ಹಿರಿಯರ ಮಾರ್ಗದರ್ಶನ ಕಿರಿಯರ ಅನುಸಂಧಾನ ಕಲೆಗೆ ಪೂರಕ: ಡಾ. ಜೋಷಿ

Upayuktha
0


ಮಂಗಳೂರು: "ಯಕ್ಷಗಾನಕ್ಕೆ ಹಿರಿಯರ ಕೊಡುಗೆ ಅಪಾರ ಮತ್ತು ಅನುಸರಣೀಯ. ಉತ್ತಮ ಕಲಾವಿದರ ನಡೆ- ನುಡಿಯೂ ಅನುಸರಣೀಯ. ಕಿರಿಯರಿಗೆ ತಮ್ಮನ್ನು ತಾವು ಅನುಸಂಧಾನ ಮಾಡಿಕೊಳ್ಳಲು ಅನುಕೂಲವೂ ಆಗುತ್ತದೆ. ಅನೇಕ ಆಕರ ಗ್ರಂಥಗಳೂ ಲಭ್ಯ. ಆ ದಾರಿಯಲ್ಲಿ ನಡೆದರೆ ಕಲೆ ಇನ್ನಷ್ಟು ಬೆಳಗುತ್ತದೆ" ಎಂದು ಯಕ್ಷಗಾನ ವಿದ್ವಾಂಸ ಡಾ. ಮಾಳ ಪ್ರಭಾಕರ ಜೋಷಿಯವರು  ಹೇಳಿದರು. ಅವರು ಶ್ರೀ ಕ್ಷೇತ್ರ ಕದ್ರಿಯಲ್ಲಿ ನಡೆಯುತ್ತಿರುವ ಸರಯೂ ಅಷ್ಠಾಹದಲ್ಲಿ ಬಡಗಿನ ಬಣ್ಣದ ಕಲಾವಿದ ಸಕ್ಕಟ್ಟು ಲಕ್ಷೀ ನಾರಾಯಣಯ್ಯರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಉತ್ತಮ ಹಿಮ್ಮೇಳ ಕಲಾವಿದ ಕಟೀಲು ಮುರಳೀಧರ, ಭಟ್ ರವರನ್ನು ಸನ್ಮಾನಿಸಲಾಯಿತು. ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ ಕಲಾವಿದರ ಅಭಿನಂದನೆ ಮಾಡಿದರು. ಪೂರ್ಣಿಮಾ ಪ್ರಭಾಕರ ರಾವ್ ಸನ್ಮಾನ ಪತ್ರ ವಾಚಿಸಿದರು.


ಹಿರಿಯ ಕಲಾವಿದ ಪದ್ಯಾಣ ಶಂಕರನಾರಾಯಣ ಭಟ್, ವನಜ ಎಸ್. ಭಟ್, ನಿವೃತ್ತ ಅಧ್ಯಾಪಕ ಗೋಪಾಲಕೃಷ್ಣ ಭಟ್ ದೇವ ಕಾನ, ಶ್ರೀಮತಿ ವಿದ್ಯಾ ಶರ್ಮಾ, ಸುಧಾಕರ ರಾವ್ ಪೇಜಾವರ ಅತಿಥಿಗಳಾಗಿದ್ದರು. ಸರಯೂ ಅಧ್ಯಕ್ಷ ಮಧುಸೂದನ ಅಲೆವೂರಾಯ ವಂದಿಸಿದರು. ಕು. ನಿತ್ಯಶ್ರೀ ಪೂಜಾರಿ ಕಲಾವಿದರನ್ನು ಪರಿಚಯಿಸಿದರು. ಬಳಿಕ ಸರಯೂ ತಂಡ ಹಾಗೂ ಮೇಳದ ಕಲಾವಿದರಿಂದ ಮೀನಾಕ್ಷಿ ಕಲ್ಯಾಣ ಎಂಬ ಆಖ್ಯಾನ ಜರಗಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top