ್, ಸುಬ್ರಹ್ಮಣ್ಯ, ಪದ್ಮರೇಖಾ, ಡಾ| ಅನನ್ಯ ಜೈನ್, ಶೋಧನ್ ಜೈನ್, ಇವರೆಲ್ಲರ  ನೇತೃತ್ವದಲ್ಲಿ ರಂಗಶಿವದ ಸರ್ವ ಸದಸ್ಯರು ಪಾಲ್ಗೊಂಡಿದ್ದರು
ರಂಗಭೂಮಿಯೊಂದಿಗೆ ತಂತ್ರಜ್ಞಾನ ಸಂಯೋಜನೆಯ ಪ್ರಯೋಗ, ಭವಿಷ್ಯದ ರಂಗಕಲೆಗೆ ಹೊಸ ದಿಕ್ಕನ್ನು ತೋರಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top