ಕಲೆಗೆ ಮಾರು ಹೋಗದವರಿಲ್ಲ: ವೆಂಕಟ್ರಮಣ ಆಸ್ರಣ್ಣ

Upayuktha
0



ಮಂಗಳೂರು: ಕಲೆಗಳಲ್ಲೆವೂ ಸಂಪದ್ಭರಿತವಾಗಿದೆ. ಯಕ್ಷಗಾನವೂ ಸರ್ವಾಂಗ ಸುಂದರವಾಗಿ ಬಹುಶ್ರುತ ವಿದ್ವಾಂಸರನ್ನೂ, ಪಾಮರರನ್ನೂ ಆಕರ್ಷಿಸುತ್ತದೆ. ಮಾತೆ ಕಟೀಲೇಶ್ವರಿಯೂ ಕಲಾಪ್ರಿಯೆ ಹಾಗೆಯೇ ಅಲ್ಲಿಯೂ ನಿತ್ಯ- ನಿರಂತರವಾಗಿ ಯಕ್ಷಗಾನ ಸೇವೆ ನಡೆಯುತ್ತಲೇ ಇರುತ್ತವೆ. ಕದ್ರಿಯಲ್ಲೂ ನಟನ ಪ್ರಿಯ ಮಂಜುನಾಥನ ಸನ್ನಿಧಿಯಲ್ಲಿ ಸರಯೂ ತನ್ನ ಅಷ್ಠಾಹವನ್ನು ನಡೆಸುತ್ತಾ ಅನೇಕ ಯುವ ಕಲಾವಿದರಿಗೆ ವೇದಿಕೆ ಒದಗಿಸಿ ಅವರ ಪ್ರತಿಭೆ ಅನಾವರಣಕ್ಕೆ ಅವಕಾಶ ನೀಡುತ್ತಿದೆ. ಈ ಮೂಲಕ ಕಲೆ ಯಕ್ಷವಾಹಿನಿಯಾಗಿ ಹರಿಯಲು ಅವಕಾಶವಾಗಿದೆ. ಈ ಪರಂಪರೆ ಮುಂದುವರಿಯಲಿ" ಎಂದು ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಶ್ರೀ ವೆಂಕಟ್ರಮಣ ಆಸ್ರಣ್ಣರು ನುಡಿದರು.


ಅವರು ಕದ್ರಿಯಲ್ಲಿ ನಡೆಯುತ್ತಿರುವ ಸರಯೂ ಯಕ್ಷ ವೃಂದದ ಅಷ್ಠಾಹದಲ್ಲಿ ಶುಭಾಶೀರ್ವಚನ ನೀಡಿದರು.


ಈ ಸಂದರ್ಭದಲ್ಲಿ ಕಟೀಲು ಮೇಳದ ಪುಂಡು ವೇಷಧಾರಿ ರವಿ ಮುಂಡಾಜೆಯವರನ್ನು" ಯಕ್ಷ ಸರಯೂ" ಬಿರುದಿತ್ತು ಸನ್ಮಾನಿಸಲಾಯಿತು. 

ಕಾವ್ಯಾ ಸನ್ಮಾನ ಪತ್ರ ವಾಚಿಸಿದರು. ಸಿವಿಲ್ ಇಂಜಿನಿಯರ್ ಗೌತಮ್ ಭಂಡಾರಿ ಶುಭ ಹಾರೈಸಿದರು. ಕು. ಕೃತಿ ದೇವಾಡಿಗ ವಂದಿಸಿದರು. ನಿಹಾಲ್ ಪೂಜಾರಿ ನಿರ್ವಹಿಸಿದರು. ಸರಯೂ ಹಾಗೂ ವೃತ್ತಿಪರ ಕಲಾವಿದರ ಕೂಡುವಿಕೆಯಿಂದ "ಕಚ- ದೇವಯಾನಿ" ಪ್ರಸಂಗ ಪ್ರದರ್ಶನಗೊಂಡಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top